ಕವಿವಿ ವಿಶ್ರಾಂತ ಕುಲಪತಿ ಪ್ರೊ.ಎಚ್ .ಬಿ. ವಾಲಿಕಾರ 75ನೇ ಜನ್ಮದಿನೋತ್ಸವ: ರಾಷ್ಟ್ರೀಯ ವಿಚಾರ ಸಂಕಿರಣ
ವಿಕ ಸುದ್ದಿಲೋಕ ಧಾರವಾಡ
ಗಣಿತ ಸಂಬಂಧಿತ ವಿಷಯಗಳ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಗಣಿತ ವಿಷಯಗಳಿಗೆ ಪ್ರಾಮುಖ್ಯತೆ ಅಗತ್ಯವಿದೆ ಎಂದು ಇಂಡಿಯನ್ ಮ್ಯಾಥಾಮೆಟಿಕಲ್ ಸೊಸೈಟಿ ಕಾರ್ಯದರ್ಶಿ ಪ್ರೊ.ಎಂ.ಎಂ.ಶಿಕರೆ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿಕವಿವಿ ವಿಶ್ರಾಂತ ಕುಲಪತಿ ಪ್ರೊ.ಎಚ್ .ಬಿ. ವಾಲಿಕಾರ ಅವರ 75ನೇ ಜನ್ಮದಿನೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಗಣಿತ ಶಾಸ್ತಿ್ರೕಯ ವಿಜ್ಞಾನಗಳು ಮತ್ತು ಅದರ ಅನ್ವಯಿಕೆಗಳು ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘‘ಗಣಿತಶಾಸ್ತ್ರದಲ್ಲಿಅನೇಕ ಹೊಸ ಬೆಳವಣಿಗೆ ಆಗಿವೆ. 2016 ರಿಂದ ಕಳೆದ ಆರೇಳು ವರ್ಷಗಳಲ್ಲಿಗಣಿತದ ಹಲವು ಮ್ಯಾಥಾಮೆಟಿಕ್ಸ್ ಮ್ಯಾಟ್ರಿಕ್ಸ್ ಗಳ ಕುರಿತು ಅಂತಾರಾಷ್ಟ್ರೀಯ ಸಂಶೋಧಕರು ಬೆಳಕು ಚೆಲ್ಲಿದ್ದಾರೆ. ಪಾಥ್ - ಮ್ಯಾಟಮಿಕ್ ಥಿಯರಿಗೆ ಉನ್ನತ ಮಟ್ಟದ ಸಂಶೋಧನಾ ಪ್ರಬಂಧಗಳು ಹೊಸ ರೀತಿಯ ವ್ಯಾಖ್ಯಾನ ನೀಡಿವೆ. ಗ್ರಾಫ್ ಥಿಯರಿಗಳಲ್ಲಿಹೆಚ್ಚು ಮಟ್ಟದ ಸಂಶೋಧನೆಗಳು ನಡೆದಿವೆ,’’ ಎಂದು ತಿಳಿಸಿದರು.
ಗಣಿತವೇ ಉಸಿರು:
ಕವಿವಿ ವಿಶ್ರಾಂತ ಕುಲಪತಿ ಪ್ರೊ. ಎಚ್ .ಬಿ. ವಾಲಿಕಾರ ಮಾತನಾಡಿ, ‘‘ಗಣಿತ ಒಂದು ಸರಳ ವಿಷಯವಾಗಿದೆ. ನನ್ನ ಸಾಧನೆಗೆ ಶಿಕ್ಷಕರು ಮತ್ತು ಸಂಶೋಧನಾ ಮಾರ್ಗದರ್ಶಕರಿಗೆ ಋುಣಿಯಾಗಿದ್ದೇನೆ. ನನ್ನ ಉಸಿರು ಇರುವ ವರೆಗೆ ಗಣಿತ ಕಲಿಯುತ್ತೇನೆ ಮತ್ತು ಕಲಿಸುತ್ತೇನೆ. ಗಣಿತ ಸಂಬಂಧಿಸಿದ ವಿಷಯಗಳ ಬೆಳವಣಿಗೆಗೆ ಶ್ರಮಿಸುತ್ತೇನೆ,’’ ಎಂದು ಹೇಳಿದರು.
ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ‘‘ಪ್ರೊ. ವಾಲಿಕಾರ ಶ್ರೇಷ್ಠ ಗಣಿತಜ್ಞ. ಅನೇಕ ಆಡಳಿತಾತ್ಮಕ ಸುಧಾರಣೆಗಳ ಮೂಲಕ ಕವಿವಿಗೆ ಕೊಡುಗೆ ನೀಡಿದ್ದಾರೆ,’’ ಎಂದರು.
‘‘ತಮ್ಮ ಅವಧಿಯಲ್ಲಿಅನೇಕ ಹುದ್ದೆಗಳನ್ನು ತುಂಬುವ ಮೂಲಕ ಕವಿವಿ ಶಕ್ತಿ ಹೆಚ್ಚಿಸಿದ್ದಾರೆ. ಹಲವು ತೊಂದರೆ, ಸವಾಲುಗಳನ್ನು ಎದುರಿಸಿದ್ದಾರೆ. ಬುದ್ಧ, ಡಾ.ಅಂಬೇಡ್ಕರ್ , ಗಾಂಧೀಜಿ, ಬಸವಣ್ಣ ಅವರಂತೆ ಅಸಮಾನತೆ ವಿರುದ್ಧ ಪ್ರೊ.ವಾಲಿಕಾರ ಕೂಡ ಹೋರಾಡಿದ್ದಾರೆ. ಪ್ರಗತಿಶೀಲ ಸಮಾಜ ನಿರ್ಮಿಸುವಲ್ಲಿಶ್ರಮಿಸಿದ್ದಾರೆ,’’ ಎಂದು ತಿಳಿಸಿದರು.
ಪ್ರಬಂಧ ಮಂಡನೆ:
ಒಂದು ದಿನದ ರಾಷ್ಟಿ್ರೕಯ ವಿಚಾರ ಸಂಕಿರಣದಲ್ಲಿಸಂಶೋಧನಾ ಲೇಖನಗಳ ಸಂಗ್ರಹದ ಸಂಶೋಧನಾ ನಿಯತಕಾಲಿಕೆಯನ್ನು ಬಿಡುಗಡೆ ಮಾಡಲಾಯಿತು. ಸುವರ್ಣ ಮಹೋತ್ಸವ ಸಭಾಂಗಣ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗಗಳಲ್ಲಿ60 ಗಣಿತ ಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ ಸಂಬಂಧಿಸಿದ ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. 200ಕ್ಕಿಂತ ಹೆಚ್ಚು ಸಂಶೋಧಕರು ಗಣಿತಶಾಸ್ತಿ್ರೕಯ ಸಂಬಂಧಿಸಿದ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು.
ಕಾರ್ಯಕ್ರಮದಲ್ಲಿಪ್ರೊ.ಎ.ಬಿ.ವೇದಮೂರ್ತಿ, ಡಾ. ಸುಭಾಷಚಂದ್ರ, ನಾಟೀಕಾರ, ಪ್ರೊ. ಎಸ್ .ಸಿ. ಶಿರಾಳಶೆಟ್ಟಿ, ಪ್ರೊ.ಶ್ರೀದೇವಿ, ಪ್ರೊ.ನಾಗೇಶ.ಎಸ್ , ಪ್ರೊ.ಐ.ಜಿ.ಸನದಿ, ಪ್ರೊ.ಪಿ.ಜಿ.ಪಾಟೀಲ, ಬೆಳಗಾವಿ ಭರತೇಶ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಧ್ಯಾಪಕ ಪ್ರೊ. ಪಿ.ಆರ್ . ಹಂಪಿಹೊಳಿ ಇತರರು ಇದ್ದರು.
ಫೋಟೊ: 10ಮಹೇಶ7
ಧಾರವಾಡದಲ್ಲಿಪ್ರೊ.ಎಚ್ .ಬಿ.ವಾಲಿಕಾರ ಅವರ 75ನೇ ಜನ್ಮದಿನೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಗಣಿತಶಾಸ್ತಿ್ರೕಯ ವಿಜ್ಞಾನಗಳು ಮತ್ತು ಅದರ ಅನ್ವಯಿಕೆಗಳು ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿಸಂಶೋಧನಾ ನಿಯತಕಾಲಿಕೆ ಬಿಡುಗಡೆಯಾಯಿತು.

