ಗುರುದತ್ತ ಸಹಕಾರಿ ಚಿಕ್ಕೋಡಿ ಶಾಖೆ ಉದ್ಘಾಟನೆ

Contributed byjamkhandikar.sushant080@gmail.com|Vijaya Karnataka

ಚಿಕ್ಕೋಡಿಯಲ್ಲಿ ಶ್ರೀ ಗುರುದತ್ತ ಕೋ- ಆಪ್‌ ಕ್ರೆಡಿಟ್‌ ಸೊಸೈಟಿ ಶಾಖೆ ಉದ್ಘಾಟನೆಗೊಂಡಿತು. ಗ್ರಾಮೀಣ ಜನರಿಗೆ ಆರ್ಥಿಕ ಸುಭದ್ರತೆ ನೀಡುವಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದು ಎಂದು ಶಿವಪ್ರಸಾದ ದೇವರು ಹೇಳಿದರು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದು ಜನರಿಗೆ ಅನುಕೂಲವಾಗಲಿದೆ.

inauguration of gurudatta cooperative chikkodi branch marks a new step towards economic security

ವಿಕ ಸುದ್ದಿಲೋಕ ಚಿಕ್ಕೋಡಿ

ಗ್ರಾಮೀಣ ಭಾಗದಲ್ಲಿನ ಜನರಿಗೆ ಆರ್ಥಿಕ ಸುಭದ್ರತೆಗೆ ಕಲ್ಪಿಸುವಲ್ಲಿಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಚಿಂಚಣಿ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ ಶಿವಪ್ರಸಾದ ದೇವರು ಹೇಳಿದರು.

ಪಟ್ಟಣದ ಭಾಗ್ಯಲಕ್ಷಿತ್ರ್ಮ ನಗರದಲ್ಲಿರುವ ಶ್ರೀ ಗುರುದತ್ತ ಕೋ- ಆಪ್ ಕ್ರೆಡಿಟ್ ಸೊಸೈಟಿ ಚಿಕ್ಕೋಡಿ ಶಾಖೆ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಅಜಯ ಕವಟಗಿಮಠ, ಪಂಕಜ ಪಾಟೀಲ, ಸಂಸ್ಥಾಪಕ ಸಚಿನ್ ಖೋತ್ , ಸಹ ಸಂಸ್ಥಾಪಕ ನಿಲೇಶ ಖೋತ್ , ಮುಖ್ಯ ಕಾರ್ಯದರ್ಶಿ ಮೃದುಲಾ ಹೆಗಡೆ, ಶಾಖಾ ವ್ಯವಸ್ಥಾಪಕ ಮಹೇಶ ಕೋಳಿ, ರಾಜಕುಮಾರ ಕೆಂಚಗೌಡಾ, ಲಕ್ಷ್ಮಣ ಶಿಂದೆ, ವಿಜಯ ಖೋತ್ , ರಾಮಾ ಮಾನೆ, ಅನಿಲ ಮಾನೆ, ಸಾಗರ ಶಿಂಧೆ ಮತ್ತಿತರರಿದ್ದರು.

- 10ಸಿಕೆಡಿ 4

ಶ್ರೀ ಗುರುದತ್ತ ಕೋ- ಆಪ್ ಕ್ರೆಡಿಟ್ ಸೊಸೈಟಿ ಚಿಕ್ಕೋಡಿ ಶಾಖೆಯನ್ನು ಚಿಂಚಣಿಯ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ ಶಿವಪ್ರಸಾದ ದೇವರು ಉದ್ಘಾಟಿಸಿದರು.