ವಿಕ ಸುದ್ದಿಲೋಕ ಬೆಂಗಳೂರು
ಕಾನೂನು ಬಾಹಿರವಾಗಿ ಸಮಯ ಮುಗಿದಿರುವ ಪಿಆರ್ ಆರ್ -1 ಕಾಮಗಾರಿಗೆ ಕರೆದಿರುವ ಟೆಂಡರ್ ರದ್ದುಪಡಿಸುವಂತೆ ಪಿಆರ್ ಆರ್ ರೈತ ಹಾಗೂ ನಿವೇಶನದಾರರ ಸಂಘ ಆಗ್ರಹಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಚೇರಿಗೆ ಸೋಮವಾರ ಭೇಟಿ ನೀಡಿದ್ದ ಸಂಘದ ಪದಾಧಿಕಾರಿಗಳ ನಿಯೋಗವು ಭೂಮಾಲೀಕರ ಹಿತಾಸಕ್ತಿ ಕಡೆಗಣಿಸಿ, ಸೂಕ್ತ ಪರಿಹಾರವನ್ನೂ ನೀಡದೆ ಕಾಮಗಾರಿ ನಧಿಡೆಧಿಸಲು ಮುಂದಾಗಿರುವ ಬಿಡಿಎ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿತು. ಅಧಿಲ್ಲದೆ, ಟೆಂಡರ್ ರದ್ದುಪಡಿಸುವಂತೆ ಒತ್ತಾಯಿಸಿ ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್ ಹಾಗೂ ಬೆಂಗಳೂರು ಬಿಸಿನೆಸ್ ಕಾರಿಡಾರ್ ಅಧ್ಯಕ್ಷ ಎಲ್ .ಕೆ.ಅತೀಕ್ ಅವರಿಗೆ ಮನವಿ ಸಲ್ಲಿಸಿತು.
ನವೀಕೃತ ಡಿಪಿಆರ್ ಇಲ್ಲದೆ, ಪರಿಸರ ಇಲಾಖೆಯ ಅನುಮತಿ ಪಡೆಯದೆ, ಕೇಂದ್ರ ಸರಕಾರದ 2013ರ ಕಾಯಿಧಿದೆ ಪ್ರಕಾರ ಪರಿಹಾರವನ್ನೂ ನೀಡದೆ, ರೈತ ವಿರೋಧಿ ಪ್ರಕ್ರಿಯೆ ಮೂಲಕ ಯೋಜನೆ ರೂಪಿಸಲು ಮುಂದಾಗಿರುವುದು ಸರಿಯಲ್ಲ. ಹೀಧಿಗಾಧಿಗಿ, ಟೆಂಡರ್ ಪ್ರಕ್ರಿಯೆ ರದ್ದುಪಡಿಸಬೇಕು. ಇಲ್ಲವಾದರೆ, ಸಾಮೂಹಿಕವಾಗಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೊರೆ ಹೋಗಲಾಗುವುದು ಎಂದು ನಿಯೋಗ ಎಚ್ಚರಿಕೆ ನೀಡಿತು.
ಸಂಘದ ಅಧ್ಯಕ್ಷ ಮಾವಳ್ಳಿಪುರ ಬಿ.ಶ್ರೀನಿವಾಸ್ , ಜಗನ್ನಾಥ್ ಈರಂಡಹಳ್ಳಿ, ಗೌತಮ್ ಚಂದ ಜೈನ್ , ಗೋವಿಂದರಾಜು, ಜಗದೀಶ್ ರೆಡ್ಡಿ ನಿಧಿಯೋಧಿಗಧಿದಧಿಲ್ಲಿಧಿದ್ದಧಿರು.

