(ಕಾರ್ಟೂನ್ ಬರಲಿದೆ)
ದೇವಾಲಯದ ಹೆಸರಲ್ಲಿಇಲ್ಲದ ಜಮೀನು
ದೇವರ ಆಸ್ತಿ ರಕ್ಷಣೆಯೆ ಸವಾಲು!
ಸಂತೋಷ್ ಕಾಚಿನಕಟ್ಟೆ ಶಿವಮೊಗ್ಗ
ಘ್ಕಿ್ಝakshಞಜಿka್ಞಠಿhak್ಠಞa್ಟ.ಚಿಟ್ಟaಜಿahಃಠಿಜಿಞಛಿsಟ್ಛಜ್ಞಿdಜಿa.್ಚಟಞ
ವಕ್ಫ್ ಆಸ್ತಿ ಕಬಳಿಕೆ ಮಾದರಿಯಲ್ಲೆರಾಜ್ಯದಲ್ಲಿಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಸಾವಿರಾರು ಎಕರೆ ಭೂಮಿ ಒತ್ತುವರಿ , ಅಕ್ರಮ ಖಾತೆ, ಮಾರಾಟವಾಗಿದ್ದರೂ ಅವುಗಳನ್ನು ಸ್ವಾಧೀನಕ್ಕೆ ಪಡೆದುಕೊಳ್ಳುವುದು ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ.
ರಾಜ ಮಹಾರಾಜರ ಕಾಲದಿಂದಲೂ ದೇವಾಲಯಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಬಹಳಷ್ಟು ಭೂಮಿಯನ್ನು ಇನಾಂ ಮತ್ತು ಬಳುವಳಿ ನೀಡಲಾಗಿತ್ತು. ಸ್ವಾತಂತ್ರ್ಯ ನಂತರದಲ್ಲಿದೇವಾಲಯಗಳು ಮತ್ತು ಅವುಗಳ ಆಸ್ತಿಗಳು ಮುಜರಾಯಿ ವ್ಯಾಪ್ತಿಗೆ ಬಂದರೂ ಆಸ್ತಿಗಳನ್ನು ದೇವಾಲಯಗಳ ಹೆಸರಿಗೆ ಮಾಡಿಸುವ ದಾಖಲೀಕರಣ ಪ್ರಕ್ರಿಯೆ ಕೈಗೊಳ್ಳಲಿಲ್ಲ. ಈ ಲೋಪದ ಕಾರಣದಿಂದಾಗಿ ಲಕ್ಷಾಂತರ ಎಕರೆ ಭೂಮಿ ಒತ್ತುವರಿ, ಅಕ್ರಮ ಮಾರಾಟವಾಗಿದೆ. ಕೂಲಿ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಭೂಮಿಯನ್ನು ಸಾಗುವಳಿ ಮಾಡಿದರೆ, ಪ್ರಭಾವಿಗಳು ಅಕ್ರಮ ಖಾತೆ ಮಾಡಿಸಿಕೊಂಡು ಪರಭಾರೆ ಮಾಡಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿಎ (205), ಬಿ (193) ಮತ್ತು ಸಿ (34168) ಶ್ರೇಣಿಯ 34,566 ದೇವಾಲಯಗಳಿವೆ. ಎ ಮತ್ತು ಬಿ ಶ್ರೇಣಿ ದೇವಾಲಯಗಳಿಗೆ ಉತ್ತಮ ಆದಾಯ ಇದ್ದರೆ ಸಿ ಶ್ರೇಣಿಯ ದೇವಾಲಯಗಳಿಗೆ ಸರಕಾರವೇ ವಾರ್ಷಿಕ 72 ಸಾವಿರ ರೂ. ತಸ್ತೀಕ್ ಮತ್ತು ವರ್ಷಾಸನ ನೀಡುತ್ತಿದೆ. ಭೂಮಿ ಅನ್ಯರ ಪಾಲಾದ ಬಳಿಕ ಸಾವಿರಾರು ದೇವಾಲಯಗಳ ನಿತ್ಯದ ಪೂಜೆಗೂ ಸರಕಾರದ ಅನುದಾನವನ್ನೇ ಕಾಯಬೇಕಾದ ಸ್ಥಿತಿ ಇದೆ.
2020ರಲ್ಲಿರಾಜ್ಯ ಸರಕಾರ ನಡೆಸಿದ ಸರ್ವೆ ಪ್ರಕಾರ ಈ ಎಲ್ಲದೇವಾಲಯಗಳ ಸುಮಾರು 40ಸಾವಿರ ಎಕರೆ ಭೂಮಿ(ಸರಕಾರಿ ಭೂಮಿಯನ್ನು ಖಾತೆ ಮಾಡಿಕೊಟ್ಟಿರುವುದರ ಹೊರತಾಗಿ) ಒತ್ತುವರಿಯಾಗಿರುವುದು ದೃಢಪಟ್ಟಿತ್ತು. ರಾಜ್ಯದೆಲ್ಲೆಡೆ ಒತ್ತುವರಿಯಾಗಿರುವ ಮುಜರಾಯಿ ಇಲಾಖೆ ಆಸ್ತಿಯನ್ನು ಅಳತೆಗೆ ಒಳಪಡಿಸಿ ದಾಖಲೆಗಳನ್ನು ಸಿದ್ಧಪಡಿಸಿ ಪ್ರತಿ ತಾಲೂಕಿನಲ್ಲಿಪ್ರತಿ ತಿಂಗಳು ಕನಿಷ್ಠ 5 ಖಾತೆಗಳನ್ನು ಮಾಡಿಕೊಡುವಂತೆ ರಾಜ್ಯ ಸರಕಾರ ಎಲ್ಲತಾಲೂಕುಗಳ ತಹಸೀಲ್ದಾರ್ ಗೆ ಸೂಚಿಸಿತ್ತು. ಇದರ ಅನ್ವಯ 2025ರ ಅಂತ್ಯದವರೆಗೆ 7125 ಅಧಿಸೂಚಿತ ದೇವಾಲಯಗಳ 18,870 ಎಕರೆ ಆಸ್ತಿಗಳನ್ನು ಅಳತೆ ಮಾಡಿ 17,202.02 ಎಕರೆ ವಿಸ್ತೀರ್ಣಕ್ಕೆ ಖಾತೆ ಮಾಡಿಕೊಡಲಾಗಿದೆ. ಇನ್ನೂ 27,441 ದೇವಾಲಯಗಳ ಆಸ್ತಿಗಳನ್ನು ಅಳತೆ ಮತ್ತು ಖಾತೆ ಮಾಡುವುದು ಬಾಕಿ ಇದೆ.
-----------
ಭೂ ವರಾಹ ಯೋಜನೆ
ದೇವಾಲಯಗಳ ಆಸ್ತಿ ಒತ್ತುವರಿ ಬಿಡಿಸಿ ಸಂರಕ್ಷಣೆ ಮಾಡುವ ಸಲುವಾಗಿ ಸ್ಥಿರಾಸ್ತಿಗಳ ದಾಖಲೀಕರಣ ಯೋಜನೆ ಕೈಗೊಳ್ಳಲು ರಾಜ್ಯ ಸರಕಾರವು ‘ಭೂ ವರಾಹ’ ಯೋಜನೆ ಜಾರಿಗೊಳಿಸಿ ಈ ಬಾರಿಯ ಬಜೆಟ್ ನಲ್ಲಿ15 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಸ್ಥಿರಾಸ್ತಿಗಳನ್ನು ಅಳತೆಯೊಂದಿಗೆ ದಾಖಲೀಕರಣ ಮಾಡಿ, ತಂತಿಬೇಲಿ/ಹಸಿರು ಬೇಲಿ ಅಥವಾ ಕಾಂಪೌಂಡ್ ನಿರ್ಮಿಸುವುದು ಇದರ ಉದ್ದೇಶ. ಭೂ ವರಾಹ ಯೋಜನೆ ಆರಂಭದ ಬೆನ್ನಲ್ಲೆಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಮಂಡ್ಯ, ಉಡುಪಿ, ದಕ್ಷಿಣ ಕನ್ನಡ, ಯಾದಗಿರಿ ಮತ್ತು ದಾವಣಗೆರೆ ಜಿಲ್ಲೆಗಳಿಂದ ಪ್ರಸ್ತಾವನೆಗಳೂ ಬಂದಿವೆ.
===
ಒತ್ತುವರಿ ತೆರವು ಸವಾಲುಗಳು
*ಬಹುತೇಕ ದೇವಾಲಯಗಳ ಜಮೀನು ಸರಕಾರಿ, ಅರಣ್ಯ ಭೂಮಿಯಾಗಿದ್ದರೂ ದೇವಾಲಯಗಳ ಹೆಸರಿಗೆ ಖಾತೆಯಾಗಿಲ್ಲ
*ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸೆÜ್ಥಗಳ ವ್ಯಾಪ್ತಿಯ ದೇವರ ಭೂಮಿ ದೇವಾಲಯದ ಹೆಸರಿಗೆ ಖಾತೆಯಾಗಿಲ್ಲ
*ದೇವರ ಭೂಮಿ ಗೇಣಿ ಮಾಡುತ್ತಿದ್ದ ಕೃಷಿಕರು ಮತ್ತು ಪೂಜಾರರು ಭೂ ಸುಧಾರಣೆ ಕಾಯಿದೆಯಡಿ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ
*ದೇವಾಲಯಗಳ ಇನಾಂ ಭೂಮಿಯನ್ನು ಖಾಸಗಿಯವರಿಗೆ ಮಂಜೂರು ಮಾಡಲಾಗಿದೆ
*ಕೆಲವೆಡೆ ಪಹಣಿಗಳಲ್ಲಿಸರಕಾರಿ ಬೀಳು, ಖರಾಬು, ಗೋಮಾಳ ಅಥವಾ ಖಾಸಗಿ ವ್ಯಕ್ತಿಗಳೊಂದಿಗೆ ದೇವಾಲಯದ ಹೆಸರು ಜಂಟಿ ಖಾತೆಯಾಗಿದ್ದರೂ ಪ್ರತ್ಯೇಕ ವಿಸ್ತೀರ್ಣ ದಾಖಲಾಗಿಲ್ಲ
*ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ದೇವಾಲಯಗಳ ಪಹಣಿಯಲ್ಲಿಮೂಲ ಗೇಣಿದಾರರ ಹೆಸರನ್ನು ಕಾಲಂ 11ರ ಬದಲಿಗೆ 9ರಲ್ಲಿಜಂಟಿಯಾಗಿ ದಾಖಲಿಸಲಾಗಿದೆ
*ಕೆಲವೆಡೆ ಆಕಾರ ಬಂದು ವಿಸ್ತೀರ್ಣ ಮತ್ತು ಪಹಣಿ ವಿಸ್ತೀರ್ಣಕ್ಕೂ ತಾಳೆ ಆಗುತ್ತಿಲ್ಲ
---------------------
* ಮುಜರಾಯಿ ದೇವಸ್ಥಾನಗಳು- 34,566
* ದೇವಸ್ಥಾನಗಳ ಆಸ್ತಿ ಒತ್ತುವರಿ- ಸುಮಾರು 40 ಸಾವಿರ ಎಕರೆ
* 7125 ದೇವಾಲಯಗಳ 17,202.02 ಎಕರೆ ವಿಸ್ತೀರ್ಣಕ್ಕೆ ಖಾತೆ
* ಇನ್ನೂ 27,441 ದೇವಾಲಯಗಳ ಆಸ್ತಿ ಅಳತೆ ಮತ್ತು ಖಾತೆ ಬಾಕಿ
---------------------
ದೇವಾಲಯಗಳ ಆಸ್ತಿ ಒತ್ತುವರಿ ತೆರವು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕಾನೂನಾತ್ಮಕ ಸಮಸ್ಯೆಗಳನ್ನು ನಿವಾರಿಸಲು ನಿರಂತರ ಸಭೆಗಳನ್ನು ನಡೆಸಲಾಗುತ್ತಿದೆ. ಕೆಲವನ್ನು ಸರಕಾರದ ಮಟ್ಟದಲ್ಲಿಬಗೆಹರಿಸಲು ಚಿಂತನೆ ನಡೆಸಲಾಗಿದೆ. ಅಳತೆ ಮತ್ತು ಖಾತೆ ಬಳಿಕ ಆಸ್ತಿ ಸಂರಕ್ಷಣೆಗಾಗಿ ಭೂ ವರಾಹ ಯೋಜನೆ ರೂಪಿಸಲಾಗಿದೆ.
- ರಾಮಲಿಂಗಾರೆಡ್ಡಿ, ಸಚಿವರು, ಸಾರಿಗೆ ಮತ್ತು ಮುಜರಾಯಿ ಖಾತೆ.

