‘ಲವ್ ಜಿಹಾದ್ ಹೆಸರಿನಲ್ಲಿಪ್ರಚೋದನೆ ಬೇಡ’
ವಿಕ ಸುದ್ದಿಲೋಕ ಹುಬ್ಬಳ್ಳಿ
ಲವ್ ಜಿಹಾದ್ ಹೆಸರಿನಲ್ಲಿಪ್ರಚೋದನಕಾರಿ ಭಾಷಣ ಮಾಡುತ್ತಾ ರಾಜ್ಯದಲ್ಲಿಕೋಮು-ಗಲಭೆಗೆ ಕಾರಣವಾಗುತ್ತಿರುವವರನ್ನು ಗಡಿಪಾರು ಮಾಡಬೇಕು ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಬಾಬಾಜಾನ್ ಮುಧೋಳ ಒತ್ತಾಯಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಸ್ಲಿಂ ಹೆಣ್ಣುಮಕ್ಕಳು ತಮ್ಮ ಹಿಂದೂ ಗೆಳತಿಯರನ್ನು ಮರಳು ಮಾಡಿ ಮನೆಗೆ ಕರೆದೊಯ್ಯುತ್ತಾರೆ. ಆಮೇಲೆ ನೀರಿನಲ್ಲಿಮತ್ತು ಭರಿಸುವ ಔಷಧಿ ಬೆರೆಸಿ ತಮ್ಮ ಅಣ್ಣ ತಮ್ಮಂದಿರಿಗೆ ತಲೆ ಹಿಡಿಯುತ್ತಾರೆ. ಮುಸ್ಲಿಂ ಹುಡುಗರ ಗೆಳತನ ಮಾಡಿದರೂ ಪರವಾಗಿಲ್ಲ, ಮುಸ್ಲಿಂ ಹೆಣ್ಣುಮಕ್ಕಳ ಗೆಳತನ ಯಾವುದೇ ಕಾರಣಕ್ಕೂ ಮಾಡಬೇಡಿ ಎಂದು ಹಿಂದೂಪರ ಸಂಘಟನೆಯ ಮುಖಂಡರು ಭಾಷಣ ಮಾಡುತ್ತಿರುವುದು ಖಂಡನೀಯ.
ಸದಾ ಸುಳ್ಳು, ಧರ್ಮದ್ವೇಷ ಪ್ರಚೋದನಕಾರಿ ಮಾತುಗಳಿಗೆ ಹೆಸರಾಗಿರುವ ಚಕ್ರವರ್ತಿ ಸೂಲಿಬೆಲೆ ಮುಸ್ಲಿಂ ಹೆಣ್ಣುಮಕ್ಕಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿಹರಿದಾಡುತ್ತಿವೆ. ಸುಳ್ಳು ಕಥೆ ಕಟ್ಟಿ ಹಿಂದೂ, ಮುಸ್ಲಿಂ ಮಹಿಳೆಯರ ನಡುವೆ ದ್ವೇಷ ಭಾಷಣ ಮಾಡುವವರನ್ನು ಸರಕಾರ ಕೂಡಲೇ ಗಡಿಪಾರು ಮಾಡಬೇಕು. ಜತೆಗೆ ಸುಮೋಟೋ ಕೇಸ್ ಹಾಕಿ ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಫೋಟೊ: ಬಾಬಾಜಾನ್ ಮುಧೋಳ

