ಚಿತ್ರ: 10ಜಿಎಲ್ ಬಿ10
ವಿಕಲಚೇತನರಿಗೆ ಮೂರು ಚಕ್ರವಾಹನ ವಿತರಿಸಿದ ಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ .
**
(ಕಿಕ್ಕರ್ ) ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯ
ಆಳುವವರು ಅವಕಾಶ ವಂಚಿತರ ಮೇಲೆತ್ತಬೇಕು
ವಿಕ ಸುದ್ದಿಲೋಕ ಕಲಬುರಗಿ
ಆಳುವ ಸರಕಾರಕ್ಕೆ ಸಾಮಾಜಿಕ ಬದ್ಧತೆ ಇರಬೇಕು. ಅವಕಾಶ ವಂಚಿತರ ಬಗ್ಗೆ ಕಾಳಜಿ ತೋರಿಸಿ. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಅದಕ್ಕೆ ಆಳುವವರಿಗೆ ಶ್ರೀಮಂತ ಹೃದಯವಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಒಟ್ಟು 499 ಫಲಾನುಭವಿಗಳಿಗೆ ರೂ 263.58 ಲಕ್ಷ ವೆಚ್ಚದಲ್ಲಿವಿಕಲಚೇತನರಿಗೆ ಮೂರು ಚಕ್ರವಾಹನ, ಬುದ್ಧಿ ಮಾಂದ್ಯ ಮಕ್ಕಳಿಗೆ ಟಿಎಲ್ ಎಂ ಕಿಚ್ , ವೀಲ್ ಚೇರ್ , ಬೆನ್ನು ನೋವಿನವರಿಗೆ ಮೆಡಿಕಲ್ ಕಿಚ್ , ವಿಶೇಷ ಚೇತನರಿಗೆ ಬ್ರೈಲ್ ಕಿಟ್ ಟೈಪಿಂಗ್ , ಶ್ರವಣ ದೋಷ ಯಂತ್ರ ಹಾಗೂ ರೀಡಿಂಗ್ ಯಂತ್ರ, ಟೇಬಲ…, ಬ್ಯಾಟರಿ ಆಪರೇಟೇಡ್ ಮೊಟರೈಸಡ್ ಟ್ರೈ ಸೈಕಲ್ ಹಾಗೂ ಇತ್ಯಾದಿ ಸಲಕರಣೆ ವಿತರಿಸಿ ಮಾತನಾಡುತ್ತಿದ್ದರು. ಒಟ್ಟು 499 ಫಲಾನುಭವಿಗಳಲ್ಲಿ278 ಫಲಾನುಭವಿಗಳು ಸಾಮಾನ್ಯ ವರ್ಗಕ್ಕೆ, 207 ಫಲಾನುಭವಿಗಳು ಎಸ್ ಸಿ ಹಾಗೂ 14 ಫಲಾನುಭವಿಗಳು ಎಸ್ ಟಿ ವರ್ಗಕ್ಕೆ ಸೇರಿದವರಾಗಿದ್ದಾರೆ. 499 ಫಲಾನುಭವಿಗಳಲ್ಲಿ249 ಪುರುಷ ಹಾಗೂ 274 ಮಹಿಳಾ ಫಲಾನುಭವಿಗಳು ಸೇರಿದ್ದಾರೆ.
ಕಲಬುರಗಿಯಲ್ಲಿಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಅಸಿಸ್ಟಿವ್ ಟೆಕ್ನಾಲಜಿ ಕೇಂದ್ರ ತೆರೆಯುವ ಉದ್ದೇಶ ಹೊಂದಿದೆ. ಈ ವಿಚಾರದಕ್ಕಿ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರೊಂದಿಗೆ ಚರ್ಚೆ ನಡೆದಿದೆ. ಈ ಕೇಂದ್ರದ ಮೂಲಕ ವಿಕಲಚೇತನರಿಗೆ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಿ ಸ್ವಾಭಿಮಾನದ ಜೀವನ ನಡೆಸಲು ಅನುಕೂಲವಾಗುವಂತ ವಾತಾವರಣ ನಿರ್ಮಿಸಲಾಗುವುದು ಎಂದು ಸಚಿವರು ವಿವರಿಸಿದರು.
ಗ್ರಾಮೀಣ ಭಾಗದಲ್ಲಿವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಸಿದ್ಧವಾಗಲು ಅರಿವು ಕೇಂದ್ರಗಳಲ್ಲಿಎಲ್ಲಅನುಕೂಲ ಮಾಡಿಕೊಡಲಾಗಿದೆ. ಒಂದು ಸಾವಿರ ಅರಿವು ಕೇಂದ್ರಗಳಲ್ಲಿಅಲೆಕ್ಸ್ ಡಿವೈಸ್ ವ್ಯವಸ್ಥೆ ಮಾಡಲಾಗಿತ್ತು. ಇದು ವಿದ್ಯಾರ್ಥಿಗಳು ಪ್ರಶ್ನೆ ಕೇಳಿದಾಗ ಅವರ ಯಾವ ಭಾಷೆಯಲ್ಲಿಉತ್ತರ ನೀಡುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಎಂಎಲ್ ಎ ಅಲ್ಲಮಪ್ರಭು ಪಾಟೀಲ…, ಕನೀಜ್ ಫಾತಿಮಾ, ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಮಹಾಪೌರ ವರ್ಷಾ ಜಾನೆ, ಮಹಜರ್ ಆಲಂಖಾನ್ , ಪ್ರವೀಣ್ ಪಾಟೀಲ್ ಹರವಾಳ, ಡಿಸಿ ಫೌಜಿಯಾ ತರನ್ನುಮ…, ಸಿಇಒ ಭಂವರ್ ಸಿಂಗ್ ಮೀನಾ, ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಇತರರಿದ್ದರು.
ಕೋಟ್ ...
ಜಿಲ್ಲೆಯಲ್ಲಿಬ್ಲೈಂಡ್ ಶಾಲೆ ಹಾಗೂ ಡಿಸೇಬಲ್ ಡೇ ಕೇರ್ ಕೇಂದ್ರ ಸಧ್ಯದಲ್ಲೇ ಪ್ರಾರಂಭಿಸಲಾಗುವುದು. ಈ ಹಿಂದೆ ಖರ್ಗೆ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಬ್ಲೈಂಡ್ ಶಾಲೆ ಯಾವುದೇ ಕಾರಣಕ್ಕೆ ನಿಂತು ಹೋಗಿತ್ತು. ಈಗ ಒಂದು ಸುಸಜ್ಜಿತ ಬ್ಲೈಂಡ್ ಶಾಲೆ ಸ್ಥಾಪನೆ ಮಾಡಿ ಬ್ರೈನ್ ಲಿಪಿಯ ಮೂಲಕ ಅಲ್ಲಿನೋಂದಾಯಿಸುವ ವಿಶೇಷ ಚೇತನರಿಗೆ ವಿದ್ಯಾಭ್ಯಾಸ ಹೇಳಿಕೊಡಲಾಗುವುದು.
- ಪ್ರಿಯಾಂಕ್ ಖರ್ಗೆ ಸಚಿವ

