ಜೂನ್ ಗೆ ಗಂಗಾ ಉತ್ಸವ

Contributed bysheshu0147@gmail.com|Vijaya Karnataka

ಮಂಡ್ಯದಲ್ಲಿ ಗಂಗಾಮತಸ್ಥ ಸಮುದಾಯದ ರಾಜಕೀಯ, ಶೈಕ್ಷಣಿಕ, ಆರ್ಥಿಕ ಪ್ರಗತಿಗಾಗಿ ಜೂನ್‌ನಲ್ಲಿ ಗಂಗಾ ಉತ್ಸವ ಆಚರಿಸಲಾಗುತ್ತಿದೆ. ಈ ಉತ್ಸವದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವರು. ಸಮುದಾಯದ ಏಳಿಗೆಗೆ ಪೂರಕವಾದ ಚರ್ಚೆಗಳು ನಡೆಯಲಿವೆ. ರಾಜಕೀಯ ಪಕ್ಷಗಳಿಗೆ ಸಮುದಾಯದ ಒಗ್ಗಟ್ಟಿನ ಸಂದೇಶ ರವಾನಿಸಲಾಗುವುದು. ಎಸ್‌ಟಿ ಮೀಸಲು ನೀಡುವಂತೆ ಸರಕಾರದ ಗಮನ ಸೆಳೆಯುವುದು ಮುಖ್ಯ ಉದ್ದೇಶವಾಗಿದೆ.

future of ganga utsav in june 2023

ವಿಕ ಸುದ್ದಿಲೋಕ ಮಂಡ್ಯ

ಗಂಗಾಮತಸ್ಥ ಸಮುದಾಯ ರಾಜಕೀಯ, ಶೈಕ್ಷಣಿಕ, ಆರ್ಥಿಕ ಪ್ರಗತಿಯ ಜಾಗೃತಿ ಮೂಡಿಸಲು ‘ಗಂಗಾ ಉತ್ಸವ ಆಚರಿಸಲಾಗುತ್ತಿದೆ ಎಂದು ಜಿಲ್ಲಾಗಂಗಾಮತಸ್ಥರ (ಬೆಸ್ತರ್ ) ಸಂಘದ ಮಹಿಳಾ ಅಧ್ಯಕ್ಷೆ ಗಾಯತ್ರಿ ಕೃಷÜ್ಣಪ್ಪ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ‘ಗಂಗಾ ಉತ್ಸವ ಆಚರಣೆ ಸಂಬಂಧ ಗುರುವಾರ ನಡೆದ ಜಿಲ್ಲಾಗಂಗಾಮತಸ್ಥರ (ಬೆಸ್ತರ್ ) ಸಂಘದ ಮಹಿಳಾ ಘಟಕದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘‘ಜೂನ್ ತಿಂಗಳಿನಲ್ಲಿನಡೆಯುವ ಗಂಗಾ ಉತ್ಸವದಲ್ಲಿಅಂದಾಜು 2 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವರು. ತಪ್ಪದೇ ಜಿಲ್ಲೆಯ ಎಲ್ಲಾಶಾಸಕರು, ತಾಪಂ, ಗ್ರಾಪಂ ಅಧ್ಯಕ್ಷರು ಹಾಗೂ ಸಮುದಾಯದ ಮುಖಂಡರನ್ನು ಆಹ್ವಾನಿಸಬೇಕು. ಎಲ್ಲಾಹಳ್ಳಿಗಳಿಗೂ ಭೇಟಿ ನೀಡಿ ಉತ್ಸವದ ಮಾಹಿತಿ ನೀಡಬೇಕು. ಉತ್ಸವದಲ್ಲಿಸಾಂಸ್ಕೃತಿಕ ಕಾರ ್ಯಕ್ರಮದ ಜತೆಗೆ ಬೆಸ್ತ ಜನಾಂಗದ ಏಳಿಗೆಗೆ ಪೂರಕವಾದ ಚರ್ಚೆಗಳನ್ನು ಆಯೋಜಿಸಬೇಕು,’’ ಎಂದರು.

‘‘ಉತ್ಸವದ ಮೂಲಕ ರಾಜಕೀಯ ಪಕ್ಷಗಳಿಗೆ ಸಮುದಾಯದ ಒಗ್ಗಟ್ಟಿನ ಸಂದೇಶ ರವಾನಿಸಬೇಕಿದೆ. ಹಕ್ಕುಗಳಿಗಾಗಿ ನಡೆಸುವ ನಿರ್ಣಾಯಕ ಹೋರಾಟದ ಆರಂಭ ಇಲ್ಲಿಂದಲೇ ಆಗಬೇಕು. ಸಮುದಾಯಕ್ಕೆ ಎಸ್ ಟಿ ಮೀಸಲು ನೀಡುವ ಕುರಿತು ಸರಕಾರದ ಗಮನ ಸೆಳೆಯುವುದೇ ಈ ಕಾರ ್ಯಕ್ರಮದ ಉದ್ದೇಶವಾಗಬೇಕು,’’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಗಂಗಾಮತಸ್ಥ ಸಂಘದ ಗೌರವಾಧ್ಯಕ್ಷ ಟಿ.ಕೃಷ್ಣಯ್ಯ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಯೋಗೇಶ್ , ಗಂಗಾಮತಸ್ಥ ಮೀನುಗಾರರ ಸಹಕಾರ ಸಂಘದ ಕನ್ನಲಿ ದೇವರಾಜ್ , ಜಿಲ್ಲಾಕಾರ ್ಯದರ್ಶಿ ಹೊನ್ನಪ್ಪ, ಪದಾಧಿಕಾರಿಗಳಾದ ಹಾಡ್ಯ ಉಮೇಶ್ , ರಮೇಶ್ , ವರದಪ್ಪ , ಪುಟ್ಟಸ್ವಾಮಿ, ನಿಂಗಯ್ಯ ಇತರರು ಹಾಜರಿದ್ದರು.

ಕೋಟ್ ..

ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿಗಂಗಾಮತಸ್ಥ (ಬೆಸ್ತರ್ ) ಸಮುದಾಯದ ಮಕ್ಕಳು ಹಿನ್ನಡೆ ಅನುಭವಿಸುತ್ತಿದ್ದಾರೆ. ಸರಕಾರ ತಕ್ಷಣವೇ ಎಸ್ ಟಿ ಪ್ರಮಾಣ ಪತ್ರ ನೀಡುವ ಕುರಿತು ಕ್ರಮ ವಹಿಸಬೇಕು.

- ಗಾಯತ್ರಿ ಕೃಷ್ಣಪ್ಪ, ಜಿಲ್ಲಾಧ್ಯಕ್ಷೆ, ಮಹಿಳಾ ಘಟಕ, ಜಿಲ್ಲಾಗಂಗಾಮತಸ್ಥರ (ಬೆಸ್ತರ್ ) ಸಂಘ.

ಎಂಡಿವೈ9ಎಸ್ 3

ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿ‘ಗಂಗಾ ಉತ್ಸವ ಆಚರಣೆ ಸಂಬಂಧ ಜಿಲ್ಲಾಗಂಗಾಮತಸ್ಥರ (ಬೆಸ್ತರ್ ) ಸಂಘದ ಮಹಿಳಾ ಘಟಕದ ಪೂರ್ವಭಾವಿ ಸಭೆಯು ಮಹಿಳಾ ಅಧ್ಯಕ್ಷೆ ಗಾಯತ್ರಿ ಕೃಷÜ್ಣಪ್ಪ ಅಧ್ಯಕ್ಷತೆಯಲ್ಲಿಗುರುವಾರ ನಡೆಯಿತು.