ಕರ್ನಾಟಕ ಜನಶಕ್ತಿಯಿಂದ ಆಯೋಜನೆ
ನಾಳೆ ವಿಭಾಗೀಯ ಸಮ್ಮೇಳನ
ವಿಕ ಸುದ್ದಿಲೋಕ ಸಿಂಧನೂರು
‘‘ನಗರದ ಟೌನ್ ಹಾಲ್ ನಲ್ಲಿಏ.12 ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಜನಶಕ್ತಿ ಸಂಘಟನೆಯಿಂದ ವಿಭಾಗೀಯ ಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ,’’ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಬಸವರಾಜ ಬಾದರ್ಲಿ ತಿಳಿಸಿದರು.
ನಗರದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ‘‘ರಾಜ್ಯ-ದೇಶ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ, ಮೂರು ವರ್ಷಗಳ ಹಿಂದೆ ಕೈಗೊಂಡ ನಿರ್ಣಯಗಳ ಜಾರಿ ಕುರಿತು ಮತ್ತು ಮುಂದಿನ ಮೂರು ವರ್ಷಗಳ ನಿರ್ಣಯದ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಮ್ಮೇಳನವನ್ನು ಪ್ರಗತಿಪರ ಚಿಂತಕ ಎಂ.ಆರ್ .ಭೇರಿ ಉದ್ಘಾಟಿಸುವರು. ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಎಲ್ .ಅಶೋಕ ಅಧ್ಯಕ್ಷತೆ ವಹಿಸುವರು. ಪ್ರಣಾಳಿಕೆ ಮತ್ತು ಮುನ್ನೋಟಗಳ ಕುರಿತು ಸರೋವರ್ ಬೆಂಕಿಕೆರೆ, ಕುಮಾರ ಸಮತಳ, ಕರಿಯಪ್ಪ ಗುಡಿಮನಿ, ಚನ್ನಮ್ಮ, ದುರ್ಗೇಶ್ ಬರಗೂರು, ಲಕ್ಷತ್ರ್ಮಣ ಮಂಡಲಗೇರಾ, ಕೆ.ಎಲ್ .ಅಶೋಕ್ ಚರ್ಚಿಸುವರು. ಕರಿಯಪ್ಪ ಗುಡಿಮನಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸುವರು,’’ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಶಂಕರ ವಾಲೀಕಾರ್ ಮಾತನಾಡಿದರು. ಮುಖಂಡರಾದ ಕುಮಾರ ಸಮತಳ, ಚಾಂದ್ ಸಾಬ್ ಬನ್ನಿಗನೂರು, ದುರುಗೇಶ ಬರಗೂರು ಇದ್ದರು.
---
ಆರ್ ಸಿಎಚ್ 10ಎಸ್ ಎನ್ ಡಿ1: ಸಿಂಧನೂರಿನಲ್ಲಿಏ.12 ರಂದು ಜರುಗುವ ಕರ್ನಾಟಕ ಜನಶಕ್ತಿ ಸಂಘಟನೆಯ ವಿಭಾಗೀಯ ಮಟ್ಟದ ಸಮ್ಮೇಳನದ ಕರಪತ್ರವನ್ನು ಬಸವರಾಜ ಬಾದರ್ಲಿ ಶುಕ್ರವಾರ ಬಿಡುಗಡೆಗೊಳಿಸಿದರು.

