ಪೌಷ್ಟಿಕ ಆಹಾರ ಸೇವಿಸಿ

Contributed byajaykappagalmutt@gmail.com|Vijaya Karnataka

ಬಳ್ಳಾರಿ ಗ್ರಾಮೀಣದ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನಮಂತ್ರಿ ಸುರಕ್ಷತಾ ಮಾತೃತ್ವ ಅಭಿಯಾನ ನಡೆಯಿತು. ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ. ಚಿತ್ರ ವರ್ಣಿಕರ್ ತಿಳಿಸಿದರು. ಪ್ರತಿ ತಿಂಗಳು ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು, ರಕ್ತ ಪರೀಕ್ಷೆ, ಬಿಪಿ, ತೂಕ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ. ಗಂಡಾಂತರ ಗರ್ಭಿಣಿಯರನ್ನು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು. ತಾಯಿ, ಶಿಶು ಮರಣ ತಡೆಯಲು ಇದು ಸಹಕಾರಿ.

nutritional food for pregnant women new measures under ayushman bharat scheme

ಪೌಷ್ಟಿಕ ಆಹಾರ ಸೇವಿಸಿ

ವಿಕ ಸುದ್ದಿಲೋಕ ಬಳ್ಳಾರಿ (ಗ್ರಾಮೀಣ)

ಸಮಯಕ್ಕೆ ಸರಿಯಾಗಿ ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ. ಚಿತ್ರ ವರ್ಣಿಕರ್ ಹೇಳಿದರು.

ತಾಲೂಕಿನ ರೂಪನಗುಡಿ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿಗರ್ಭಿಣಿಯರಿಗೆ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಸುರಕ್ಷತಾ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿಗುರುವಾರ ಮಾತನಾಡಿ, ಗರ್ಭಿಣಿಯರಿಗೆ ಪ್ರತಿ ತಿಂಗಳು 9 ನೇ ಮತ್ತು ಗಂಡಾಂತರ ಗರ್ಭಿಣಿಯರು 24ನೇ ದಿನಾಂಕದಂದು ವೈದ್ಯರ ಹತ್ತಿರ ತಪಾಸಣೆ ಮಾಡಿಕೊಳ್ಳಬೇಕು. ರಕ್ತ ಪರೀಕ್ಷೆ, ಬಿಪಿ, ತೂಕ ಪರೀಕ್ಷೆ ಸೇರಿ ನಾನಾ ತರಹದ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು. ಗಂಡಾಂತರ ಗರ್ಭಿಣಿಯರನ್ನು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ಕೊಡಲಾಗುವುದು . ಗರ್ಭಿಣಿಯರ ದೇಹದಲ್ಲಿರಕ್ತ ಹೆಚ್ಚಿಸಲು ಐರನ್ ಸುಕ್ರೋಸ್ ಇಂಜೆಕ್ಷನ್ ನೀಡಲಾಗುವುದು. ಜತೆಗೆ ಟಿ. ಡಿ. ಇಂಜೆಕ್ಷನ್ ಮತ್ತು ಕ್ಯಾಲ್ಸಿಯಂ ಮಾತ್ರೆಗಳು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಹೀಗಾಗಿ, ತಾಯಿ ಮರಣ ಮತ್ತು ಶಿಶು ಮರಣ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಗರ್ಭಿಣಿಯರು ಇದ್ದರು.

09 ಬಿಎಲ್ ವೈ ಅಜಯ್ 01

ಬಳ್ಳಾರಿ ತಾಲೂಕಿನ ರೂಪನಗುಡಿ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿಗರ್ಭಿಣಿಯರಿಗೆ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಸುರಕ್ಷತಾ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿಗುರುವಾರ ಆಡಳಿತ ವೈದ್ಯಾಧಿಕಾರಿ ಡಾ. ಚಿತ್ರ ವರ್ಣಿಕರ್ ತಪಾಸಣೆ ಮಾಡಿದರು. ಆಶಾ ಹಾಗೂ ಗರ್ಭಿಣಿಯರಿದ್ದರು.