ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ
ವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)
ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ರಜಾ ದಿನಗಳ ಸದುಪಯೋಗಕ್ಕಾಗಿ ಹಂಪಿಯ ಯೋಗ ಟ್ರಸ್ಟ್ ವತಿಯಿಂದ ಈ ವರ್ಷವೂ ಸತತ 7ನೇ ವರ್ಷದ ಉಚಿತ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಯೋಗ, ಧ್ಯಾನ, ಚಿತ್ರಕಲೆ, ಕ್ರಾಫ್ಟ್ , ಮಣ್ಣಿನ ಪೋಟರ್ ಮತ್ತು ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳ ಕುರಿತು ಪರಿಣಿತರಿಂದ ತರಬೇತಿ ನಡೆಯಲಿದೆ. ಭಾಗವಹಿಸುವ ಮಕ್ಕಳಿಗೆ ಉಚಿತವಾಗಿ ಡ್ರಾಯಿಂಗ್ ಕಿಟ್ , ಟೀ-ಶರ್ಟ್ ಹಾಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಮೊದಲು ಬಂದ 100 ಮಕ್ಕಳಿಗೆ ಮಾತ್ರ ಶಿಬಿರದಲ್ಲಿಪಾಲ್ಗೊಳ್ಳಲು ಅವಕಾಶವಿರುತ್ತದೆ ಎಂದು ಟ್ರಸ್ಟ್ ನ ಅಧ್ಯಕ್ಷ ಫಕ್ರುದ್ದೀನ್ ಮಾಹಿತಿ ನೀಡಿದ್ದಾರೆ.
ಮಕ್ಕಳಿಗೆ ಒಂದು ದಿನದ ಹೊರ ಸಂಚಾರವಿರುತ್ತದೆ. ಹಂಪಿಯ ಐತಿಹಾಸಿಕ ಸ್ಮಾರಕಗಳ ಭೇಟಿ ನೀಡುವ ಜತೆಗೆ, ಸ್ಮಾರಕಗಳ ಸಂರಕ್ಷಣೆ ಮತ್ತು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಲಾಗುವುದು. ಅಲ್ಲದೆ, ಹತ್ತಿರದ ಪೊಲೀಸ್ ಠಾಣೆಯ ಪರಿಚಯ ಮಾಡಿಸಿಕೊಟ್ಟು, ಕಾನೂನು ಅರಿವು ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಆಸಕ್ತರು ಹಾಗೂ ಮಾಹಿತಿಗೆ 944 8819630, 7019468921 ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ಸುತ್ತ್ತಲಿನ ಪೋಷಕರು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಟ್ರಸ್ಟಿನ ಗೌರವಾಧ್ಯಕ್ಷ ಮೋಹನ್ ಚಿಕ್ ಭಟ್ ಜೋಶಿ ಹಾಗೂ ಸದಸ್ಯ ಪ್ರಮೋದ್ ನರಗುಂದ ಮನವಿ ಮಾಡಿದ್ದಾರೆ.
ಧಿ
ಫೋಟೊ: ವಿಜೆಎನ್ 13ಜಯಪ್ಪ05: ಟ್ರಸ್ಟ್ ಅಧ್ಯಕ್ಷ ಫಕ್ರುದ್ದೀನ್

