ಪ್ರತಿಷ್ಟಿತ ಶಾಲೆ ಪ್ರವೇಶಕ್ಕೆ ಅರ್ಜಿ

Contributed byahobalapathy.narayanappa@timesofindia.com|Vijaya Karnataka

ಚಿತ್ರದುರ್ಗ ಜಿಲ್ಲೆಯ ಪ್ರತಿಷ್ಟಿತ ಶಾಲೆಗಳಿಗೆ 2026-27ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಕರೆಯಲಾಗಿದೆ. ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶವಿದೆ. 5ನೇ ತರಗತಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದ, ವಾರ್ಷಿಕ ಆದಾಯ 2 ಲಕ್ಷ ರೂ. ಮಿತಿಯಲ್ಲಿರುವವರು ಅರ್ಜಿ ಸಲ್ಲಿಸಬಹುದು. ಮೇ 4 ಅರ್ಜಿ ಸಲ್ಲಿಕೆಯ ಕೊನೆಯ ದಿನವಾಗಿದೆ. ಅರ್ಹತಾ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ. ನಗರದಲ್ಲಿ ಏ.12ರಂದು ವಿದ್ಯುತ್ ವ್ಯತ್ಯಯವಾಗಲಿದೆ.

applications open for prestigious schools for the academic year 2026 27

ಪ್ರತಿಷ್ಟಿತ ಶಾಲೆ ಪ್ರವೇಶಕ್ಕೆ ಅರ್ಜಿ

ಚಿತ್ರದುರ್ಗ: ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು 2026-27ನೇ ಸಾಲಿಗೆ, ಜಿಲ್ಲೆಯ ಪ್ರತಿಷ್ಟಿತ ಶಾಲೆಗಳಿಗೆ 6ನೇ ತರಗತಿಗೆ ದಾಖಲಿಸಲು ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾವ್ಯಾಪ್ತಿಯಲ್ಲಿವಾಸವಿರುವ, 5ನೇ ತರಗತಿಯಲ್ಲಿಶೇ.60ಕ್ಕಿಂತ ಹೆಚ್ಚು ಅಂಕಗಳಿಸಿದ, ಕುಟುಂಬದ ವಾರ್ಷಿಕ ವರಮಾನ 2 ಲಕ್ಷ ರೂ. ಮಿತಿಯೊಳಗೆ ಇರುವ ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ದೃಢೀಕೃತ ಜಾತಿ ಆದಾಯ ಪ್ರಮಾಣ ಪತ್ರ ಹಾಗೂ ಶೇಕಡವಾರು ಅಂಕ ನಮೂದಿಸಿದ 5ನೇ ತರಗತಿ ಅಂಕಪಟ್ಟಿಯನ್ನು ಮುಖ್ಯೋಪಾಧ್ಯಾಯರಿಂದ ಭರ್ತಿ ಮಾಡಿಸಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಅಂಕಪಟ್ಟಿಯಲ್ಲಿಗ್ರೇಡ್ ನ್ನು ನಮೂದಿಸಿದ್ದಲ್ಲಿಅರ್ಜಿ ಪರಿಗಣಿಸುವುದಿಲ್ಲ.

ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನವಾಗಿದ್ದು, ಸಂಜೆ 5 ಗಂಟೆಯೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಾಲೂಕುಗಳ ಪರಿಶಿಷ್ಟ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಹತಾ ಪರೀಕ್ಷಾ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

**

12ಕ್ಕೆ ವಿದ್ಯುತ್ ಪೂರೈಕೆಯಲ್ಲಿವ್ಯತ್ಯಯ

ಚಿತ್ರದುರ್ಗ: ನಗರದ ಎಫ್ -9 ಹಾಗೂ ಎಫ್ -10 ವಿದ್ಯುತ್ ಮಾರ್ಗದ ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಏ.12ರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿವ್ಯತ್ಯಯವಾಗಲಿದೆ.

ಎಫ್ -09 ಮಾರ್ಗದ ಮಾರ್ಗದ ಸರಸ್ವತಿಪುರಂ, ಐಯುಡಿಪಿ ಬಡಾವಣೆ, ಜಿಲ್ಲಾಆಸ್ಪತ್ರೆ, ಜೋಗಿ ಮಟ್ಟಿ ರಸ್ತೆ, ಜಿಲ್ಲಾಪಂಚಯತ್ ಕಛೇರಿ, ಕರುವಿನ ಕಟ್ಟೆ ವೃತ್ತ, ಫಲ್ಟರ್ ಹೌಸ್ , ಕಾಮನಬಾವಿ, ಕೋಟೆ ಮತ್ತು ಸುತ್ತಮುತ್ತಲ ಪ್ರದೇಶ ಹಾಗೂ ಎಫ್ -10 ಮಾರ್ಗದ ಜಿಲ್ಲಾಪಂಚಾಯತ್ 11 ಕೆ.ವಿ. ಮಾರ್ಗದ ಐಯುಡಿಪಿ ಲೇಔಟ್ , ಕಂದಾಯಗಿರಿ ನಗರ, ಕೆ.ಹೆಚ್ .ಬಿ., ಟೀಚರ್ಸ್ ಕಾಲೋನಿ, ಸ್ಟೇಡಿಯಂ ರಸ್ತೆ, ಜೋಗಿಮಟ್ಟಿ ರಸ್ತೆ, ಗಾಂಧಿ ನಗರ, ಬಿದ್ದ ನಗರ, ಪ್ರಶಾಂತ್ ನಗರ, ವಿ.ವಿ.ಬಡವಾಣೆ ಮತ್ತು ಸುತ್ತಲಿನ ಪ್ರದೇಶದಲ್ಲಿವಿದ್ಯುತ್ ವ್ಯತ್ಯಾಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಎಇಇ ತಿಳಿಸಿದ್ದಾರೆ.