ಖರ್ಗೆ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ
ವಿಕ ಸುದ್ದಿಲೋಕ ಸಾಗರ
ಅಸ್ಸಾಂ ಚುನಾವಣಾ ಪ್ರಚಾರ ಸಭೆಯಲ್ಲಿಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ಹೇಳಿಕೆ ಖಂಡಿಸಿ ಬಿಜೆಪಿ ನಗರ ಮಂಡಲ ಹಾಗೂ ಯುವ ಮೋರ್ಚಾ ವತಿಯಿಂದ ಶುಕ್ರವಾರ ಡಿವೈಎಸ್ ಪಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಖರ್ಗೆಯವರ ಭಾಷಣ ಪ್ರಚೋದನಾಕಾರಿಯಾಗಿದೆ ಎಂದು ಆರೋಪಿಸಿದ ಬಿಜೆಪಿ ಮುಖಂಡರು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭ ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್ .ಗಣೇಶ್ ಪ್ರಸಾದ್ , ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ್ , ಯುವ ಮೋರ್ಚಾ ಅಧ್ಯಕ್ಷ ಪರಶುರಾಮ್ ಸೇರಿದಂತೆ ಹಲವರು ಮಾತನಾಡಿ, ಖರ್ಗೆಯವರ ಹೇಳಿಕೆ ಸಮಾಜದಲ್ಲಿಅಶಾಂತಿ ಉಂಟುಮಾಡುವಂತಹದ್ದು. ಇಂತಹ ಪ್ರಚೋದನಕಾರಿ ಭಾಷಣಗಳನ್ನು ತಡೆಯಲು ಕಾನೂನು ಕ್ರಮ ಅಗತ್ಯವಿದೆ. ಮುಂದೆಯೂ ಇಂತಹ ಹೇಳಿಕೆಗಳು ಮುಂದುವರಿದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಮಾಜಿ ಅಧ್ಯಕ್ಷ ಸತೀಶ್ ಬಾಬು, ಸವಿತಾ ವಾಸು, ಆರ್ .ಶ್ರೀನಿವಾಸ್ , ಬಿ.ಎಚ್ .ಲಿಂಗರಾಜ್ , ಗುರುಪ್ರಸಾದ್ , ರತ್ನಾಕರ ಶೇಟ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ
10ಎಸ್ ಜಿಆರ್ 2
ಸಾಗರದಲ್ಲಿಶುಕ್ರವಾರ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಡಿವೈಎಸ್ ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

