ಹುಧಿಣಧಿಸೂರು ಸರಕಾರಿ ಕಾಲೇಜು
ಪಿಯು ವಿಧಿದ್ಯಾಧಿರ್ಥಿಧಿಗಳ ಸಾಧನೆ
- ಮೂರು ವಿಭಾಗದಲ್ಲೂಟಾಪರ್ ಗಳು, ಶೇ. 85 ಫಲಿತಾಂಶ
ವಿಕ ಸುದ್ದಿಲೋಕ ಹುಣಸೂರು
ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿಮೂರು ವಿಭಾಗಗಳಿಂದ ಶೇ.85 (ಕಳೆದ ಬಾರಿ ಶೇ.72)ರಷ್ಟು ಫಲಿತಾಂಶ ಬಂದಿದ್ದು, ಸರಕಾರಿ ಕಾಲೇಜುಗಳ ಪೈಕಿ ತಾಲೂಕಿಗೆ ಮೊದಲ ಸ್ಥಾನಗಳಿಸಿ ದಾಖಲೆ ನಿರ್ಮಿಸಿದೆ.
ಪರೀಕ್ಷೆಗೆ ಕುಳಿತಿದ್ದ ಒಟ್ಟು 566 ವಿದ್ಯಾರ್ಥಿನಿಯರ ಪೈಕಿ 476 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿಶೇ.93.71, ವಿಜ್ಞಾನ ವಿಭಾಗದಲ್ಲಿಶೇ.86.79 ಹಾಗೂ ಕಲಾವಿಭಾಗದಲ್ಲಿಶೇ.80.29ರಷ್ಟು ಫಲಿತಾಂಶ ಬಂದಿದೆ. 101 ಮಧಿಕ್ಕಳು ಅತ್ಯುನ್ನತ ಶ್ರೇಣಿ, 247 ಪ್ರಥಮ ದರ್ಜೆ, 76 ದ್ವಿತೀಯ, 52 ತೃತೀಯ ದರ್ಜೆಯಲ್ಲಿಪಾಸಾಗಿದ್ದಾರೆ.
ಜಿಲ್ಲೆಗೆ ಶ್ರಾವ್ಯ ದ್ವಿತೀಯ ಟಾಪರ್ :
ಕಾಲೇಜಿನ ಕಲಾ ವಿಭಾಗದ ಕೆ.ಎಲ್ .ಕಾವ್ಯ (589) ಅಂಕ ಪಡೆದು ಜಿಲ್ಲಾಮಟ್ಟದಲ್ಲಿದ್ವಿತೀಯ ಹಾಗೂ ತಾಲೂಕಿಗೆ ಪ್ರಥಮ ಟಾಪರ್ ಆಗಿದ್ದಾ್ದರೆ. ಇದೇ ವಿಭಾಗದ ಆರ್ .ಅಮೂಲ್ಯ (585) ಅಂಕಪಡೆದು ತಾಲೂಕಿಗೆ ತೃತೀಯ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿಕಾಲೇಜಿನ ಹೇಮಶ್ರೀ (587) ಹಾಗೂ ವಿಜ್ಞಾನ ವಿಭಾಗದಲ್ಲಿಕಾಲೇಜಿನ ನಿವೇದಿತಾ (581) ಅಂಕಗಳಿಸಿ ತಾಲೂಕಿಗೆ ದ್ವಿತೀಯ ಟಾಪರ್ ಗಳಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ರೈತನ ಮಗಳ ಅದ್ವಿತೀಯ ಸಾಧನೆ:
ದ್ವಿತೀಯ ಟಾಪರ್ ಕೆ.ಎಲ್ .ಶ್ರಾವ್ಯ ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದ ರೈತ ಲೋಕೇಶಾಚಾರಿ-ಪ್ರಮೀಳಾ ದಂಪತಿ ಪುತ್ರಿ. ಇತಿಹಾಸ, ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ವಿಷಯದಲ್ಲಿತಲಾ 100 ಅಂಕ, ಕನ್ನಡದಲ್ಲಿ-99 ಹಾಗೂ ಇಂಗ್ಲೀಷ್ ನಲ್ಲಿ-90 ಅಂಕ ಪಡೆದಿದ್ದು, ಮುಂದೆ ವಕೀಲರಾಗಬೇಕು ಎಂಬ ಹಂಬಲ ವ್ಯಕ್ತಪಡಿಸಿದ್ದಾರೆ.
ಗಾರೆ ಕೆಲಸಗಾರನ ಮಗಳು:
ವಿಜ್ಞಾನದಲ್ಲಿದ್ವಿತೀಯ ಟಾಪರ್ ಆಗಿರುವ ನಿವೇದಿತಾ ಹುಣಸೂರಿನ ಮೂರುರಮ್ಮ ಬಡಾವಣೆಯ ಗಾರೆ ಕೆಲಸಗಾರ ಸೋಮಕುಮಾರ್ -ರೇಣುಕಾ ದಂಪತಿ ಪುತ್ರಿ. ಇವರು ಎಂಜಿನಿಯರ್ ಆಗುವ ಕನಸುಕಂಡಿದ್ದರೆ, ವಾಣಿಜ್ಯ ವಿಭಾಗದ ಹೇಮಶ್ರೀ ಧರ್ಮಾಪುರದ ರುಕ್ಮಾಂಗದ-ಭಾಗ್ಯಲಕ್ಷ್ಮಿ ದಂಪತಿ ಪುತ್ರಿ. ಇವರು ಐಎಎಸ್ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಪಿ.ಯು. ಫಲಿತಾಂಶದಲ್ಲಿತಾಲೂಕಿಗೆ ಹಲವು ಪ್ರಥಮಗಳನ್ನು ಸಾಧಿಸಿರುವ ಬಾಲಕಿಯರ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರನ್ನು ಹಾಗೂ ಉತ್ತಮ ಫಲಿತಾಂಶ ಬರಲು ಕಾರಣಕರ್ತರಾದ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದಕ್ಕೂ ಅಭಿನಂದನೆಗಳು.
-ಜಿ.ಡಿ.ಹರೀಶ್ ಗೌಡ, ಶಾಸಕ, ಹುಣಸೂರು
ಪೊಟೋ
10ಎಚ್ ಯುಎನ್ -4
ಹುಣಸೂರು ಬಾಲಕಿಯರ ಸರಕಾರಿ ಕಾಲೇಜಿನಲ್ಲಿಮೂವರು ಟಾಪರ್ ಗಳಿಗೆ ಪ್ರಾಚಾರ್ಯ ರಾಮೇಗೌಡ, ಉಪನ್ಯಾಸಕರು ಸಿಹಿ ತಿನ್ನಿಸಿದರು, ಸಾಧಕ ವಿದ್ಯಾರ್ಥಿನಿಯರಿದ್ದರು.
10ಎಚ್ ಯುಎನ್ -5
ಹುಣಸೂರು ಬಾಲಕಿಯರ ಕಾಲೇಜಿನಲ್ಲಿಕಲಾ ವಿಭಾಗದ ಟಾಪರ್ ಶ್ರಾವ್ಯಳಿಗೆ ಪೋಷಕರಾದ ಲೋಕೇಶಾಚಾರಿ-ಪ್ರಮೀಳ ಸಿಹಿ ತಿನ್ನಿಸಿ ಸಂಭ್ರಮಿಸಿದರು.
10ಎಚ್ ಯುಎನ್ -6
ಜಿ.ಡಿ.ಹರೀಶ್ ಗೌಡ, ಶಾಸಕ.

