ಈ ಭಾರಿ 11 ಸಾವಿರ ಹೆಚ್ಚು ಮತದಾನ!

Contributed bymanjunath.lokanath@timesgroup.com|Vijaya Karnataka

ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ 11,625 ಹೆಚ್ಚು ಮತದಾರರು ಹಕ್ಕು ಚಲಾಯಿಸಿದ್ದಾರೆ. 2023ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮತದಾನ ದಾಖಲಾಗಿದೆ. ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಈ ಹೆಚ್ಚುವರಿ ಮತಗಳು ಯಾವ ಪಕ್ಷಕ್ಕೆ ಲಾಭ ತಂದುಕೊಡಲಿವೆ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಶುರುವಾಗಿದೆ.

by election sees 11625 more votes cast beginning of political calculations

ಕಿಕ್ಕರ್ : 2023 ಚುನಾವಣೆಯಲ್ಲಿ1,46,406 ಮಂದಿ ಮತದಾನ | ಉಪ ಚುನಾವಣೆಯಲ್ಲಿ1,58,131 ಮಂದಿ ಮತದಾನ | ಹೆಚ್ಚಿನ ಮತಗಳ ಲೆಕ್ಕಾಚಾರ ಶುರು

---

ಈ ಭಾರಿ 11 ಸಾವಿರ ಹೆಚ್ಚು ಮತದಾನ!

ವಿಕ ವಿಶೇಷ ದಾವಣಗೆರೆ

ದಕ್ಷಿಣ ಉಪ ಚುನಾವಣೆಯಲ್ಲಿಹಿಂದಿನ 2023ರ ಚುನಾವಣೆಗಿಂತ ಈಗ ನಡೆದ ಉಪ ಚುನಾವಣೆಯಲ್ಲಿ11625 ಮಂದಿ ಹೆಚ್ಚು ಮತದಾನ ಮಾಡಿದ್ದಾರೆ. ಈ ಹೆಚ್ಚಿನ ಮತದಾನದ ಲಾಭ ಯಾರಿಗಾಗಬಹುದು ಎಂಬ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.

2023ರ ಚುನಾವಣೆಯಲ್ಲಿ2,10,708 ಮತದಾರರಿದ್ದರು, ಇದರಲ್ಲಿ1, 48,406 ಮತದಾರರು ಮತ ಚಲಾಯಿಸಿದ್ದರು. ಕಳೆದ ಮೂರು ವರ್ಷದಲ್ಲಿಈ ಕ್ಷೇತ್ರದಲ್ಲಿ21 ಸಾವಿರ ಮತದಾರರು ಜಾಸ್ತಿಯಾಗಿದ್ದಾರೆ. ಈ ಉಪ ಚುನಾವಣೆಯಲ್ಲಿ2, 31,072 ಮತದಾರರಿದ್ದು ಇದರಲ್ಲಿ1,58,131 ಮಂದಿ ಮತ ಚಲಾಯಿಸಿದ್ದಾರೆ.

ಯಾರಿಗೆ ಲಾಭ:

ಹಿಂದಿನ ಬಾರಿಗಿಂತ ಉಪ ಚುನಾವಣೆಯಲ್ಲಿ11,625 ಮಂದಿ ಹೆಚ್ಚು ಮತದಾನವಾಗಿದ್ದು ಇದರ ಲಾಭ ಯಾವ ಪಕ್ಷಕ್ಕೆ ಸಿಗಲಿದೆ ಎಂಬ ಲೆಕ್ಕಾಚಾರವನ್ನು ರಾಜಕೀಯ ಪಕ್ಷಗಳು ಮತ್ತು ಮುಖಂಡರು ಲೆಕ್ಕ ಹಾಕುತ್ತಿದ್ದಾರೆ. 2023ರಲ್ಲಿಚಲಾವಣೆಯಾದ ಮತಗಳಲ್ಲಿಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ 84,298, ಬಿಜೆಪಿಯ ಅಜಯ್ ಕುಮಾರ್ 56410, ಎಸ್ ಡಿಪಿಐ 1311, ಜೆಡಿಎಸ್ 1296 ಹಾಗೂ ಎಎಪಿ 562 ಮತ ಪಡೆದಿದ್ದರು. ಈಗ ಹೆಚ್ಚುವರಿಯಾಗಿರುವ ಈ ಮತಗಳನ್ನು ಯಾವ ಪಕ್ಷ ಬಾಚಿಕೊಳ್ಳಲಿದೆ ಎಂಬ ಲೆಕ್ಕಾಚಾರ ದೊಡ್ಡ ಮಟ್ಟದಲ್ಲಿನಡೆದಿದೆ.

ಬಿಸ್ಲೇರಿ ಶೇ.94 ಮತದಾನ:

ಕ್ಷೇತ್ರದಲ್ಲಿಒಟ್ಟು ಶೇ. 68.43ರಷ್ಟು ಮತದಾನವಾಗಿದೆ. ಬಿಸ್ಲೇರಿ ಗ್ರಾಮದಲ್ಲಿಅತಿ ಹೆಚ್ಚು ಶೇ.94.35ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರ ಜತೆ ಶೇ.90ಕ್ಕಿಂತ ಹೆಚ್ಚು ಆರು ಮತಗಟ್ಟೆಗಳಲ್ಲಾಗಿದೆ. ಜರಿಕಟ್ಟೆ 1 ರಲ್ಲಿ90.71, ಜರೀಕಟ್ಟೆ 3 ರಲ್ಲಿಶೇ. 90.10 ಮತದಾನವಾಗಿದೆ. ಈ ಗ್ರಾಮದ ಇನ್ನುಳಿದ 2 ಮತಗಟ್ಟೆಯಲ್ಲೂಶೇ.89ರಷ್ಟು ಮತದಾನವಾಗಿದೆ.

ಚಂದ್ರೇನಹಳ್ಳಿಯಲ್ಲೂಕೂಡ ಶೇ. 93.90ರಷ್ಟು ಜನ ಮತ ಚಲಾಯಿಸಿದ್ದಾರೆ. ಬುಳ್ಳಾಪುರ ಶೇ. 93.12, ನಾಯಕನಹಳ್ಳಿ, ಶೇ. 91.24ರಷ್ಟು ಮಂದಿ ಮತದಾನದ ಹಕ್ಕು ಬಳಸಿದ್ದು, ಈ ಗ್ರಾಮಗಳಲ್ಲಿದಾಖಲೆಯ ಮತದಾನ ಆಗಿದೆ. ಇನ್ನುಳಿದಂತೆ ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಅತಿ ಹೆಚ್ಚು ಮತದಾನವಾಗಿದೆ.

---

ಬಾಕ್ಸ್ ...

ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್ ಗೆ

ಕಳೆದ ಹತ್ತು ದಿನ ದಾವಣಗೆರೆ ನಗರದಲ್ಲಿಕುಂಭದ್ರೋಣ ಮಳೆಯಂತೆ ಚುನಾವಣೆ ಪ್ರಚಾರ ನಡೆದಿತ್ತು. ಎರಡೂ ಪಕ್ಷಗಳ ಕಾರ್ಯಕರ್ತರಿಂದಿಡಿದು ಮುಖಂಡರು, ನಾಯಕರು, ರಾಜ್ಯ ನಾಯಕರು ದಾವಣಗೆರೆಯಲ್ಲಿಬೀಡುಬಿಟ್ಟು ಪ್ರಚಾರದ ಮಳೆ ಸುರಿಸಿದ್ದರು. ಬಂದ ಎಲ್ಲನಾಯಕರಿಗೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಕಾಂಗ್ರೆಸ್ ಅಭ್ಯರ್ಥಿ ಸಮಥ್ ರ್ ಶಾಮನೂರು ಸಾಥ್ ನೀಡಿ ಸುಸ್ತಾಗಿದ್ದರು. ಈಗ ಚುನಾವಣೆ ಮಳೆ ನಿಂತು ಅಭ್ಯರ್ಥಿಗಳು, ಮುಖಂಡರು, ನಾಯಕರು ಎಲ್ಲರಿಲ್ಸಾಕ್ಸ್ ಮೂಡ್ ಗೆ ಜಾರಿದ್ದರು. ಮಳೆ ನಿಂತರು ಮರದ ಹನಿ ನಿಲ್ಲಲಿಲ್ಲಎಂಬಂತೆ ಇಡೀ ದಿನ ಸೋಲು, ಗೆಲುವು ಪ್ರಚಾರದ ಚರ್ಚೆ ನಡೆಸಿದರು.

----

ವೋಟಿಂಗ್ ಗ್ರಾಮೀಣ ಜನ ಗೆಲುವು

ಒಟ್ಟು 284 ಮತಗಟ್ಟೆಗಳಲ್ಲಿ18 ಮತಗಟ್ಟೆಗಳಲ್ಲಿಶೇ.80ಕ್ಕಿಂತ ಹೆಚ್ಚು ಮತದಾನವಾಗಿದೆ. ಶೇ.90 ಮತ್ತು ಶೇ.80ಕ್ಕಿಂತ ಹೆಚ್ಚು ಮತದಾನ ಆಗಿರುವುದು ಗ್ರಾಮೀಣ ಪ್ರದೇಶದಲ್ಲಿದ್ದು, ಮತದಾನದಲ್ಲಿಇವರು ಮೇಲುಗೈ ಸಾಧಿಸಿದ್ದಾರೆ. ಒಂದರ್ಥದಲ್ಲಿಗ್ರಾಮೀಣ ಪ್ರದೇಶದ ಜನ ಮತದಾನದಲ್ಲಿಗೆಲುವು ಸಾಧಿಸಿದ್ದಾರೆ.

----

ಅತಿ ಕಡಿಮೆ ಶೇ. 43.65

ದಾವಣಗೆರೆ ನಗರದ ದೇವರಾಜ ಅರಸು, ಸ್ವಿಮ್ಮಿಂಗ ಫೂಲ್ ಬೂತ್ ನಲ್ಲಿಅತಿ ಕಡಿಮೆ ಶೇ.43.65 ರಷ್ಟು ಮತದಾನವಾಗಿದೆ, ಶೇ.50ಕ್ಕೂ ಕಡಿಮೆ ಮತದಾನ ಆಗಿರುವ ಹಲವು ಬೂತ್ ಗಳಿದ್ದು ಅವು ನಗರ ಪ್ರದೇಶಗಳಲ್ಲಿವೆ. ಶಿಕ್ಷಣವಂತರು ಎನಿಸಿಕೊಳ್ಳುವ ನಗರ ಪ್ರದೇಶದ ಜನ ಮತ ಚಲಾಯಿಸಲು ಆಸಕ್ತಿ ತೋರಿಲ್ಲ. ಈ ವಿಷಯದಲ್ಲಿನಗರದವರು ಸೋತಿದ್ದಾರೆ.

-----

ಸ್ವೀಪ್ ಸಮಿತಿಯಿಂದ ಮತದಾನ ಪ್ರಮಾಣ ಹೆಚ್ಚಿಸಲು ಹಲವು ಚಟುವಟಿಕೆ ನಡೆಸಲಾಯಿತು. ಗ್ರಾಮೀಣ ಪ್ರದೇಶದಲ್ಲಿಕೆಲ ಬೂತ್ ಗಳಲ್ಲಿಶೇ.90ಕ್ಕಿಂತ ಹೆಚ್ಚು ಮತದಾನ ಆಗಿದ್ದು ಅಂತವುಗಳನ್ನು ಗುರುತಿಸಿಸಲಾಗುವುದು.

- ಗಿತ್ತೆ ಮಾಧವ ವಿಠಲ್ ರಾವ್ , ಸಿಇಒ.

----

* ಚಿತ್ರ