ಕಾಡುಪ್ರಾಣಿಗಳ ಸಂತಾನದ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟು ಸರಿ?
- - -
- ಮಂಜು ಕಿರಣ್
1995ರ ಕಾಲಘಟ್ಟ. ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ಯಾನವನಗಳಲ್ಲಿಆನೆಗಳ ಸಂಖ್ಯೆ ಮಿತಿ ಮೀರಿತು ಎಂಬ ಕೂಗು ಕೇಳಿಬಂತು. ಆಗ ಅಲ್ಲಿನ ವಿಜ್ಞಾನಿಗಳು ಕೈಗೆತ್ತಿಕೊಂಡಿದ್ದು ‘ಇಮ್ಯುನೊ ಕಾಂಟ್ರಸೆಪ್ಷನ್ ’ (ಘ್ಕಿPಘP) ಮತ್ತು ‘ಸಿಲಾಸ್ಟಿಕ್ ಹಾರ್ಮೋನ್ ’ ಎಂಬ ರಾಸಾಯನಿಕ ಅಸ್ತ್ರಗಳನ್ನು. ಇವುಗಳ ಪ್ರಯೋಗದ ಉದ್ದೇಶ ಒಂದೇ: ಆನೆಗಳು ಗರ್ಭ ಧರಿಸಬಾರದು!
ಆದರೆ, ನಿಸರ್ಗದ ಲಯಕ್ಕೆ ವಿರುದ್ಧ ಹೋದಾಗ ಏನಾಗುತ್ತದೆ ಎಂಬುದಕ್ಕೆ ಅಲ್ಲಿನಡೆದ ಘಟನೆಗಳೇ ಸಾಕ್ಷಿ. ಹಾರ್ಮೋನ್ ಇಂಪ್ಲಾಂಟ್ ಮಾಡಿಸಿಕೊಂಡ ಹೆಣ್ಣಾನೆಗಳ ಋುತುಚಕ್ರ ಏರುಪೇರಾಯಿತು. ಪ್ರತಿ ತಿಂಗಳು ಆನೆಗಳು ‘ಮದ’ಕ್ಕೆ (ಘ್ಕಿಏಛಿaಠಿ) ಬರತೊಡಗಿದವು. ಪರಿಣಾಮ? ಸುತ್ತಲಿನ ಗಂಡಾನೆಗಳು ನಿರಂತರವಾಗಿ ಈ ಹೆಣ್ಣಾನೆಗಳ ಮೇಲೆ ಮುಗಿಬಿದ್ದವು. ಅಸ್ವಾಭಾವಿಕವಾದ ಈ ‘ಬಹು ಮಿಲನ’ದ ಪ್ರಕ್ರಿಯೆಯಿಂದ ಹೆಣ್ಣಾನೆಗಳು ದೈಹಿಕವಾಗಿ ಜರ್ಜರಿತವಾದವು. ಗರ್ಭ ಧರಿಸಲಾಗದ ಹತಾಶೆಯಲ್ಲಿಹೆಣ್ಣಾನೆಗಳು ಬೇರೆ ಹಿಂಡಿನ ಮರಿಗಳನ್ನು ಅಪಹರಿಸತೊಡಗಿದವು! ಮಿಲನಕ್ಕೆ ಒಪ್ಪದ ಹೆಣ್ಣಾನೆಗಳ ಮೇಲೆ ಗಂಡಾನೆಗಳು ನಿರಂತರ ದಾಳಿಗೈದವು. ಇದು ಕಾಡಿನ ಒಳಗಿನ ಶಾಂತಿಯನ್ನು ಕದಡಿ, ಆನೆಗಳನ್ನು ಇನ್ನಷ್ಟು ಕ್ರೂರವಾಗಿಸಿತು. ಕಾಡಿನ ಶಿಸ್ತೇ ಹದಗೆಟ್ಟು, ಆನೆಗಳು ಖಿನ್ನತೆಗೆ ಜಾರಿದವು. ಕೊನೆಗೆ ಈ ಹಿಂಸೆಯಿಂದ ತಪ್ಪಿಸಿಕೊಳ್ಳಲು ಆನೆಗಳು ನಾಡಿನತ್ತ ಮುಖ ಮಾಡಿದವು.
ಪಾಠ ಸ್ಪಷ್ಟವಾಗಿತ್ತು... ಪ್ರಕೃತಿಯನ್ನು ನಿಯಂತ್ರಿಸಲು ಹೋದರೆ ಆಘಾತ ಕಟ್ಟಿಟ್ಟ ಬುತ್ತಿ!
ಈಗ ವೆಲ್ ಕಂ ಟು ಕರ್ನಾಟಕ. ‘‘ಮಾನವ- ವನ್ಯಜೀವಿ ಸಂಘರ್ಷಕ್ಕೆ ಕ್ಷೀಣಿಸುತ್ತಿರುವ ಅರಣ್ಯ ವಲಯ ಮತ್ತು ವೃದ್ಧಿಸುತ್ತಿರುವ ಪ್ರಾಣಿಗಳ ಸಂಖ್ಯೆ ಕಾರಣ. ಆದ್ದರಿಂದ ವನ್ಯಜೀವಿಗಳ ಸಂತಾನ ನಿಯಂತ್ರಣ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ,’’ ಎನ್ನುತ್ತಿದ್ದಾರೆ ಅರಣ್ಯ ಮಂತ್ರಿಗಳು. ಕೊಡಗು, ಚಿಕ್ಕಮಗಳೂರು ವ್ಯಾಪ್ತಿಯಲ್ಲಿನಡೆಯುತ್ತಿರುವ ಮಾನವ- ವನ್ಯಜೀವಿ ಸಂಘರ್ಷದ ಬಗ್ಗೆ ಮಾತನಾಡುವಾಗ ಈ ವಿಚಾರ ಉಲ್ಲೇಖಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಕಾಡಿನಲ್ಲಿಅಂದು ಆನೆಗಳ ಸಂಖ್ಯೆ ಹೆಚ್ಚಾದಾಗ ಹೀಗೆಯೇ ಸಂತಾನ ನಿಯಂತ್ರಣ ಪ್ರಕ್ರಿಯೆಗೆ ಚಾಲನೆ ಕೊಡಲಾಗಿತ್ತು. ಆಸ್ಟೊ್ರೕಡಯಲ್ 17 (ಘ್ಕಿOಛಿsಠ್ಟಿadಜಿಟ್ಝ-17) ಸ್ಟಿರಾಯ್ಡ… ಹಾರ್ಮೋನ್ ಬಾಹ್ಯ ಈಸ್ಟೊ್ರೕಜನ್ ಮಟ್ಟವನ್ನು ಪಿಟ್ಯೂಟರಿ ಗ್ರಂಥಿಯಿಂದ ಗೊನಾಡೊ ಟ್ರೋಪಿನ್ ಬಿಡುಗಡೆಯನ್ನು ತಡೆದ ಪರಿಣಾಮ, ಆನೆಯಲ್ಲಿಅಂಡಾಣು ಉತ್ಪತ್ತಿಯೇ ಸ್ಥಗಿತವಾಯಿತು. ನಿಸರ್ಗಕ್ಕೆ ವಿರುದ್ಧವಾಗಿ ರಾಸಾಯನಿಕ ಔಷಧಿ ಮೂಲಕ ನಡೆಸಿದ ಪ್ರಕ್ರಿಯೆಗಳು ಅವುಗಳದ್ದೇ ಆದ ಅಡ್ಡಪರಿಣಾಮಗಳನ್ನು ಹೊಂದಿರುವ ಬಗ್ಗೆ ವೈದ್ಯಕೀಯ ಲೋಕ ಆತಂಕಗೊಂಡಿದ್ದೇ ಆಗ.
- - -
ಹೆಣ್ಣಾನೆಗಳ ಹಾರ್ಮೋನು ಅಸಮತೋಲನಗೊಂಡರೆ ಏನಾಗುತ್ತೆ?
ಮನುಷ್ಯರಿಗೇ ಹಾರ್ಮೋನ್ ವ್ಯತ್ಯಾಸವಾದರೆ, ಅದನ್ನು ಸರಿಪಡಿಸಿಕೊಳ್ಳಲು ವ್ಯಾಪಕವಾಗಿ ಪರದಾಡುತ್ತೇವೆ. ವೈದ್ಯರು ಸೂಚಿಸಿದ ಮಾತ್ರೆಗಳನ್ನೆಲ್ಲನುಂಗುತ್ತೇವೆ. ಡಯೆಟ್ ಮಾಡುತ್ತೇವೆ. ಆದರೆ, ಕಾಡು ಪ್ರಾಣಿಗಳಿಗೆ? ಆಫ್ರಿಕಾದಲ್ಲಿಹೆಣ್ಣಾನೆಗಳ ಋುತುಚಕ್ರದಲ್ಲಿವಿಳಂಬವಾಗಲು ಕೊಟ್ಟಂಥ ಔಷಧಿಗಳಿಂದ ಆನೆಯ ದೇಹದಲ್ಲಿಹಾರ್ಮೋನ್ ಗಳ ವ್ಯತ್ಯಾಸ ಉಂಟಾಯಿತು. ಮಿಲನದ ಅವಧಿ ಮತ್ತು ಮಿಲನದ ಪ್ರಮಾಣ ಮಿತಿ ಮೀರಿತು. ನಿರ್ದಿಷ್ಟ ಸಮಯಕ್ಕಿಂತ ಮಿಲನದ ಸಮಯ ಹೆಚ್ಚಾದ ಕಾರಣ ಹೆಣ್ಣಾನೆಗಳ ಮಾನಸಿಕ ಹಾಗೂ ದೈಹಿಕ ಗುಣಲಕ್ಷಣಗಳಲ್ಲಿಬಹಳಷ್ಟು ಏರುಪೇರಾಯಿತು.
- ಪ್ರತಿ ತಿಂಗಳು ಮತ್ತು ಎರಡು ತಿಂಗಳಿಗೊಮ್ಮೆ ಹಾರ್ಮೋನ್ ಗಳ ವ್ಯತ್ಯಾಸದಿಂದ ಗಂಡು ಆನೆಗಳು ಮಿಲನಕ್ಕೆ ಆಕರ್ಷಿತವಾಗುತ್ತಿದ್ದವು.
- ಅಸ್ವಾಭಾವಿಕವಾದ ಬಹು ಮಿಲನದಿಂದಾಗಿ ಹೆಣ್ಣಾನೆಗಳು ಮಾನಸಿಕವಾಗಿ, ದೈಹಿಕವಾಗಿ ಶೋಷಣೆಗೆ ಒಳಗಾಗುತ್ತಿದ್ದವು.
- ಮಾನಸಿಕ ಹಾಗೂ ದೈಹಿಕ ಶೋಷಣೆಗಳಿಗೆ ಒಳಗಾದ ಆನೆಗಳು ಈ ಸಮಸ್ಯೆಯಿಂದ ದೂರಾಗಲು ಕಾಡಂಚಿನ ಗ್ರಾಮಗಳಲ್ಲಿಬೆಳೆ ಹಾನಿ, ಜೀವ ಹಾನಿ ಮುಂತಾದ ಸಮಸ್ಯೆಗಳನ್ನು ಸೃಷ್ಟಿಸಿದ್ದವು.
- - -
ಇದು ವೈಜ್ಞಾನಿಕ ಬಲ ಪ್ರಯೋಗವೇ?
ಪ್ರಯೋಗ-1
ಜಿಎನ್ ಆರ್ ಎಚ್
ಆನೆಗಳಲ್ಲಿಗರ್ಭಧಾರಣೆಯನ್ನು ತಡೆಯಲು ಪ್ರಮುಖವಾಗಿ ಘ್ಕಿಎ್ಞ್ಕಏ (ಘ್ಕಿಎಟ್ಞadಟಠ್ಟಿಟpಜ್ಞಿಧ್ಕಿಛ್ಝಿಛಿasಜ್ಞಿಜ ಏಟ್ಟಞಟ್ಞಛಿ) ಲಸಿಕೆಗಳನ್ನು ನೀಡಲಾಗುತ್ತದೆ.
ಧಿ- ಏನಾಗುತ್ತೆ?: ಈ ಲಸಿಕೆಯು ದೇಹದಲ್ಲಿಪ್ರತಿರೋಧಕಗಳನ್ನು (ಅ್ಞಠಿಜಿಚಿಟdಜಿಛಿs) ಸೃಷ್ಟಿಸುತ್ತದೆ.
- ಪರಿಣಾಮ: ಇವು ಮಿದುಳಿನ ಹೈಪೋಥಾಲಮಸ್ ನಿಂದ ಬಿಡುಗಡೆಯಾಗುವ ಘ್ಕಿಎ್ಞ್ಕಏ ಹಾರ್ಮೋನನ್ನು ಬಂಧಿಸುತ್ತವೆ. ಅಂಡಾಣುಗಳ ಬೆಳವಣಿಗೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತದೆ.
ಪ್ರಯೋಗ-2
ಘ್ಕಿPಘP ಲಸಿಕೆ ಮತ್ತು ಇಮ್ಯುನೊ ಕಾಂಟ್ರಾಸೆಪ್ಷನ್
ದಕ್ಷಿಣ ಆಫ್ರಿಕಾದಲ್ಲಿಬಳಸಲಾದ ಘ್ಕಿPಘP (ಘ್ಕಿPಟ್ಟ್ಚಜ್ಞಿಛಿ ಘಟ್ಞa Pಛ್ಝ್ಝ್ಠ್ಚಿಜಿda) ಪ್ರಯೋಗ ವಿಭಿನ್ನ.
ಧಿ- ಏನಾಗುತ್ತೆ?: ಇದು ಅಂಡಾಣುವಿನ ಸುತ್ತಲಿನ ‘ಜೋನಾ ಪೆಲ್ಲುಸಿಡಾ’ ಎಂಬ ಪದರಕ್ಕೆ ಅಂಟಿಕೊಳ್ಳುವ ಪ್ರತಿರೋಧಕಗಳನ್ನು ಸೃಷ್ಟಿಸುತ್ತದೆ.
- ಪರಿಣಾಮ: ಇದು ವೀರ್ಯಾಣುವು ಅಂಡಾಣುವನ್ನು ಪ್ರವೇಶಿಸದಂತೆ ತಡೆಯುತ್ತದೆಯೇ ಹೊರತು, ಹೆಣ್ಣಾನೆ ‘ಮದ’ಕ್ಕೆ (ಏಛಿaಠಿ ್ಚy್ಚ್ಝಛಿ) ಬರುವುದನ್ನು ತಡೆಯುವುದಿಲ್ಲ. ಇದರಿಂದಾಗಿ ಹೆಣ್ಣಾನೆ ಗರ್ಭ ಧರಿಸದೇ ಸತತವಾಗಿ ಋುತುಚಕ್ರಕ್ಕೆ ಒಳಗಾಗುತ್ತದೆ. ಇದು ಆನೆಯ ದೇಹದ ಚಯಾಪಚಯ ಕ್ರಿಯೆಯ (ಋಛಿಠಿaಚಿಟ್ಝಜಿsಞ) ಮೇಲೆ ಭಾರಿ ಒತ್ತಡ ಸೃಷ್ಟಿಸುತ್ತದೆ.
- - -
ಸುಪ್ರೀಂ ಕೋರ್ಟ್ ಒಪ್ಪದಿದ್ದರೂ...
ಜಾಗತಿಕ ಮಟ್ಟದಲ್ಲಿಬಳಕೆಯಾಗಿದ್ದ ಈ ವಿಧಾನದಲ್ಲಿನ ಅಪಾಯದ ಅರಿವಿದ್ದೂ ದೇಶದ ವಿವಿಧ ರಾಜ್ಯಗಳು ವನ್ಯಜೀವಿಗಳ ಹಾವಳಿಯನ್ನು ತಪ್ಪಿಸಿಕೊಳ್ಳಲು ಇದೇ ಹಾದಿಯನ್ನು ತುಳಿಯಲು ಮುಂದಾಗಿದ್ದು ವಿಪರ್ಯಾಸ. ಈ ಪ್ರಕ್ರಿಯೆ ಜಾರಿಗೆ ಸಮ್ಮತಿಯನ್ನು ಕೋರಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಏರಿದಾಗ, ರಾಜ್ಯಗಳ ಈ ಕೋರಿಕೆ ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ. ಆದ್ದರಿಂದ ಮಾನವ ಪ್ರಾಣಿ ಸಂಘರ್ಷ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಕಾಡುಪ್ರಾಣಿಗಳ ಸಂತಾನ ನಿಯಂತ್ರಣ ಪ್ರಕ್ರಿಯೆಯಲ್ಲಿತೊಡಗಿಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲಮತ್ತು ಕಾನೂನು ಇದನ್ನು ಒಪ್ಪುವುದಿಲ್ಲ,’’ ಎಂಬ ಸ್ಪಷ್ಟ ನಿಲುವನ್ನು ಸುಪ್ರೀಂ ಕೋರ್ಟ್ ತಳೆಯಿತು. ಆದಾಗ್ಯೂ, ಈ ಅಮಾನವೀಯ ಕ್ರಮವನ್ನು ಜಾರಿಗೊಳಿಸಲು ತೆರೆಮರೆಯ ಕಸರತ್ತು ನಡೆಯುತ್ತಲೇ ಇದೆ.
- - -
ಆನೆಗಳ ಮೇಲೆ ಪ್ರಯೋಗಿಸುವುದು ಅಷ್ಟು ಸುಲಭವೇ?
ಸಂತಾನಶಕ್ತಿ ಹರಣ ಚಿಕಿತ್ಸೆಯನ್ನು ಮಾನವ ಬೀದಿನಾಯಿಗಳ ಮೇಲೆ, ಬೆಕ್ಕುಗಳ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದ್ದಾನೆ ಎನ್ನುವುದು ನಿಜ. ಆದರೆ, ವನ್ಯಮೃಗಗಳಿಗೆ ಈ ಚಿಕಿತ್ಸೆ ಎಂದಾಗ ಅಲ್ಲಿಸವಾಲುಗಳೇ ಹೆಚ್ಚು ಸಾಲುಗಟ್ಟುತ್ತವೆ. ಅದರಲ್ಲೂಆನೆಗಳ ಮೇಲೆ ಈ ಚಿಕಿತ್ಸೆ ಪ್ರಯೋಗಿಸುವುದು ದೊಡ್ಡ ಸವಾಲು. ಇದಕ್ಕೆ ಕಾರಣಗಳೂ ಇವೆ. ಸಿಂಹ, ಹುಲಿ, ಚಿರತೆಗಳ ರೀತಿಯಲ್ಲಿಆನೆಗಳು ಪ್ರಾದೇಶಿಕ ಪ್ರಾಣಿಗಳಲ್ಲ. ಅವು ದಿನಕ್ಕೆ ಕನಿಷ್ಠ 35ರಿಂದ 40 ಕಿ.ಮೀ. ಕ್ರಮಿಸುತ್ತವೆ. ವಿಶೇಷವಾಗಿ ಭಾರತದ ದಕ್ಷಿಣ ಭಾಗದಲ್ಲಿ, ಆನೆಗಳು ನಾಲ್ಕು ರಾಜ್ಯಗಳಲ್ಲಿಯೂ ಚಲಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವಂಥ ವಿಚಾರ.
- ಸೆಲಾಸ್ಟಿಕ್ ಹಾರ್ಮೋನ್ ಅಳವಡಿಕೆಗೆ 2 ವರ್ಷಗಳ ಸಮಯದ ಮಿತಿ ಇರುತ್ತದೆ. ಬಳಿಕ ಮತ್ತೆ ಇಂಪ್ಲಾಂಟ್ ಅನಿವಾರ್ಯ.
- ಮೊದಲು ಈ ಹಾರ್ಮೋನನ್ನು ಅಳವಡಿಸಿಕೊಂಡ ಆನೆಯನ್ನು ಗುರುತು ಇಟ್ಟುಕೊಳ್ಳುವುದು ಕ್ಲಿಷ್ಟಕರ ಪ್ರಕ್ರಿಯೆ. ಅಲೆಮಾರಿ ಆನೆ ಮತ್ತೊಮ್ಮೆ ಇಂಪ್ಲಾಂಟ್ ಮಾಡಬೇಕಾದ ಸಮಯದಲ್ಲಿಬೇರೆ ರಾಜ್ಯದಲ್ಲಿದ್ದು ಅಲ್ಲಿಗರ್ಭ ಧರಿಸಿ, ಮತ್ತೆ ನಮ್ಮ ರಾಜ್ಯಕ್ಕೆ ಬಂದು ಮರಿ ಹಾಕುವ ಸಾಧ್ಯತೆಗಳೂ ಇರುತ್ತವೆ.
- ಹುಲಿಯ ದೇಹದ ಪಟ್ಟಿಯ ಆಧಾರದ ಮೇಲೆ ಅದನ್ನು ಗುರುತಿಸಬಹುದು. ಆದರೆ, ಹೀಗೆ ಆನೆಗಳ ಪತ್ತೆ ಕಷ್ಟ. ‘ಅವತ್ತು ಚಿಕಿತ್ಸೆಗೆ ಒಳಪಟ್ಟಿದ್ದು ಇದೇ ಆನೆಯೇ?’ ಎಂಬುದನ್ನು ಅಷ್ಟು ಸುಲಭಗ್ಗೆ ಅಂದಾಜಿಸಲಾಗದು.
- ರೇಡಿಯೊ ಕಾಲರ್ ಗಳನ್ನು ಬಳಸಿದರೆ ಇದು ಸರಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಷ್ಟೇ.
- 30 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿಆನೆಗಳ ಮೇಲೆ ಈ ಪ್ರಯೋಗ ನಡೆದಾಗ, ಪ್ರತಿ ಆನೆಗೆ ತಗುಲಿದ್ದ ವೆಚ್ಚ ಸರಾಸರಿ 3ರಿಂದ 5 ಸಾವಿರ ಅಮೆರಿಕನ್ ಡಾಲರ್ . ಈ ವೆಚ್ಚ ಇಂದಿಗೆ ಎಷ್ಟಾಗಬಹುದು?
- ಅಲ್ಲದೆ, ಸೆಲಾಸ್ಟಿಕ್ ಹಾರ್ಮೋನ್ ಇಂಪ್ಲಾಂಟ್ ಮಾಡಿದ ಕೆಲವು ಆನೆಗಳು ಕಾಯಂ ಆಗಿ ಗರ್ಭ ಧರಿಸದೆ ಇರುವ ಸಾಧ್ಯತೆಗಳೂ ಇವೆ ಎನ್ನುವುದು ಸಂಶೋಧನೆಗಳು ಸಾಬೀತುಪಡಿಸಿವೆ.
(ಲೇಖಕರು: ರೈತ ಮುಖಂಡ ಹಾಗೂ ಹವ್ಯಾಸಿ ಬರಹಗಾರರು)
- - -
ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಹಾಕುವ ಸರಕಾರ
- ಸಂಜಯ್ ಗುಬ್ಬಿ, ವನ್ಯಜೀವಿ ತಜ್ಞ
ಮಾನವ- ವನ್ಯಜೀವಿ ಸಂಘರ್ಷಕ್ಕೆ ಮುಖ್ಯ ಕಾರಣಗಳಾದ ಆವಾಸಸ್ಥಾನಗಳ ನಾಶ, ಅವೈಜ್ಞಾನಿಕ ನಿರ್ವಹಣಾ ವಿಧಾನಗಳು, ವನ್ಯಜೀವಿ ಬೇಟೆ ಮತ್ತು ವನ್ಯಜೀವಿಗಳ ಅವೈಜ್ಞಾನಿಕ ಸ್ಥಳಾಂತರವನ್ನು ನಿಲ್ಲಿಸದಿದ್ದರೆ ವನ್ಯಜೀವಿ ಸಂತಾನ ನಿಯಂತ್ರಣ ಮಾನವ- ವನ್ಯಜೀವಿ ಸಂಘರ್ಷಕ್ಕೆ ಸ್ವತಂತ್ರ ಪರಿಹಾರವಾಗಿ ಪರಿಣಾಮಕಾರಿ ಆಗುವುದಿಲ್ಲ.
ಹಲವಾರು ವರ್ಷಗಳಿಂದ ಕಾಡಿನಲ್ಲಿನೀರಿಲ್ಲ, ಮೇವಿಲ್ಲ, ಕಳೆ ಹೆಚ್ಚಿದೆ. ಇದರಿಂದಾಗಿ ಸಂಘರ್ಷ ಹೆಚ್ಚುತ್ತಿದೆಯೆಂದು ಕೋಟಿಗಟ್ಟಲೆ ಖರ್ಚು ಮಾಡಿ ಕೆರೆ ತೋಡುವ, ಹುಲ್ಲುಗಾವಲುಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹೀಗೆ ಮಾಡಿಯೂ ಸಂಘರ್ಷ ಹೆಚ್ಚುತ್ತಿದೆಯೆಂದರೆ ಪರಿಹಾರಗಳು ಸಮಂಜಸವಲ್ಲಎಂದಾಯಿತು. ಹಾಗಾಗಿ, ಇಂಥ ವ್ಯರ್ಥಾಲಾಪಗಳ ಬದಲು ಆವಾಸಸ್ಥಾನಗಳ ಸಂರಕ್ಷಣೆ, ಅಭಿವೃದ್ಧಿ ಯೋಜನೆಗಳಿಗೆ (ಮೇಕೆದಾಟು, ಶರಾವತಿ ಯೋಜನೆಗಳು, ಇತರೆ) ವನ್ಯಜೀವಿ ಆವಾಸ ಸ್ಥಾನಗಳ ಹರಣವನ್ನು ನಿಲ್ಲಿಸಬೇಕು. ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ ರಾಮನಗರ, ಮಳವಳ್ಳಿ, ಹನೂರು, ಕೊಳ್ಳೇಗಾಲ ತಾಲೂಕುಗಳಲ್ಲಿಈಗ ಇರುವ ಮಾನವ-ಆನೆ ಸಂಘರ್ಷ ನೂರಾರು ಪಟ್ಟು ಹೆಚ್ಚಲಿದೆ.
ನಮ್ಮ ವನ್ಯಜೀವಿ ನಿರ್ವಹಣಾ ಕಾರ್ಯಗಳು ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಹಾಕಿದ ಹಾಗಿದೆ. ಇದಕ್ಕೆ ಸರಕಾರವೊಂದೇ ಕಾರಣವಲ್ಲ. ಹಲವಾರು ಸಂಘ ಸಂಸ್ಥೆಗಳು ತಮಗೆ ಅನುಕೂಲಕರವಾದ, ವನ್ಯಜೀವಿ ಸಂರಕ್ಷಣೆಗೆ ಆದ್ಯತೆಯಲ್ಲದ, ಆರ್ಥಿಕವಾಗಿ ಲಾಭದಾಯಕ ಮಾದರಿಗಳನ್ನು ಸರಕಾರ ಅನುಷ್ಠಾನಗೊಳಿಸುವಂತೆ ಪರೋಕ್ಷವಾಗಿ ಉತ್ತೇಜಿಸುತ್ತವೆ. ಉದಾ: ಮಾನವ- ವನ್ಯಜೀವಿ ಸಂಘರ್ಷ ಕಡಿಮೆಗೊಳಿಸುತ್ತದೆಯೆಂದು ರೋಜಾ/ ಸೆನ್ನಾ ಕಳೆ ತೆಗೆಯಲು ಕೆಲ ಸಂಘಸಂಸ್ಥೆಗಳು ಸರಕಾರದಿಂದ ಗುತ್ತಿಗೆ ಪಡೆದುಕೊಂಡಿವೆ. ಕಳೆ ತೆಗೆದ ಕೆಲವೇ ದಿನಗಳಲ್ಲಿಕಳೆಗಳು ಹಿಂದಿರುಗಿವೆ. ಕಳೆಯೂ ಹೋಗಲಿಲ್ಲ, ಸಂಘರ್ಷ ಹೆಚ್ಚುತ್ತಲೇ ಇದೆ.
ಆದಾಗ್ಯೂ, ಪ್ರಯೋಗಾತ್ಮಕವಾಗಿ ಅನುಷ್ಠಾನಗೊಳಿಸುವುದಾದರೆ ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿನ ಕಾಫಿ ತೋಟಗಳಿಗೆ ಸೀಮಿತವಾಗಿರುವ ಆನೆಗಳ ಮೇಲೆ ಮತ್ತು ತುಮಕೂರಿನ ಹೆಬ್ಬೂರು ಪ್ರದೇಶದಂಥ ಸಂಪೂರ್ಣವಾಗಿ ಜನವಸತಿ ಪ್ರದೇಶಗಳಲ್ಲಿಕಾಣಿಸಿಕೊಳ್ಳುವ ಚಿರತೆಗಳ ಮೇಲೆ ಸೀಮಿತ ಮಟ್ಟದಲ್ಲಿಪ್ರಯತ್ನಿಸಬಹುದು. ಆದರೆ, ಸಂಕ್ಷಿಪ್ತವಾಗಿ ಹೇಳುವುದಾದರೆ ವನ್ಯಜೀವಿ ಸಂಘರ್ಷಕ್ಕೆ ಕಾರಣವಾದ ಮೂಲ ವಿಚಾರಗಳನ್ನು ಪರಿಹರಿಸದಿದ್ದರೆ ಯಾವುದೇ ಪ್ರಯೋಗಗಳು ಫಲಕಾರಿಯಾಗುವುದಿಲ್ಲ. ‘ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ’ ಅನ್ನುವ ಹಾಗಿದೆ ನಮ್ಮ ವನ್ಯಜೀವಿ ಸಂರಕ್ಷಣಾ ಕೆಲಸ.

