ಪಾನಮತ್ತ ಚಾಲನೆ: 747 ಚಾಧಿಲಧಿಕರ ವಿಧಿರುದ್ಧ ಕೇಸ್

Contributed byMANJUNATHA S|Vijaya Karnataka

ಬೆಂಗಳೂರಿನಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಏ.6ರಿಂದ 12ರವರೆಗೆ ಮದ್ಯ ಸೇವಿಸಿ ವಾಹನ ಚಲಾಯಿಸಿದ 747 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರೆಲ್ಲರೂ ತಲಾ 10 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಚಾಲನಾ ಪರವಾನಗಿ ರದ್ದುಪಡಿಸಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಅತಿ ವೇಗದಿಂದ ಚಾಲನೆ ಮಾಡಿದ 232 ಪ್ರಕರಣಗಳಲ್ಲೂ ದಂಡ ಸಂಗ್ರಹಿಸಲಾಗಿದೆ.

alcohol ban case filed against 747 drivers for dangerous driving

ವಿಕ ಸುದ್ದಿಲೋಕ ಬೆಂಗಳೂರು

ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಸಂಚಾರ ಪೊಲೀಸರು, 747 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿಏ.6ರಿಂದ 12ರವರೆಗೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿತ್ತು. 50,941 ವಾಹನಗಳನ್ನು ತಡೆದು ಚಾಲಕರಿಗೆ ಮದ್ಯ ಸೇವನೆ ಪತ್ತೆ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ 747 ಚಾಲಕರು ಮದ್ಯ ಸೇವಿಸಿರುವುದು ದೃಧಿಢಪಟ್ಟಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದಕ್ಕಾಗಿ ಪ್ರತಿ ಚಾಲಕರು ನ್ಯಾಧಿಯಾಧಿಲಧಿಯಧಿದಲ್ಲಿತಲಾ 10 ಸಾವಿರ ರೂ.ದಂಡವನ್ನು ಪಾವತಿಸಲಿದ್ದಾರೆ. ಜತೆಗೆ, ಚಾಲಕರ ಚಾಲನಾ ಪರವಾನಗಿ ರದ್ದುಪಡಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗುತ್ತಧಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ, ಅತಿ ವೇಗದಿಂದ ವಾಹನ ಚಾಲನೆ ಮಾಡುವವರ ವಿರುದ್ಧದ ಕಾರ್ಯಾಚರಣೆಯಲ್ಲಿ232 ಪ್ರಕರಣ ದಾಖಲಿಸಿ 2.33 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.