ಬೀದರ್ ಸುದ್ದಿಚೂರು-2

Contributed bytvlbdr@gmail.com|Vijaya Karnataka

ಬೀದರ್ ಜಿಲ್ಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಏ. 14 ರಂದು ಆಚರಿಸಲಾಗುತ್ತಿದೆ. ಇದೇ ವೇಳೆ, ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಲ್ಲದೆ, ಯುವಕ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

dr ambedkars 135th jayanti celebration and karnataka assembly speakers visit to bidar

ಚಿತ್ರ:ಅಂಬೇಡ್ಕರ್ ಚಿತ್ರ ಬಳಸಿ

ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ 14ಕ್ಕೆ

ಬೀದರ್ : ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿಏ.14 ರಂದು ಸಂಜೆ 5 ಕ್ಕೆ ಡಾ.ಬಿ.ಆರ್ .ಅಂಬೇಡ್ಕರ್ ವೃತ್ತದಲ್ಲಿಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ರವರ 135ನೇ ಜಯಂತ್ಯುತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ತೋಂಟದಾರ್ಯ ಮಠ ಮುಂಡರಗಿ ಹಾಗೂ ನಿಷ್ಕಲ ಮಂಟಲ ಬೈಲೂರಿನ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮೀಜಿ, ಆಣದೂರ ವೈಶಾಲಿ ನಗರ ಬುದ್ಧವಿಹಾರದ ಪೂಜ್ಯ ಭಂತೆ ಜ್ಞಾನಸಾಗರ ಅವರುಗಳು ವಹಿಸಲಿದ್ದಾರೆ. ಜಿಲ್ಲಾಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಸಾಗರ ಈಶ್ವರ ಖಂಡ್ರೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾಲಾ ಬಿ.ನಾರಾಯಣರಾವ, ಜಿಲ್ಲೆಯ ಎಲ್ಲಶಾಸಕರು, ಎಂಎಲ್ ಸಿಗಳು, ನಿಗಮ ಮಂಡಳಿಗಳ ಅಧ್ಯಕ್ಷರು, ಅಧಿಕಾರಿಗಳು ಪಾಲ್ಗೊಳ್ಳುವರು. ರಾಷ್ಟ್ರೀಯ ಬುಡಕಟ್ಟು ಸ್ವಾಯತ್ತ ಮಂಡಳಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರೇಮಕುಮಾರ ಗೆದ್ದಂ ಹಾಗೂ ಬೆಂಗಳೂರು ಹೈಕೋರ್ಟ್ ನ ನ್ಯಾಯವಾದಿ ಪ್ರೊ.ಹರಿರಾಮ ಎ. ಅವರು ವಿಶೇಷ ಉಪನ್ಯಾಸ ನೀಡುವರು.

ಚಿತ್ರ:ಯು.ಟಿ. ಖಾದರ್ ಚಿತ್ರ ಬಳಸಿ

ಸಭಾಧ್ಯಕ್ಷ ಯು.ಟಿ.ಖಾದರ್ ಜಿಲ್ಲೆಗೆ ನಾಳೆ

ಬೀದರ್ : ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಏ.12 ರಂದು ಬೀದರ್ ಜಿಲ್ಲೆಯಲ್ಲಿಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಅವರು ಬೆಳಗ್ಗೆ 7.55ಕ್ಕೆ ಮಂಗಳೂರಿನಿಂದ ವಿಮಾನದ ಮೂಲಕ ಹೈದರಾಬಾದ್ ಆಗಮಿಸಿ ಅಲ್ಲಿಂದ ಬೆಳಗ್ಗೆ 10 ಕ್ಕೆ ಹೈದರಾಬಾದ್ ರಸ್ತೆ ಮೂಲಕ ಬೀದರ್ ಅತಿಥಿ ಗೃಹಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಬೀದರ್ ನ ಮಹ್ಮದ ಜಾವೀದ್ ಮನೆಯಲ್ಲಿಊಟ ಮಾಡಲಿದ್ದಾರೆ. ನಂತರ ಮಧ್ಯಾಹ್ನ 3ಕ್ಕೆ ಕರ್ನಾಟಕ ಪತ್ರಕರ್ತರ ಸಂಘ ಜಿಲ್ಲಾಘಟಕದಿಂದ ಝಿರಾ ಕನ್ವೆನ್ಷನ್ ಹಾಲ್ ದಲ್ಲಿಆಯೋಜಿಸಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿಭಾಗವಹಿಸಲಿದ್ದಾರೆ. ಸಂಜೆ 5 ಕ್ಕೆ ಬೀದರ್ ರಸ್ತೆ ಮೂಲಕ ಹೈದರಾಬಾದ್ ಗೆ ಪ್ರಯಾಣಿಸಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಸೋಮಣ್ಣ ಬೇವಿನಮರದ ಇಂದಿನಿಂದ ಪ್ರವಾಸ

ಬೀದರ್ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಅವರು ಏ.11 ರಿಂದ 13 ರವರೆಗೆ ಬೀದರ್ ಜಿಲ್ಲೆಯಲ್ಲಿಪ್ರವಾಸ ಕೈಗೊಂಡಿದ್ದಾರೆ. ಏ.11 ರಂದು ಬೆಳಗ್ಗೆ 10 ಕ್ಕೆ ಬೀದರ್ ಗೆ ಆಗಮಿಸಿ ಸಂಜೆ 5ಕ್ಕೆ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ‘‘ಗಡಿ ಸಮಸ್ಯೆ ’’ ಬಗ್ಗೆ ಸಂವಾದದಲ್ಲಿಭಾಗವಹಿಸಲಿದ್ದಾರೆ. ಏ.12 ರಂದು ಬೆಳಗ್ಗೆ 10 ಕ್ಕೆ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿಭಾಗವಹಿಸಲಿದ್ದಾರೆ. ಏ.13 ರಂದು ಬೀದರ್ ನಿಂದ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಅಧ್ಯಕ್ಷರ ಆಪ್ತ ಸಹಾಯಕರು ತಿಳಿಸಿದ್ದಾರೆ.

ಕ್ರೀಡಾ ಸಾಮಗ್ರಿಗಾಗಿ ಅರ್ಜಿ ಆಹ್ವಾನ

ಬೀದರ್ : 2023-24ನೇ ಸಾಲಿನ ಯುವ ಚೈತನ್ಯ ಯೋಜನೆಯಡಿ ಬೀದರ್ ಜಿಲ್ಲೆಯ 2 ಯುವಕ ಸಂಘಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಬೇಕಾಗಿರುವುದರಿಂದ ಅರ್ಹ ಯುವಕ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಯುವಕ ಸಂಘಗಳು ಸಹಕಾರ ಸಂಘದಲ್ಲಿನೋಂದಣಿ ಆಗಿರಬೇಕು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿನೋಂದಣಿ ಆಗಿರಬೇಕು. ಕನಿಷ್ಠ 25 ಸದಸ್ಯರನ್ನು ಹೊಂದರಬೇಕು, ಸದಸ್ಯರ ವಯೋಮಿತಿ 18 ರಿಂದ 29 ವರ್ಷದೊಳಗೆ ಇರಬೇಕು. ಯುವ ಸಂಘವು ಕ್ರಿಯಾಶೀಲವಾಗಿರಬೇಕು. ಕಳೆದ ಮೂರು ವರ್ಷಗಳ ಕಾರ್ಯ ಚಟುವಟಿಕೆಗಳ ಮಾಹಿತಿ ಒದಗಿಸುವುದು. ಅರ್ಹರು 2026ನೇ ಏ.22 ರೊಳಗಾಗಿ ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ : 9980026489/9591609691ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.