ವಿಕ ಸುದ್ದಿಲೋಕ ಹೊನ್ನಾವರ
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಿರಿಯ ಮತ್ತು ಅನುಭವಿ ರಾಜಕಾರಣಿಯಾಗಿದ್ದು ಅವರು ರಾಜಕೀಯ ವೇದಿಕೆಗಳಲ್ಲಿಬಾಲಿಷ ಹಾಗೂ ಅಸಂವಿಧಾನಿಕ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಸ್ಥಾನಮಾನಕ್ಕೆ ಶೋಭೆ ತರುವಂಥದ್ದಲ್ಲಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ ಮುರುಡೇಶ್ವರ ಖಂಡಿಸಿದ್ದಾರೆ.
ಈ ಕುರಿತು ಅವರು ಪತ್ರಿಕಾ ಹೇಳಿಕೆ ನೀಡಿ, ‘‘ಕೇರಳದಲ್ಲಿಚುನಾವಣಾ ಪ್ರಚಾರದ ವೇಳೆ ಗುಜರಾತ ರಾಜ್ಯದವರನ್ನು ಅನಕ್ಷರಸ್ಥರೆಂದು ಹೇಳಿದ್ದು, ಓಡಿಸ್ಸಾದಲ್ಲಿಬಿಜೆಪಿ ಮತ್ತು ಆರ್ ಎಸ್ ಎಸ್ ವಿಷಸರ್ಪಗಳಾಗಿದ್ದು ಮುಸಲ್ಮಾನರು ಇವೆರಡನ್ನು ಹೊಡೆದು ಕೊಲ್ಲಬೇಕು ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದು ಖಂಡನೀಯ’’ ಎಂದಿದ್ದಾರೆ.
ಕರ್ನಾಟಕದಲ್ಲಿಕಾಂಗ್ರೆಸ್ ಸರಕಾರವು ದ್ವೇಷ ಭಾಷಣದ ವಿರುದ್ಧ ಕಾನೂನು ತಂದಿದೆ. ಆದರೆ ಇವರದೇ ಪಕ್ಷದ ರಾಷ್ಟ್ರೀಯ ನಾಯಕರು ಅನಾಗರಿಕ ಶಬ್ದ ಬಳಸಿ ಭಾಷಣ ಮಾಡುತ್ತಾರೆ. ಅವರ ಭಾಷಣಗಳು ಕಾರ್ಯಕರ್ತರಿಗೆ, ಯುವಪೀಳಿಗೆಗೆ ಮಾದರಿಯಾಗುವ ಬದಲು ದ್ವೇಷ ಬಿತ್ತುವಂತಾಗಿದೆ ಎಂದು ಖಂಡಿಸಿದ್ದಾರೆ.
ಫೋಟೋ ಇದೆ:
ಈಶ್ವರ ನಾಯ್ಕ

