ಎಸ್ ಬಿಜಿ ಪಿಯು ಕಾಲೇಜಿಗೆ ಶೇ.100

Contributed byrangaswamyrangatm@gmail.com|Vijaya Karnataka

ಮಾಯಸಂದ್ರದ ಎಸ್‌.ಬಿ.ಜಿ ಪಿ.ಯು ಕಾಲೇಜು 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಶೇ.100ರಷ್ಟು ಫಲಿತಾಂಶ ಸಾಧಿಸಿದೆ. ವಿಜ್ಞಾನ ವಿಭಾಗದಲ್ಲಿ 72 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಿಲ್ಪಶ್ರೀ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದ 55 ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಉತ್ತೀರ್ಣರಾಗಿದ್ದಾರೆ. ಸಂಜಯ್‌ ವಿ.ಕೆ. ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಯಶಸ್ವಿನಿ ಟಿ.ಬಿ. ಮತ್ತು ಇರಮ್‌ ಫಾತಿಮಾ ಕೂಡ ಉತ್ತಮ ಅಂಕ ಪಡೆದಿದ್ದಾರೆ. ಸಂಸ್ಥೆಯ ಕಾರ್ಯದರ್ಶಿಗಳು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

shree adichunchanagiri education trusts sbj pu college achieves 100 result

ತುರುವೇಕೆರೆ: ತಾಲೂಕಿನ ಮಾಯಸಂದ್ರ ಟಿ.ಬಿ. ಕ್ರಾಸ್ ನಲ್ಲಿರುವ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಎಸ್ .ಬಿ.ಜಿ ಪಿ.ಯು ಕಾಲೇಜು 2026ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿಯಲ್ಲಿಶೇ.100ಕ್ಕೆ 100ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದೆ

ವಿಜ್ಞಾನ ವಿಭಾಗದಲ್ಲಿ72 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 23 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿಉತ್ತೀರ್ಣರಾಗಿದ್ದಾರೆ. ಶಿಲ್ಪಶ್ರೀ 581 ಅಂಕ ಪಡೆದುಕೊಳ್ಳುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ

ವಾಣಿಜ್ಯ ವಿಭಾಗದಲ್ಲಿ55 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾವಿದ್ಯಾರ್ಥಿಗಳು ಉತ್ತೀರ್ಣರಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ನೀಡಿರುತ್ತಾರೆ. ಹಾಜರಾಗಿದ್ದ ವಿದ್ಯಾರ್ಥಿಗಳಲ್ಲಿ28 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿಉತ್ತೀರ್ಣರಾಗಿದ್ದು, ಸಂಜಯ್ ವಿ.ಕೆ. 587 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಉಳಿದಂತೆ, ವಾಣಿಜ್ಯ ವಿಭಾಗದಲ್ಲಿಯಶಸ್ವಿನಿ ಟಿ.ಬಿ. 583 ಅಂಕ ಮತ್ತು ವಿಜ್ಞಾನ ವಿಭಾಗದಲ್ಲಿಇರಮ್ ಫಾತಿಮಾ 570 ಅಂಕಗಳಿಸಿರುತ್ತಾರೆ.

ಉತ್ತಮ ಫಲಿತಾಂಶ ನೀಡಿದ ಎಲ್ಲಾವಿದ್ಯಾರ್ಥಿಗಳಿಗೂ ಹಾಗೂ ಶ್ರಮಿಸಿದ ಎಲ್ಲಾಉಪನ್ಯಾಸಕರಿಗೂ ಮತ್ತು ಪ್ರಾಂಶುಪಾಲರಿಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನ ಸ್ವಾಮೀಜಿ ಅಭಿನಂದಿಸಿ, ವಿದ್ಯಾಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳ ಭವಿಷ್ಯ ಉತ್ತುಂಗಕ್ಕೇರಲಿ ಎಂದು ಆಶೀರ್ವದಿಸಿದ್ದಾರೆ.

09 ಟಿವಿಕೆ 02

ಪೋಟೊ 01: ಸಂಜಯ್ ವಿ.ಕೆ. -587

ಫೋಟೋ 02: ಶಿಲ್ಪಶ್ರೀ- 581

ಫೋಟೊ 03 ಯಶಸ್ವಿನಿ ಟಿ.ಬಿ. -583

ಪೋಟೊ 04 ಇರಮ್ ಫಾತಿಮಾ -570