ಪದವಿ ಪ್ರದಾನ ದಿನ ಇಂದು
ದಾವಣಗೆರೆ : ನಗರದ ಎಸ್ .ಎಸ್ . ಬಡಾವಣೆಯ ಎಸ್ ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿಏ.11ರಂದು ಬೆಳಗ್ಗೆ 10.30ಕ್ಕೆ 2026ನೇ ಸಾಲಿನ ಪದವಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಎಸ್ ಬಿಸಿ ಪ್ರಥಮದರ್ಜೆ ಮಹಿಳಾ ಕಾಲೇಜು ಅಧ್ಯಕ್ಷ ಬಿ.ಸಿ.ಉಮಾಪತಿ ಅಧ್ಯಕ್ಷತೆಯಲ್ಲಿನಡೆಯುವ ಕಾರ್ಯಕ್ರಮವನ್ನು ಹಂಪಿ ವಿವಿ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಉದ್ಘಾಟಿಸುವರು. ವಿಜಾಯಕ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎನ್ .ಎ.ಮುರುಗೇಶ್ , ಅಥಳಿ ಸಂಯುಕ್ತ ಪದವಿ ಪೂರ್ವ ಕಾಲೇಜು ಅಧ್ಯಕ್ಷ ಅಥಣಿ ಪ್ರಶಾಂತ್ , ಕಾಲೇಜು ಪ್ರಿನ್ಸಿಪಾಲ್ ಡಾ.ಕೆ.ಷಣ್ಮುಖಪ್ಪ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

