ಮಧ್ಯಪ್ರಾಚ್ಯ ಬಿಕ್ಕಟ್ಟು ಪರಿಹಾರ ವಿಶ್ವಾಸ ವಾರಾಂತ್ಯದಲ್ಲಿಷೇರುಪೇಟೆ ಉತ್ಸಾಹ

Contributed byVenkat K|Vijaya Karnataka

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಶಮನವಾಗುವ ನಿರೀಕ್ಷೆ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ. ಇದರಿಂದಾಗಿ ವಾರಾಂತ್ಯದಲ್ಲಿ ಷೇರುಪೇಟೆ ವಹಿವಾಟು ಉತ್ಸಾಹದಿಂದ ಕೂಡಿತ್ತು. ಮುಂಬಯಿ ಷೇರುಪೇಟೆ ಸೂಚ್ಯಂಕ 'ಸೆನ್ಸೆಕ್ಸ್' 918 ಅಂಕ ಏರಿ 77,550ಕ್ಕೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 'ನಿಫ್ಟಿ' 275 ಅಂಕ ಏರಿ 24,050ರಲ್ಲಿಸ್ಥಿರಗೊಂಡಿದೆ. ಕಚ್ಚಾ ತೈಲ ಬೆಲೆ ಇಳಿಕೆಯೂ ಷೇರುಪೇಟೆಗೆ ಉತ್ತೇಜನ ನೀಡಿದೆ.

immediate relief for middle eastern crisis stock market hits peak in mumbai

ಮುಂಬಯಿ: ಮಧ್ಯಪ್ರಾಚ್ಯ ಬಿಕ್ಕಟ್ಟು ಶಮನವಾಗುವ ಆಶಯ ಹೂಡಿಕೆದಾರರ ಆತ್ಮವಿಶ್ವಾಸಕ್ಕೆ ಬಲ ತುಂಬಿತು. ಹೀಗಾಗಿ ವಾರಾಂತ್ಯದಲ್ಲಿಷೇರುಪೇಟೆ ವಹಿವಾಟು ಉತ್ಸಾಹದೊಂದಿಗೆ ಕೊನೆಗೊಂಡಿತು. ಮುಂಬಯಿ ಷೇರುಪೇಟೆ ಸೂಚ್ಯಂಕ ‘ಸೆನ್ಸೆಕ್ಸ್ ’ 918.60 ಅಂಕ ಏರಿ 77,550.25ರಲ್ಲಿಕೊನೆಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ‘ ನಿಫ್ಟಿ ’ 275.50 ಅಂಕ ಏರಿಕೆಯಾಗಿ 24,050.60ರಲ್ಲಿಸ್ಥಿರಗೊಂಡಿತು. ಕಚ್ಚಾ ತೈಲದ ಬೆಲೆ ಇಳಿಕೆ ಕೂಡ ಗೂಳಿ ಆರ್ಭಟವನ್ನು ಜೋರಾಗಿಸಿತು. ದಿನವಿಡೀ ಷೇರುಪೇಟೆ ಏರು ಹಾದಿಯಲ್ಲೇ ಇತ್ತು. ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕೊಸ್ಪಿ, ಜಪಾನ್ ನ ನಿಕೈ 225 ಇಂಡೆಕ್ಸ್ , ಶಾಂಘೈನ ಎಸ್ ಎಸ್ ಇ ಕಾಂಪೊಸಿಟ್ ಇಂಡೆಕ್ಸ್ ಮತ್ತು ಹಾಂಕಾಂಗ್ ನ ಹ್ಯಾಂಗ್ ಸೆಂಗ್ ಇಂಡೆಕ್ಸ್ ಏರುಗತಿಯಲ್ಲಿದ್ದವು. ಐರೋಪ್ಯ ಮಾರುಕಟ್ಟೆ ಕೂಡ ಏರಿಕೆ ಕಂಡಿತು. ಜಾಗತಿಕ ಮಾರುಕಟ್ಟೆಯಲ್ಲಿಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.0.57ರಷ್ಟು ಏರಿ ಬ್ಯಾರೆಲ್ ಗೆ 96.47 ಡಾಲರ್ ಆಗಿದೆ.