ರೈತರಿಗೆ ‘ಕೆರೆ’ ಜೀವನಾಡಿ!
* ಸಂರಕ್ಷಣೆ ಮರೆತ ಸಣ್ಣ ನೀರಾವರಿ ಇಲಾಖೆ
* ಸಮರ್ಪಕ ನಿರ್ವಹಣೆಗೆ ಆಗ್ರಹ
ಶ್ರೀನಿವಾಸ ಪೂಜಾರ ಕನಕಗಿರಿ
ಕೆರೆ ತುಂಬಿಸುವ ಯೋಜನೆಯಿಂದ ತಾಲೂಕು ವ್ಯಾಪ್ತಿಯ ಕೆರೆಗಳಿಗೆ ನೀರು ಸಿಕ್ಕಿದ್ದು, ಅಂತರ್ಜಲ ಮಟ್ಟ ಸುಧಾರಿಸಿದೆ. ಆದರೆ ನಿರ್ವಹಣೆ ಕೊರತೆಯಿಂದ ಕೆಲ ಕೆರೆಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ನೀರಾವರಿ ಸೌಲಭ್ಯದಿಂದ ರೈತರು ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಬೋರ್ ವೆಲ್ ಗಳಲ್ಲಿನೀರು ಹೆಚ್ಚಾಗಿ ರೈತರಿಗೆ ವರದಾನವಾಗಿದೆ.
ಅಂತರ್ಜಲ ವೃದ್ಧಿ: ತಾಲೂಕು ವ್ಯಾಪ್ತಿಯ ಕೆರೆಗಳು ತುಂಬಿದಾಗ, ನೀರು ಭೂಮಿಯೊಳಗೆ ಇಂಗಿ, ಬತ್ತಿಹೋದ ಕೊಳವೆಬಾವಿಗಳಿಗೆ
ಮರುಜೀವ ಬಂದಿದೆ. ಕೆರೆಗಳಿಂದ ಭೂಮಿಯ ಅಂತರ್ಜಲ ಹೆಚ್ಚಳದಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗಿದೆ.
12 ಕೆರೆಗಳು: ತಾಲೂಕು ವ್ಯಾಪ್ತಿಯಲ್ಲಿಕೆ. ಕಾಟಾಪುರ, ಸಿರಿವಾರ, ಕರಡೋಣಾ, ಲಕ್ಷ್ಮಿದೇವಿ, ರಾಂಪುರ ಮತ್ತು ಇಂಗಳದಾಳ, ರಾಮದುರ್ಗ, ನಾಗಲಾಪುರ, ವಿಠಲಾಪುರ, ಬಸರಿಹಾಳ, ಗೌರಿಪುರ ಮತ್ತು ದೇವಲಾಪುರ ಕೆರೆಗಳು ಹಾಗೂ ಹುಲಿಹೈದರ್ ಗ್ರಾಪಂ ವ್ಯಾಪ್ತಿಯಲ್ಲಿ ಲಾಯದುಣಿಸಿ ಕೆರೆ ತುಂಬಿವೆ.
ಮಣ್ಣು ದುರ್ಬಳಕೆ : ಮನರೇಗಾ ಯೋಜನೆಯಡಿ ಕೆರೆಯಲ್ಲಿಸಂಗ್ರಹವಾಗಿರುವ ಹೂಳು ತೆಗೆಸಲಾಗಿದೆ.
ಆದರೆ ಕೆರೆಯಲ್ಲಿನ ಮಣ್ಣು ಇಟ್ಟಂಗಿ ಬಟ್ಟಿಗಳ ಮಾಲೀಕರ ಪಾಲಾಗುತ್ತಿದೆ. ಭಾರಿ ಗಾತ್ರದ ವಾಹನಗಳ ಮೂಲಕ ಬಸಾಪಟ್ಟಣ, ವೆಂಕಟಗಿರಿ ಕಡೆ
ಸಾಗಿಸಲಾಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಮರುಜೀವ ನೀಡಿದ ಮನರೇಗಾ : ಬಸರಿಹಾಳ, ಗೌರಿಪುರ, ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಕೆರೆಗಳಲ್ಲಿಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತುವ ಕಾಮಗಾರಿಯಿಂದ ಕೆರೆಗಳಲ್ಲಿಹೆಚ್ಚಿನ ನೀರು ಸಂಗ್ರಹವಾಗಿದೆ. ಜನ - ಜಾನುವಾರುಗಳಿಗೆ ಅನುಕೂಲವಾಗಿದೆ.
===========
ಮುಳ್ಳು ಕಂಟಿ ತೆರವುಗೊಳಿಸಿ
ಕನಕಗಿ ತಾಲೂಕು ವ್ಯಾಪ್ತಿಯ ಕೆಲ ಕೆರೆಗಳ ಸುತ್ತ ಹಾಗೂ ಕೆರೆ ಅಂಗಳದಲ್ಲಿಮುಳ್ಳು ಕಂಟಿ ಬೆಳೆದಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ
ಎಂದು ರೈತರು ಹಾಗೂ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
====
ನೀರು ಉಳ್ಳವರ ಪಾಲು
ಜನ ಜಾನುವಾರುಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೆ.ಕಾಟಾಪುರ ಕೆರೆಗೆ ನೀರು ತುಂಬಿಸಲಾಗುತ್ತದೆ. ಆದರೆ ಆಂಧ್ರ ಮೂಲದ ಕೆಲವರು ಪೈಪ್ ಲೈನ್ ಅಳವಡಿಸಿಕೊಂಡು ಕೆರೆ ನೀರು ಬಳಸಿಕೊಳ್ಳುತ್ತಿದ್ದಾರೆ. ಕೃಷಿ ಹಣ್ಣು, ತರಕಾರಿ, ಹೂವು, ಭತ್ತ ನಾಟಿ ಮಾಡಿಕೊಂಡಿದ್ದಾರೆ.
=========
ಹಳ್ಳ ಹಿಡಿದ ಯೋಜನೆ
ಕುಡಿಯುವ ನೀರಿನ ಬವಣೆ ನೀಗಿಸಲು ತಾಲೂಕಿನಲ್ಲಿ10 ಕೆರೆಗಳು ಇವೆ. ಆದರೆ ಸೂಕ್ತ ರಕ್ಷಣೆಕೊರತೆಯಿಂದ ಹೂಳು ತುಂಬಿ ನೀರಿಲ್ಲದೆ ಒತ್ತುವರಿ ಆಗಿವೆ. ಜಿಲ್ಲಾಪಂಚಾಯಿತಿ, ತಾಲೂಕು ಪಂಚಾಯಿತಿಯಿಂದ ಅನುದಾನ ಬಂದರೂ ಕೆಲಸ ಮಾತ್ರ ಆಗಿಲ್ಲ. ಬಸರಿಹಾಳ, ಗೌರಿಪುರ, ಗೋಡಿನಾಳ, ಚಿಕ್ಕಖೇಡಾ ಗ್ರಾಮಗಳಲ್ಲಿಆರ್ ಒ ಪ್ಲಾಂಟ್ ನಿರುಪಯುಕ್ತವಾಗಿವೆ. ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸಲು ಹಣ ಖರ್ಚು ಮಾಡಿದರೂ ಯೋಜನೆ ಹಳ್ಳ ಹಿಡಿದಿದೆ. ಬೈಲಕ್ಕುಂಪುರ, ಹನುಮನಾಳ, ರಾಮದುರ್ಗಾ, ಬಂಕಾಪುರ, ಕರಡೋಣಿಯಲ್ಲಿನೀರಿನ ಸಮಸ್ಯೆಯಿದೆ.
==========
ಭೂಮಿಗೆ ಬಂಗಾರದ ಬೆಲೆ
ಕನಕಗಿ ತಾಲೂಕು ವ್ಯಾಪ್ತಿಯಲ್ಲಿ ಒಣ ಬೇಸಾಯ ಇತ್ತು. ಬೇಸಿಗೆ ಸಮಯದಲ್ಲಿಜನ ಗುಳೆ ಹೋಗುತ್ತಿದ್ದರು. ಹೀಗಾಗಿ ಸಚಿವ ಶಿವರಾಜ ತಂಗಡಗಿ ಅವರು ವಿಶೇಷ ಕಾಳಜಿ ವಹಿಸಿ ತುಂಗಭದ್ರಾ ನದಿಯಿಂದ ಏತ ನೀರಾವರಿ, ಕೆಬಿಜೆಎನ್ ಎಲ್ , ಕೆಎನ್ ಎನ್ ಎಲ್ ಯೋಜನೆಗಳ ಮೂಲಕ ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದರು. ಹೀಗಾಗಿ ತಾಲೂಕಿನ 12 ಕೆರೆಗಳಿಗೆ ನೀರು ಸಿಕ್ಕಿದೆ. ಕನಕಗಿರಿ ತಾಲೂಕಿನಿಂದ ಗುಳೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಈ ಭಾಗದ ಭೂಮಿಗೆ ಬಂಗಾರದ ಬೆಲೆ ಬಂದಿದೆ.
ಕೋಟ್ :
ಕೆರೆಯೊಳಗೆ, ಕೆರೆ ಮೇಲಿನ ಫಲವತ್ತಾದ ಮಣ್ಣನ್ನು ಬೇಕಾ ಬಿಟ್ಟಿ ಬಳಸಲಾಗುತ್ತಿದೆ. ಕೆರೆ ಸುತ್ತ ಮುಳ್ಳು ಕಂಟಿ ಬೆಳೆದಿವೆ. ಆದರೆ ಕ್ರಮಕ್ಕೆ ಮುಂದಾಗಿಲ್ಲ.
ಹೆಸರುಹೇಳಚ್ಛಿಸದ ವೃದ್ಧ, ಕನಕಗಿರಿ
====
ಕೋಟ್ :
ಗ್ರಾಮ ಪಂಚಾಯಿತಿವ್ಯಾಪ್ತಿಯ ಕೆಲ ಕೆರೆಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಡೆದ ಹೂಳೆತ್ತುವ ಕಾಮಗಾರಿಗಳಿಂದ ಕೆರೆಗಳಲ್ಲಿಹೆಚ್ಚಿನ ನೀರು ಸಂಗ್ರಹವಾಗಿದೆ.
ಬೇಸಿಗೆ ಸಮಯದಲ್ಲಿನೀರಿನ ಸಮಸ್ಯೆ ಇರಲ್ಲ.
ಕೆ.ರಾಜಶೇಖರ, ತಾಪಂ, ಇಒ, ಕನಕಗಿರಿ
10ಕೆಎನ್ ಕೆಫೋಟೋ-1 ಕನಕಗಿರಿ ಪಟ್ಟಣದ ಲಕ್ಷಿತ್ರ್ಮೕದೇವಿ ಕೆರೆ ಹೂರನೋಟ
10ಕೆಎನ್ ಕೆಫೋಟೋ-2 ತಾಲೂಕಿನ ಸೋಮಸಾಗರ ಗ್ರಾಮದ ಕೆರೆ ತುಂಬಿದ ಹಿನ್ನೆಲೆಯಲ್ಲಿಅಧಿಕಾರಿಗಳು ಭೇಟಿ ನೀಡಿರುವುದು.
10ಕೆಎನ್ ಕೆಫೋಟೋ-3 ತಾ.ಪಂ.ಇಒ ರಾಜಶೇಖರ ಕನಕಗಿರಿ
10ಕೆಎನ್ ಕೆಫೋಟೋ-4 ಕನಕಗಿರಿ ತಾಲೂಕಿನ ಕೆ.ಕಾಟಾಪುರ ಕೆರೆಯಲ್ಲಿಅಕ್ರಮವಾಗಿ ಪೈಪ್ ಲೈನ್ ಮೂಲಕ ನೀರು ಸಾಗಿಸಿಕೊಳ್ಳುತ್ತಿರುವುದು.
10ಕೆಎನ್ ಕೆಫೋಟೋ-5 ಕನಕಗಿರಿ ತಾಲೂಕಿನ ನಾಗಲಾಪುರ ಕೆರೆಯಲ್ಲಿಮುಳ್ಳುಕಂಟಿ ಬೆಳೆದಿರುವುದು.

