ಫಲಶೃತಿ ಇಮೇಜ್ ಬಳಸಿ
ಕೊಳವೆಬಾವಿ ದುರಸ್ತಿಗೆ ಮುಂದಾದ ನಗರಸಭೆ
ವಿಕ ಸುದ್ದಿಲೋಕ ಇಳಕಲ್
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನಗರದಲ್ಲಿಯ ಕೊಳವೆಬಾವಿಗಳ ದುರಸ್ತಿಗೆ ನಗರಸಭೆ ಮುಂದಾಗಿದೆ.
ನಗರಕ್ಕೆ ಶಾಶ್ವತ ಶುದ್ಧ ನೀರು ಸರಬರಾಜು ಯೋಜನೆ ಅನುಷ್ಠಾನ ಬಳಿಕ ಕೊಳವೆಬಾವಿಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಶಾಶ್ವತ ಯೋಜನೆಯಿಂದ 15 ವರ್ಷಗಳಿಂದ ನೀರು ಪೂರೈಸುತ್ತಿದ್ದು, ಆಗಿನಿಂದ ಕೊಳವೆಬಾವಿಗಳು ನಿರುಪಯುಕ್ತವಾಗಿ ಅವುಗಳಲ್ಲಿಯ ಪಂಪ್ ಸೆಟ್ ಗಳು ಸ್ಥಗಿತಗೊಂಡಿವೆ. ಈಗ ಶಾಶ್ವತ ನೀರು ಪೂರೈಕೆಯಲ್ಲಿಸಮಸ್ಯೆ ಎದುರಾಗಿದ್ದರಿಂದ ಪರ್ಯಾಯ ವ್ಯವಸ್ಥೆಗಾಗಿ ನಗರಸಭೆ ಗುರುವಾರ ಒಂದೇ ದಿನ ಮೂರು ಕೊಳವೆಬಾವಿಗಳ ದುರಸ್ತಿ ಕೈಗೊಂಡಿದೆ.
ಬೇಸಿಗೆಯಲ್ಲಿಬಿಸಿಲಿನ ಪ್ರಖರತೆ ಹೆಚ್ಚಾದಂತೆ ನಗರದಲ್ಲಿನೀರಿನ ಸಮಸ್ಯೆ ತೀವ್ರಗೊಳ್ಳುತ್ತಿರುವ ಬಗ್ಗೆ ‘ಬಾರದ ನೀರು ತಪ್ಪದ ಜನರ ಬವಣೆ’ ಶೀರ್ಷಿಕೆಯಡಿ ವಿಜಯ ಕರ್ನಾಟಕ ಗುರುವಾರ ವರದಿ ಪ್ರಕಟಿಸಿ ಸ್ಥಳೀಯ ಸಂಸ್ಥೆಯ ಗಮನ ಸೆಳೆದಿದ್ದನ್ನು ಇಲ್ಲಿಸ್ಮರಿಸಬಹುದು.
--------
‘‘ನಗರಕ್ಕೆ ಶಾಶ್ವತ ಶುದ್ಧ ನೀರು ಪೂರೈಕೆ ಯೋಜನೆಯ ಜಾಕ್ ವೆಲ್ ಆಲಮಟ್ಟಿ ಜಲಾಶಯದಲ್ಲಿದ್ದು, ಅದರಲ್ಲಿಯ ನೀರೆತ್ತುವ ಪಂಪ್ ಸೆಟ್ ಗಳನ್ನು ದುರಸ್ತಿ ಮಾಡಿಸುವ ಜತೆಗೆ ಅವುಗಳನ್ನು ಮೇಲ್ದರ್ಜೆಗೇರಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲಿಕಾಮಗಾರಿ ಆರಂಭಿಸಲಾಗುವುದು,’’ ಎಂದು ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದ್ದಾರೆ.
‘‘ಕಳೆದ 2 ದಿನಗಳಿಂದ ಆಲಮಟ್ಟಿ ಜಲಾಶಯಕ್ಕೆ ಹೋಗಿ ಅಲ್ಲೇ ಠಿಕಾಣಿ ಹೂಡಿ ಪಂಪ್ ಸೆಟ್ ಗಳನ್ನು ದುರಸ್ತಿ ಮಾಡಿಸಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ,’’ ಎಂದು ಅವರು ಹೇಳಿದ್ದಾರೆ.
(ಫೋಟೊ:9-ಐಎಲ್ಕೆ-1)-ಇಳಕಲ್ ನಗರದ ದುರಸ್ತಿಯಲ್ಲಿರುವ ಕೊಳವೆಬಾವಿಗಳನ್ನು ನಗರಸಭೆ ದುರಸ್ತಿಗೊಳಿಸಲು ಕ್ರಮ ಕೈಗೊಂಡಿರುವುದು.
(ಫೋಟೊ:9-ಐಎಲ್ಕೆ-1ಎ)-
ಇಳಕಲ್ ಪೌರಾಯುಕ್ತ ಶ್ರೀನಿವಾಸ ಜಾಧವ ಅವರು ಆಲಮಟ್ಟಿಯಲ್ಲಿರುವ ಜಾಕ್ ವೆಲ್ ಗೆ ಭೇಟಿ ನೀಡಿ ಪಂಪ್ ಸೆಟ್ ದುರಸ್ತಿ ಕಾರ್ಯವನ್ನು ವೀಕ್ಷಿಸಿದರು.
ಧಿ

