ಅರಣ್ಯದಂಚಿನ ಜನರಿಗೆ ಸಾಮಾಜಿಕ ನ್ಯಾಯಕ್ಕೆ ಪೂರಕ | ಅರಣ್ಯ ರಕ್ಷಣೆಗೂ ಅನುಕೂಲ
ಗುರುದತ್ತ ಭಟ್ ಹಾವೇರಿ
ಜ್ಠ್ಟ್ಠdaಠಿಠಿa.ಚಿhaಠಿಃಠಿಜಿಞಛಿsಟ್ಛಜ್ಞಿdಜಿa.್ಚಟಞ
ರಾಜ್ಯದಲ್ಲಿಹಾವು ಕಡಿತ ಪ್ರಕರಣಗಳಲ್ಲಿ ನೀಡುತ್ತಿರುವ ನಗದುರಹಿತ ಚಿಕಿತ್ಸೆ ಯೋಜನೆಯನ್ನು ವನ್ಯಜೀವಿ ದಾಳಿಗೆ ತುತ್ತಾದವರಿಗೂ ವಿಸ್ತರಿಸಬೇಕು ಎಂಬ ಕೂಗು ಗಟ್ಟಿಯಾಗುತ್ತಿದೆ. ವನ್ಯಜೀವಿ ಸಂರಕ್ಷಣಾವಾದಿಗಳು, ಅರಣ್ಯದಂಚಿನ ಗ್ರಾಮಸ್ಥರು ಈ ಬಗ್ಗೆ ಧ್ವನಿ ಎತ್ತಿದ್ದಾರೆ.
ಅರಣ್ಯದಂಚಿನ ಗ್ರಾಮಗಳಲ್ಲಿಇತ್ತೀಚಿನ ವರ್ಷಗಳಲ್ಲಿಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ಈ ರೀತಿಯ ಘಟನೆಗಳಲ್ಲಿಗಾಯಗೊಳ್ಳುವವರು ಸಾಮಾನ್ಯವಾಗಿ ದಿನಗೂಲಿ ಕಾರ್ಮಿಕರು, ರೈತರು ಹಾಗೂ ಅರಣ್ಯಾಧಾರಿತ ಜೀವನ ನಡೆಸುವ ಬಡವರ್ಗದವರೇ ಹೆಚ್ಚು. ಅವರಿಗೆ ತಕ್ಷಣದ ಚಿಕಿತ್ಸೆಗಾಗಿ ಹಣ ಹೊಂದಿಸುವುದು ಸವಾಲಾಗುತ್ತಿದೆ. ಗಾಯಾಳುಗಳಿಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುತ್ತಿದ್ದರೂ ಅದು ಚಿಕಿತ್ಸೆಯ ನಂತರ ಲಭ್ಯವಾಗುತ್ತವೆ. ಆದರೆ ಆಸ್ಪತ್ರೆ ದಾಖಲಾತಿ, ಶಸ್ತ್ರ ಚಿಕಿತ್ಸೆ, ಐಸಿಯು ಚಿಕಿತ್ಸೆ ಹಾಗೂ ಔಷಧಗಳ ಖರ್ಚುಗಳನ್ನು ಆ ಕ್ಷಣದಲ್ಲಿಭರಿಸುವುದು ಸಂತ್ರಸ್ತ ಕುಟುಂಬಗಳಿಗೆ ಭಾರವಾಗುತ್ತಿದೆ. ಹಣಕಾಸಿನ ಕೊರತೆ ಹಾಗೂ ಸಾರಿಗೆ ಸಮಸ್ಯೆಯಿಂದ ಚಿಕಿತ್ಸೆ ವಿಳಂಬವಾಗಿ ಜೀವಹಾನಿಯೂ ಸಂಭವಿಸುತ್ತಿದೆ. ನಗದುರಹಿತ ಚಿಕಿತ್ಸೆ ಯೋಜನೆ ಜಾರಿಗೆ ಬಂದರೆ ಈ ಆರ್ಥಿಕ ಭಾರ ತಗ್ಗಲಿದೆ ಎಂಬುದು ಅರಣ್ಯದಂಚಿನ ಗ್ರಾಮಸ್ಥರ ಪ್ರತಿಪಾದನೆ.
ಪ್ರತಿ ವಷÜರ್ ಪ್ರಕರಣಗಳ ಏರಿಕೆ
ರಾಜ್ಯದಲ್ಲಿಪ್ರತಿ ವರ್ಷ ಕಾಡು ಪ್ರಾಣಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ವಿಶೇಷÜವಾಗಿ ಆನೆ, ಕರಡಿ, ಹುಲಿ, ಚಿರತೆ ದಾಳಿಗಳು ಗ್ರಾಮೀಣ ಪ್ರದೇಶಗಳಲ್ಲಿಆತಂಕ ಸೃಷ್ಟಿಸುತ್ತಿವೆ. ಗಾಯಗೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದರ ಜತೆಗೆ ಸಾವಿನ ಪ್ರಮಾಣವೂ ಏರಿಕೆಯಾಗುತ್ತಿದೆ.
ಯೋಜನೆ ವಿಸ್ತರಣೆಗೆ ಆಗ್ರಹ
2024-25ರ ಸಾಲಿನಲ್ಲಿರಾಜ್ಯದಲ್ಲಿ14 ಸಾವಿರಕ್ಕೂ ಹೆಚ್ಚು ಹಾವು ಕಡಿತ ಸಂಭವಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಯಲ್ಲಿನಗದುರಹಿತ ಚಿಕಿತ್ಸೆ ಯೋಜನೆಯನ್ನು 2025ರ ನವೆಂಬರ್ ನಲ್ಲಿಜಾರಿಗೆ ತಂದಿದೆ. ವನ್ಯಜೀವಿ ದಾಳಿಗೆ ಒಳಗಾಗುವ ಪ್ರಕರಣಗಳೂ ಇಷ್ಟೇ ಗಂಭೀರ ಸ್ವರೂಪದ್ದಾಗಿರುವುದಲ್ಲದೇ ಹೆಚ್ಚಾಗಿ ಬಡವರೇ ಬಲಿಯಾಗುವುದರಿಂದ ನಗದುರಹಿತ ಚಿಕಿತ್ಸೆ ಯೋಜನೆಯನ್ನು ವಿಸ್ತರಣೆ ಮಾಡಬೇಕು ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವೈಲ್ಡ್ ಲೈಫ್ ವಾರ್ಡನ್ ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಬಾಕ್ಸ್
ವನ್ಯಜೀವಿ ಸಂರಕ್ಷಣೆಗೂ ಸಹಕಾರಿ
ವನ್ಯಜೀವಿ ದಾಳಿ ಪ್ರಕರಣಗಳಲ್ಲಿಪ್ರಾಣ ಕಳೆದುಕೊಳ್ಳುವವರ ಅಥವಾ ಅಂಗವೈಕಲ್ಯಕ್ಕೆ ಒಳಗಾಗುವವರ ಕುಟುಂಬ ಆರ್ಥಿಕ ಮತ್ತು ಭಾವನಾತ್ಮಕ ಹೊಡೆತದಿಂದ ವನ್ಯಜೀವಿಗಳ ಮೇಲೆ ಶಾಶ್ವತವಾಗಿ ವೈರತ್ವದ ಭಾವನೆ ಹೊಂದುವ ಸಾಧ್ಯತೆ ಇದೆ. ವನ್ಯಜೀವಿಗಳ ಮತ್ತು ಅರಣ್ಯ ರಕ್ಷಣೆ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಗಾಯಾಳುವಿಗೆ ಉತ್ತಮ ಆಸ್ಪತ್ರೆಯಲ್ಲಿಕ್ಷಿಪ್ರವಾಗಿ ಚಿಕಿತ್ಸೆ ಲಭಿಸಿದರೆ ಇಂಥ ಬೆಳವಣಿಗೆ ತಪ್ಪಿಸಬಹುದು. ವನ್ಯಜೀವಿಗಳ ದಾಳಿಗೆ ನಗದುರಹಿತ ಚಿಕಿತ್ಸೆ ಯೋಜನೆ ಜಾರಿಯಿಂದ ಪರೋಕ್ಷವಾಗಿ ವನ್ಯಜೀವಿಗಳ ಮತ್ತು ಅರಣ್ಯದ ರಕ್ಷಣೆಯೂ ಸಾಧ್ಯ ಎಂಬುದು ಪರಿಸರವಾದಿಗಳ ಪ್ರತಿಪಾದನೆ.
ಬಾಕ್ಸ್
ಎಲ್ಲೆಲ್ಲಿವನ್ಯಜೀವಿ ?
2025ರಲ್ಲಿರಾಜ್ಯದಲ್ಲಿಬೆಂಗಳೂರು ಅರಣ್ಯ ವೃತ್ತದಲ್ಲಿ24, ಬೆಳಗಾವಿ ಅರಣ್ಯ ವೃತ್ತದಲ್ಲಿ24, ಬಳ್ಳಾರಿ ಅರಣ್ಯ ವೃತ್ತದಲ್ಲಿ16, ಮಂಗಳೂರು ವೃತ್ತದಲ್ಲಿ16, ಮೈಸೂರು ವೃತ್ತದಲ್ಲಿ45, ಶಿವಮೊಗ್ಗ ವೃತ್ತದಲ್ಲಿ3, ಕೆನರಾ ವೃತ್ತದಲ್ಲಿ25, ಹಾಸನ ವೃತ್ತದಲ್ಲಿ28 ಹಾಗೂ ಕೊಡಗು ವೃತ್ತದಲ್ಲಿ21 ವನ್ಯಜೀವಿ ದಾಳಿಯಿಂದ ಗಾಯಗೊಂಡ ಪ್ರಕರಣಗಳು ನಡೆದಿವೆ. ಈ ಎಲ್ಲಪ್ರಕರಣಗಳಿಂದ ಸರಕಾರ ಸಂತ್ರಸ್ತರ ಕುಟುಂಬಗಳಿಗೆ ಒಟ್ಟು 7.55 ಕೋಟಿ ರೂ.ಗೂ ಹೆಚ್ಚು ಪರಿಹಾರ ವಿತರಿಸಿದೆ.
ಕೋಟ್ ..
ವನ್ಯಜೀವಿ ದಾಳಿಯಿಂದ ಗಾಯಗೊಂಡವರಿಗೆ ನಗರದುರಹಿತ ಚಿಕಿತ್ಸೆ ಒದಗಿಸುವುದರಿಂದ ತುರ್ತು ಚಿಕಿತ್ಸೆಯಲ್ಲಿವಿಳಂಬ ತಪ್ಪಿಸಿ, ಬಡ ಜನರಿಗೆ ಆರ್ಥಿಕ ಭಾರ ಕಡಿಮೆ ಮಾಡಬಹುದು. ಜತೆಗೆ ಅರಣ್ಯದಂಚಿನ ಹಳ್ಳಿಗರಿಗೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ.
-ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ

