ಅಭಿವೃದ್ಧಿ ಕಾಮಗಾರಿಗಳ ಲೆಕ್ಕಕೊಡಿ

Contributed bysri.vknews@gmail.com|Vijaya Karnataka

ಶಾಸಕ ಕೆ.ವೈ.ನಂಜೇಗೌಡ ಅವರು ಪ್ರತಿಪಕ್ಷದವರಿಗೆ ಅಭಿವೃದ್ಧಿ ಕಾಮಗಾರಿಗಳ ಲೆಕ್ಕ ಕೊಡುವಂತೆ ಸವಾಲು ಹಾಕಿದ್ದಾರೆ. ಮಾಲೂರು ತಾಲೂಕಿನಾದ್ಯಂತ ತಮ್ಮ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರು ಮಾಹಿತಿ ನೀಡಲಿದ್ದಾರೆ. ಎಚ್‌.ಹೊಸಕೋಟೆ ಗ್ರಾಮದಲ್ಲಿ ೨೧ ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಹಲವು ಕಡೆಗಳಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

focus on development mla ky nanjegowdas challenge

ಪ್ರತಿಪಕ್ಷದ ಮುಖಂಡರಿಗೆ ಶಾಸಕ ಕೆ.ವೈ.ನಂಜೇಗೌಡ ಸವಾಲು

ವಿಕ ಸುದ್ದಿಲೋಕ ಲಕ್ಕೂರು

ಮಾಲೂರು ತಾಲೂಕಿನಾದ್ಯಂತ ನನ್ನ ಅವಧಿಯಲ್ಲಿಶ್ವಾಶತವಾಗಿರುವಂತಹ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಿದ್ದು, ನನ್ನ ಅವಧಿಯಲ್ಲಿನಡೆದಿರುವ ಅಭಿವೃದ್ಧಿಯ ಬಗ್ಗೆ ಲೆಕ್ಕ ಕೊಡುತ್ತೇನೆ. ಪ್ರತಿಪಕ್ಷದವರು ಜನರ ಮಧ್ಯೆ ಕುಳಿತು ನಿಮ್ಮ ಅವಧಿಯಲ್ಲಿಯಾವ ಯಾವ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಿದ್ದೀರಿ ಎಂಬುದರ ಬಗ್ಗೆ ಲೆಕ್ಕ ಕೊಡಿ ಎಂದು ಶಾಸಕ ಕೆ.ವೈ.ನಂಜೇಗೌಡ ಪ್ರತಿಪಕ್ಷದವರಿಗೆ ಸವಾಲು ಹಾಕಿದರು.

ಎಚ್ .ಹೊಸಕೋಟೆ ಗ್ರಾಮದ ಸಮೀಪ ಹಿಂದುಳಿದ ವರ್ಗಗಳ ಇಲಾಖೆಯ ವತಿಯಿಂದ 21 ಕೋಟಿ ರೂ.ಗಳ ವೆಚ್ಚದಲ್ಲಿವಸತಿ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸುಮಾರು 10 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಈ ಜಾಗದಲ್ಲಿವಸತಿ ನಿಲಯ ನಿರ್ಮಾಣದ ಜತೆಗೆ ಕಾಲೇಜು ನಿರ್ಮಾಣಕ್ಕೆ ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದೆ. ಸರಕಾರದಿಂದ ಹೆಚ್ಚಿನ ರೀತಿಯಲ್ಲಿವಸತಿ ಶಾಲೆಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಮಾಲೂರು ನಗರದಲ್ಲಿವಾಲ್ಮೀಕಿ ವಸತಿ ಶಾಲೆ ಉದ್ಟಾಟನೆಗೆ ಸಿದ್ದಗೊಂಡಿದೆ. ನಗರದ ಪ್ರಥಮ ಧರ್ಜೆ ಕಾಲೇಜು ಪಕ್ಕದಲ್ಲಿಮತ್ತೊಂದು ವಸತಿ ಶಾಲೆ ನಿರ್ಮಾಣಕ್ಕೆ ಜಾಗವನ್ನು ನೀಡಲಾಗಿದೆ. ಈಗಾಗಲೇ ಮಾಸ್ತಿ ಗ್ರಾಮದಲ್ಲಿ25 ಕೋಟಿ ವೆಚ್ಚದಲ್ಲಿಮಾಸ್ತಿ ವೆಂಕಟೇಶ್ ಅಯ್ಯಂಗಾರ್ ವಸತಿ ಶಾಲೆ ಕಟ್ಟಡ ಪೂರ್ಣಗೊಂಡಿದೆ. ಮಾಸ್ತಿ ಗ್ರಾಮದಲ್ಲಿಈ ಹಿಂದೆ ಪ್ರಾರಂಭಗೊಂಡಿದ್ದ ಅಂಬೇಡ್ಕರ್ ವಸತಿ ಶಾಲೆ ಅರ್ಧಕ್ಕೆ ನಿಂತಿದ್ದು, ಪ್ರಸ್ತುತ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿದೆ. ಇನ್ನೂ ಲಕ್ಕೂರು ಹಾಗೂ ಚಿಕ್ಕತಿರುಪತಿ ಗ್ರಾಮದಲ್ಲಿನೂತನವಾಗಿ ವಸತಿ ಶಾಲೆಗಳನ್ನು ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕಾರ್ಮಿಕ ಇಲಾಖೆಯ ವತಿಯಿಂದ 40 ಕೋಟಿ ವೆಚ್ಚದಲ್ಲಿಟೇಕಲ್ ಗ್ರಾಮದಲ್ಲಿ8 ಎಕರೆ ಜಾಗದಲ್ಲಿವಸತಿ ಶಾಲೆ ನಿರ್ಮಿಸಲು ಈಗಾಗಲೇ ಟೆಂಡರ್ ಪೂರ್ಣಗೊಂಡಿದೆ. ಸರಕಾರದ ಅನುದಾನ ಹಾಗೂ ಸಿಎಸ್ ಆರ್ ಅನುದಾನಗಳಲ್ಲಿಸರಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಹಲವು ವರ್ಷಗಳಿಂದ ನಗರದಲ್ಲಿಬಾಡಿಗೆ ಕಟ್ಟಡದಲ್ಲಿವಸತಿ ಶಾಲೆ ನಡೆಯುತ್ತಿತ್ತು. ಪ್ರಸ್ತುತ ಈ ಭಾಗದಲ್ಲಿವಸತಿ ಶಾಲೆ ನಿರ್ಮಾಣದಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗವಾಗಲಿದೆ. ಸರಕಾರಿ ಶಾಲೆ ಹಾಗೂ ವಸತಿ ಶಾಲೆಗಳಿಗೆ ಬಹುತೇಕ ಮಂದಿ ಬಡ ಕುಟುಂಬದ ಮಕ್ಕಳು ಬರುತ್ತಾರೆ. ಸರಕಾರಿ ಶಾಲೆ ಹಾಗೂ ವಸತಿ ಶಾಲೆಗಳ ಸರ್ವಾಂಗೀಣ ಅಭಿವೃದ್ದಿಗೆ ಸರಕಾರ ಹೆಚ್ಚಿನ ಒತ್ತನ್ನು ನೀಡುವುದರ ಜತೆಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ. ಸರಕಾರಿ ಶಾಲೆ ಹಾಗೂ ವಸತಿ ಶಾಲೆಗಳಿಗೆ ಹೆಚ್ಚಿನ ಅವಕಾಶ ಮಾಡಿಕೊಡುವುದರಿಂದ ಸಾಮಾನ್ಯ ವರ್ಗದ ಮಕ್ಕಳು, ಬಡವರ ಮಕ್ಕಳಿಗೆ ಅನುಕೂಲವಾಗಲಿದೆ. ನಾನು ಸಹ ಸರಕಾರಿ ಶಾಲೆ ಹಾಗೂ ವಸತಿ ಶಾಲೆಗಳ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಸಚಿವ ಮಧು ಬಂಗಾರಪ್ಪ ಅವರು ಬಹಳ ಆಶಕ್ತಿಯಿಂದ ಇಲಾಖೆಯನ್ನು ಮುನ್ನಡೆಸುತ್ತಿದ್ದಾರೆ. ಸಾಕಷ್ಟು ಬದಲಾವಣೆ ತಂದ ಪರಿಣಾಮ ದ್ವಿತೀಯ ಪಿಯುಸಿಯ ಫಲಿತಾಂಶ ಸಾಕಷ್ಟು ಏರಿಕೆಯಾಗಿದೆ ಎಂದರು.

ಈ ಸಂದರ್ಭದಲ್ಲಿತಾಪಂ ಇಒ ಕೃಷ್ಣಪ್ಪ, ಎಂ.ವಿಜಯ ನರಸಿಂಹ, ಎಂ.ಆಂಜೀನಪ್ಪ, ಹನುಮಂತಪ್ಪ, ಅಂಬಿಕಾ, ಪಿ.ನಾರಾಯಣಸ್ವಾಮಿ, ಬಾಬು, ರಾಜೇಶ್ವರಿ ಸುಬ್ರಮಣಿ, ವೆಂಕಟೇಶ್ ರೆಡ್ಡಿ, ಬಾಬು, ಮುನಿರಾಜ್ , ಅಂಬರೀಶ್ , ಮಂಜುನಾಥ್ , ಉಮೇಶ್ , ಎಲ್ .ವಿ.ರಾಜೇಶ್ , ಪಿಡಿಒ ಆನಂದ್ , ವಿ.ಮುನಿಯಪ್ಪ ಇನ್ನಿತರರು ಹಾಜರಿದ್ದರು.

10 ಲಕ್ಕೂರು ಪೋಟೊ 1. ಮಾಲೂರು ತಾಲೂಕಿನ ಎಚ್ .ಹೊಸಕೋಟೆ ಗ್ರಾಮದ ಸಮೀಪ ಹಿಂದುಳಿದ ವರ್ಗಗಳ ಇಲಾಖೆಯ ವತಿಯಿಂದ 21 ಕೋಟಿ ರೂ.ಗಳ ವೆಚ್ಚದಲ್ಲಿವಸತಿ ಶಾಲೆ ನಿರ್ಮಾಣಕ್ಕೆ ಶಾಸಕ ಕೆ.ವೈ.ನಂಜೇಗೌಡ ಭೂಮಿ ಪೂಜೆ ನೆರವೇರಿಸಿದರು.