ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ
ಸಂಸದ ಡಾ. ಕೆ. ಸುಧಾಕರ್ ಅವರು ರೈತ ಪರ ಹೋರಾಟದಲ್ಲಿಭಾಗಿಯಾಗಿ ಅವರಿಗೆ ಬೆಂಬಲ ಸೂಚಿಸಿದ್ದಾರೆ, ವೈಯಕ್ತಿಕವಾಗಿ ಶಿಡ್ಲಘಟ್ಟ ಶಾಸಕರ ವಿರುದ್ಧ ಮಾತನಾಡಿಲ್ಲ. ಮೈತ್ರಿ ಪಕ್ಷಗಳಾದ ನಾವು ದುಡುಕಬಾರದು. ಏನೇ ಇದ್ದರೂ ಮಾತನಾಡಿ ಸರಿಪಡಿಸಿಕೊಳ್ಳಬೇಕು ಎಂದು ಚಿಮುಲ್ ನಿರ್ದೇಶಕ ಕೆ.ವಿ. ನಾಗರಾಜ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸಂಸದ ಡಾ. ಕೆ. ಸುಧಾಕರ್ ಅವರು ರೈತರಿಗೆ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿಪ್ರತಿಭಟನೆಯಲ್ಲಿಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಶಿಡ್ಲಘಟ್ಟ ಶಾಸಕ ರವಿಕುಮಾರ್ ಅವರ ಹೆಸರನ್ನು ಹೇಳಿಲ್ಲ, ವಿನಾಕಾರಣ ಶಿಡ್ಲಘಟ್ಟ ಜೆಡಿಎಸ್ ಮುಖಂಡರು ಹೇಳಿಕೆಗಳನ್ನು ನೀಡಿದ್ದಾರೆ. ಹಾಗೇನಾದರೂ ಭಿನ್ನಮತವಿದ್ದರೆ ನಾವು ಸರಿಪಡಿಸಿಕೊಳ್ಳುತ್ತೇವೆ, ಯಾರೂ ದುಡುಕುವುದು ಬೇಡ ಎಂದರು.
ಚಿಮುಲ್ ಚುನಾವಣೆಯಲ್ಲಿಸಂಸದ ಡಾ. ಕೆ. ಸುಧಾಕರ್ ಅವರು ನಂದಿ ಕ್ಷೇತ್ರದಲ್ಲಿಸ್ಪರ್ಧಿಸಲು ಹೇಳಿದ್ದರು, ಆದರೆ ಯಾರೂ ಮುಂದೆ ಬರಲಿಲ್ಲ. ಕೊನೆಗೆ ಜೆಡಿಎಸ್ ಪಕ್ಷದಿಂದ ನಾಮಪತ್ರ ಹಾಕಿದ್ದರು, ಕೊನೆಗೆ ಯಾರನ್ನೂ ಕೇಳದೆ ವಾಪಸ್ ತೆಗೆದರು. ಇಷ್ಟು ಬಿಟ್ಟರೆ ಅಲ್ಲಿಯಾವುದೇ ಅಡ್ಜೆಸ್ಟ್ ಮೆಂಟ್ ರಾಜಕೀಯ ನಡೆದಿಲ್ಲ. ಪೆರೇಸಂದ್ರ ಕ್ಷೇತ್ರದಲ್ಲಿನನ್ನ ಪರ ಪ್ರಚಾರ ಮಾಡಿದ್ದರು. ಇದಿಷ್ಟೇ ಅಲ್ಲ, ಜಿಲ್ಲೆಯ ಎಲ್ಲಕ್ಷೇತ್ರಗಳಲ್ಲೂಎನ್ ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಲು ಯತ್ನಿಸಿದ್ದರು ಎಂದು ಹೇಳಿದರು.
ಮಾಜಿ ಶಾಸಕ ರಾಜಣ್ಣ ಮಾತನಾಡಿ, ನಾವ್ಯಾರು ಕೈಗಾರಿಕೆಗಳ ವಿರೋಧವಿಲ್ಲ, ಆದರೆ ಕೃಷಿ ಯೋಗ್ಯ ಭೂಮಿಯಲ್ಲಿಕೈಗಾರಿಕೆ ಬೇಡ ಎಂದು ವಿರೋಧಿಸಿದ್ದೇವೆ. ಸಂಸದ ಸುಧಾಕರ್ ಅವರು ಮೊದಲಿಂದಲೂ ರೈತರ ಪರ ಹೋರಾಟದಲ್ಲಿಭಾಗಿಯಾಗಿದ್ದಾರೆ, ಅದರಲ್ಲಿತಪ್ಪೇನೂ ಇಲ್ಲ. ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟದಲ್ಲಿನಾವೆಲ್ಲರೂ ಭಾಗಿಯಾಗಿದ್ದೇವೆ. ಹೀಗಾಗಿ ವಿನಾಕಾರಣ ಸಂಸದ ಸುಧಾಕರ್ ಅವರ ವಿರುದ್ಧ ಮಾತನಾಡುವುದು ತಪ್ಪು. ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯಲು ಹೋರಾಟದಲ್ಲಿಭಾಗಿಯಾಗಿದ್ದಾರಷ್ಟೇ ಎಂದರು.
ಬಿಜೆಪಿ ಮುಖಂಡ ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ, ರೈತರು ಹಲವು ದಿನಗಳಿಂದ ತಮ್ಮ ಭೂಮಿಗಾಗಿ ಹೋರಾಡುತ್ತಿದ್ದಾರೆ. ಶಾಸಕರು ಅವರ ಪರವಾಗಿ ಹೋರಾಡಬೇಕಿತ್ತು, ನಮ್ಮ ಸಂಸದರು ರೈತರಿಗೆ ಎಲ್ಲೇ ಅನ್ಯಾಯವಾಗಲು ಅವರು ಭಾಗಿಯಾಗುತ್ತಾರೆ. ಅವರು ಎಲ್ಲಿಯೂ ಅಡ್ಜೆಸ್ಟ್ ಮೆಂಟ್ ರಾಜಕೀಯ ಮಾಡಿಲ್ಲ. ಅವರಿಗೆ ಅದರ ಅವಶ್ಯಕತೆಯೂ ಇಲ್ಲ. ಅವರು ಯಾರೂ ವಿರುದ್ಧವೂ ವೈಯಕ್ತಿಕವಾಗಿ ಮಾತನಾಡಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಲು ಜತೆಯಾಗಿದ್ದಾರೆ ಅಷ್ಟೇ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿಮುಖಂಡರಾದ ಸೀಕಲ್ ಆನಂದಗೌಡ, ಗಜೇಂದ್ರ, ಪ್ರಸಾದ್ , ಅಜಿತ್ , ದ್ಯಾವಣ್ಣ, ಕೃಷ್ಣಮೂರ್ತಿ, ಯತೀಶ್ ಸೇರಿದಂತೆ ಹಲವರಿದ್ದರು.
10ಸಿಬಿಪಿಫೋಟೋ14
ನಗರದ ಪತ್ರಕರ್ತರ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಬಿಜೆಪಿ ಮುಖಂಡರು ಮಾತನಾಡಿದರು.

