ಭೂ ಸಂತ್ರಸ್ತ ರೈತರಿಗೆ ಅನ್ಯಾಯ: ಪ್ರಧಿತಿಧಿಭಧಿಟಧಿನೆ
ವಿಕ ಸುದ್ದಿಲೋಕ ಕುಡಿತಿನಿ
ಭೂ ಸಂತ್ರಸ್ತ ರೈತರಿಗೆ ಅನ್ಯಾಯ ಖಂಡಿಸಿ ರಾಜ್ಯ ಸರಕಾರ ಹಾಗೂ ಕರ್ನಾಟಕ ರೈಗಾರಿಕ ಪ್ರದೇಶ ಅಭಿವೃದ್ಧಿ ಮಂಡಳಿ ವಿರುದ್ಧ ಪಟ್ಟಣ ಸಮೀಪದ ಹರಗಿನಡೋಣಿ ಗ್ರಾಮದಲ್ಲಿಭೂ ಸಂತ್ರಸ್ತರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ , ಪ್ರಗತಿಪರ ರಕ್ಷಣಾ ವೇದಿಕೆ ಹಾಗೂ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೆಕೆಆರ್ ಡಿಬಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಮುಖಂಡ ಎಂ.ತಿಪ್ಪೇಸ್ವಾಮಿ ಮಾತನಾಡಿ, ‘‘ಕುಡತಿನಿ ಪಟ್ಟಣ ಸೇರಿ ಎರ್ರಿಂಗಳಿಗಿ, ಸಿದ್ದಮ್ಮನಹಳ್ಳಿ, ಜಾನೆಕುಂಟೆ, ಹರಗಿನಡೋಣಿ, ವೇಣಿ ವೀರಾಪುರ ಹಾಗೂ ಇನ್ನಿತರ ಗ್ರಾಮಗಳ ರೈತರ ಒಟ್ಟು 13, ಸಾವಿರ ಎಕರೆ ಜಮೀನನ್ನು ಕಾರ್ಖಾನೆ ಸ್ಥಾಪಿಸಿ, ಉದ್ಯೋಗ ನೀಡುತ್ತೇವೆ ಎಂದು ಮೋಸದ ಬೆಲೆಗೆ ರೈತರಿಂದ ವಶಪಡಿಸಿಕೊಂಡು, ರೈತರ ಅನುಮತಿ ಪಡೆಯದೆ ಭೂಸ್ವಾಧೀನ ಕಾಯಿದೆ ತಿದ್ದುಪಡಿ ಮಾಡಿಕೊಂಡು ಕೆಲ ಕಂಪನಿಗಳ ಮಾಲೀಕರು ದುರುಪಯೋಗ ಮಾಡಿಕೊಂಡಿದ್ದಾರೆ. ಕಾರ್ಖಾನೆ ಸ್ಥಾಪಿಸದೆ, ಉದ್ಯೋಗ ನೀಡದೆ ಸರಕಾರದ ಹೆಸರು ಹೇಳಿ ರೈತರಿಗೆ ಅನ್ಯಾಯ ಎಸಗಿದ್ದಾರೆ. 14 ವರ್ಷದಿಂದ ರೈತರಿಗೆ ಜಮೀನು ಇಲ್ಲದೆ, ಉದ್ಯೋಗ ಇಲ್ಲದೆ ಸಂಸಾರ ನಿರ್ವಹಣೆ ಮಾಡುವುದೇ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ,’’ ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘‘ಈಗಾಗಲೇ ರೈತರಿಗೆ ಜಮೀನು ವಾಪಸ್ ನೀಡುವಂತೆ 1210 ದಿನಗಳ ಕಾಲ ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೂ ಅಧಿಕಾರಿಗಳು ಹಾಗೂ ಸಚಿವರು ನಿರ್ಲಕ್ಷತ್ರ್ಯ ವಹಿಸಿದ್ದಾರೆ. 2010ರ ಅಂದಿನ ಭೂ ಬೆಲೆ, ಮಾನ್ಯ ಜಿಲ್ಲಾನ್ಯಾಯಾಲಯ ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ 30,20,270.ರೂ ನಿಗದಿ ಮಾಡಬೇಕಾಗಿತ್ತು. ಆದರೆ ಅಂದಿನ ಸರಕಾರ ರೈತರಿಂದ ಬಲವಂತವಾಗಿ ಕಡಿಮೆ ಬೆಲೆಗೆ ವಶಪಡಿಸಿಕೊಂಡು ಕೈಗಾರಿಕೆಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ. ರೈತರಿಗೆ ನ್ಯಾಯ ಒದಗಿಸುವ ಕೆಲಸ ಸರಕಾರದಿಂದ ಆಗಬೇಕು,’’ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ದಾದಾ ಕಲಂದರ್ ಬಾಷಾ, ಜಿಲ್ಲಾಜಂಟಿ ಕಾರ್ಯದರ್ಶಿ ಪಂಪನಗೌಡ, ಭೂ ಸಂತ್ರಸ್ತರ ಹೋರಾಟ ಸಮಿತಿ ಹಿರಿಯ ಮುಖಂಡ ಹಾಗೂ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಜುಂಗ್ಲೀಸಾಬು, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಂಪತ್ ಕುಮಾರ್ , ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಾವಿ ಶಿವಕುಮಾರ್ , ಭೂಸಂತ್ರಸ್ತರು ಭಾಗವಹಿಸಿದ್ದರು.
ಪೋಟೋ : ಬಿಎಲ್ ವೈ9ಕೆಡಿಟಿ01 : ಕುಡಿತಿನಿ ಸಮೀಪದ ಹರಗಿನಡೋಣಿ ಗ್ರಾಮದಲ್ಲಿಭೂ ಸಂತ್ರಸ್ತರ ಹೋರಾಟ ಸಮಿತಿಯಿಂದ ರಾಜ್ಯ ಸರಕಾರ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿ, ಕೆಕೆಆರ್ ಡಿಬಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

