ಆಯುಷ್ ಚಿಕಿತ್ಸಾ ಶಿಬಿರ
ಕಂಪ್ಲಿ: ತಾಲೂಕಿನ ಶ್ರೀರಾಮರಂಗಾಪುರದ ಸರಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿಉಚಿತ ಆಯುಷ್ ಚಿಕಿತ್ಸಾ ಶಿಬಿರ ಗುರುವಾರ ನಡೆಯಿತು.
ಚಿಕಿತ್ಸಾಲಯದ ಪ್ರಭಾರ ವೈದ್ಯಾಧಿಕಾರಿ ಡಾ.ಶ್ರೀಗುರು ಮಾತನಾಡಿ, ‘‘ಪ್ರಸ್ತುತದಿನದಲ್ಲಿ ಆಯುರ್ವೇದ ಚಿಕಿತ್ಸೆ ಗೆ ಜನತೆ ಉತ್ಸುಕರಾಗಿದ್ದಾರೆ. ಅಡುಗೆ ಮನೆಯಲ್ಲಿಯೇ ದೊರೆಯುವ ದಿನ ಬಳಕೆ ವಸ್ತುಗಳಲ್ಲಿಆರೋಗ್ಯದ ಗುಟ್ಟು ಅಡಗಿದೆ. ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಸದ್ಭಳಕೆ ಮಾಡಿಕೊಳ್ಳಬೇಕು,’’ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭರತ್ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ, ‘‘ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ಕಿಶೋರಿಯರಿಗೆ ಎಚ್ ಪಿವಿ ಲಸಿಕೆ ಹಾಕಿಸುವಲ್ಲಿಪಾಲಕರು ಆಸಕ್ತಿವಹಿಸಬೇಕು,’’ ಎಂದರು.
ಶಿಬಿರದಲ್ಲಿ80ಕ್ಕೂ ಹೆಚ್ಚಿನ ರೋಗಿಗಳ ಆರೋಗ್ಯ ತಪಾಸಣೆ ಮಾಡಿ, ರಕ್ತಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ಮಾಡಲಾಯಿತು. ಔಷಧ ವಿತರಿಸಲಾಯಿತು. ಸಿಬ್ಬಂದಿ ಗೌರಿ ಶಂಕರ, ಮಲ್ಲಿಕಾರ್ಜುನ, ಮಮತಾ, ಆಶಾ ಕಾರ್ಯಕರ್ತೆ ಅನಿತಾ, ಜ್ಯೋತಿ, ಮಹೇಶ್ವರಮ್ಮ, ಆಲ್ತಾಫ್ , ರಾಜಾ ಇದ್ದರು.
* ಪೊ.ಶೀ.9ಕೆಎಂಪಿ2;-
ಕಂಪ್ಲಿತಾಲೂಕಿನ ಶ್ರೀರಾಮರಂಗಾಪುರದ ಸರಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿಉಚಿತ ಆಯುಷ್ ಚಿಕಿತ್ಸಾ ಶಿಬಿರ ನಡೆಯಿತು.

