ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಳವಡಿಕೆಗೂ ಉದ್ಯೋಗಿಗಳ ವಜಾಗೊಳಿಸುವಿಕೆಗೂ ಯಾವುದೇ ಸಂಬಂಧವಿಲ್ಲ. ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವ ಶೈಲಿ ಬದಲಾಗಿದೆ. ಹೀಗಾಗಿ ಸೀನಿಯರ್ ಮಟ್ಟದ ಅಧಿಕಾರಿಗಳನ್ನು ವಜಾಗೊಳಿಸಿದ್ದೇವೆ ಎಂದು ಟಿಸಿಎಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ. ಕೃತಿವಾಸನ್ ತಿಳಿಸಿದ್ದಾರೆ.
‘‘ಅನುಭವಿ ಕೆಲಸಗಾರರ ಮೇಲೆ ನಮ್ಮ ಅವಲಂಬನೆ ತುಸು ಕಡಿಮೆಯಾಗಿದೆ. ನಮ್ಮ ಒಟ್ಟಾರೆ ನೇಮಕ ಮಾದರಿಯಲ್ಲಿಯಾವುದೇ ಬದಲಾವಣೆ ಇಲ್ಲ. ದೇಶದ ಯಾವುದೇ ಖಾಸಗಿ ವಲಯಗಳಿಗೆ ಹೋಲಿಸಿದಾಗ ನಮ್ಮ ಕಂಪನಿ ಅತಿ ಹೆಚ್ಚು ಮಂದಿ ಹೊಸಬರನ್ನು ನೇಮಿಸಿಕೊಳ್ಳುತ್ತಿದೆ,’’ ಎಂದಿದ್ದಾರೆ.
‘‘ಕೆಲಸದ ವಿವಿಧ ಯೋಜನೆಗಳಲ್ಲಿ ಉದ್ಯೋಗಿಗಳು ತೊಡಗುವ ಮುನ್ನ 9 ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ಇದು ನಮ್ಮ ವ್ಯವಹಾರದ ಅಗತ್ಯಗಳು ನೇಮಕಾತಿ ತಂತ್ರಗಳ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ನೇಮಕ ನಿರ್ಣಯಗಳು ವ್ಯವಹಾರದ ಬೇಡಿಕೆಯನ್ನು ಅವಲಂಬಿಸಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವವರು ಕಂಪನಿಯೊಂದಿಗೆ ತಮ್ಮ ವೃತ್ತಿ ಜೀವನದಲ್ಲಿಬೆಳವಣಿಗೆ ಕಾಣಬಹುದು,’’ ಎಂದು ಕೃತಿವಾಸನ್ ಪ್ರತಿಪಾದಿಸಿದ್ದಾರೆ.
..
25,000
ಹೊಸ ಉದ್ಯೋಗಿಗಳನ್ನು 2027ರಲ್ಲಿನೇಮಕ ಮಾಡಿಕೊಳ್ಳಲಿ ಟಿಸಿಎಸ್ ನಿರ್ಧರಿಸಿದೆ ಎಂದು ಕಂಪನಿಯ ಸಿಇಒ ಕೃತಿವಾಸನ್ ಮಾಹಿತಿ ನೀಡಿದ್ದಾರೆ.
.....
52 ಲಕ್ಷ ಸಣ್ಣ ಸಿಲಿಂಡರ್ ಪೂರೈಕೆ
ಹೊಸದಿಲ್ಲಿ: ಪಶ್ಚಿಮ ಏಷ್ಯಾದ ಯುದ್ಧದಿಂದ ಉಂಟಾದ ಅಡೆತಡೆಗಳ ನಡುವೆ ಇಂಧನ ಲಭ್ಯತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿದೇಶದಲ್ಲಿ5 ಕೆ.ಜಿ ಎಲ್ ಪಿಜಿ ಸಿಲಿಂಡರ್ ಗಳ ಪೂರೈಕೆಯನ್ನು ಹೆಚ್ಚಿಸಲಾಗಿದೆ. ಕೊಳವೆ ಅನಿಲ ಸಂಪರ್ಕ (ಪಿಎನ್ ಜಿ) ಸಂಪರ್ಕಗಳನ್ನು ಸಹ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ. ಸದ್ಯ ಪ್ರತಿ ದಿನ ಒಂದು ಲಕ್ಷ ಯುನಿಟ್ ಮಾರಾಟ ಆಗುತ್ತಿದೆ. ಮಾರ್ಚ್ 23ರಿಂದ ಏ.11ರವರೆಗೆ 52 ಲಕ್ಷಕ್ಕೂ ಹೆಚ್ಚು 5 ಕೆ.ಜಿ ಸಿಲಿಂಡರ್ ಗಳನ್ನು ವಿತರಿಸಲಾಗಿದೆ. ವಲಸೆ ಕಾರ್ಮಿಕರು ಮತ್ತು ಕಡಿಮೆ ಆದಾಯದ ಗ್ರಾಹಕರು ಹೆಚ್ಚಾಗಿ ಈ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಮಾರ್ಚ್ನಿಂದ 4,24,000 ಕ್ಕೂ ಹೆಚ್ಚು ಹೊಸ ಪಿಎನ್ ಜಿ ಸಂಪರ್ಕಗಳನ್ನು ಸಕ್ರಿಯಗೊಳಿಸಲಾಗಿದೆ. ಪರಿವರ್ತನೆಯ ಭಾಗವಾಗಿ 30,000 ಕ್ಕೂ ಹೆಚ್ಚು ಗ್ರಾಹಕರು ಎಲ್ ಪಿಜಿ ಸಂಪರ್ಕಗಳನ್ನು ಸರಂಡರ್ ಮಾಡಿದ್ದಾರೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.
........
ಪೇಟೆಂಟ್ ಅರ್ಜಿ ಸಲ್ಲಿಕೆಯಲ್ಲಿ
ಕರ್ನಾಟಕ, ತ.ನಾಡು ಮುಂದೆ
ಹೊಸದಿಲ್ಲಿ: ದೇಶದಲ್ಲಿಹಕ್ಕುಸ್ವಾಮ್ಯ (ಪೇಟೆಂಟ್ ) ಕೋರಿ ಸಲ್ಲಿಸಲಾದ ಅರ್ಜಿಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.30.2ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಪ್ರಸ್ತುತ, ಪೇಟೆಂಟ್ ಸಲ್ಲಿಕೆಯಲ್ಲಿಭಾರತವು ವಿಶ್ವದ 6ನೇ ಅತಿದೊಡ್ಡ ದೇಶವಾಗಿದೆ. ನಮ್ಮ ಪೇಟೆಂಟ್ ಸಲ್ಲಿಕೆಗಳು 2025-26ರಲ್ಲಿದಾಖಲೆಯ 1.43 ಲಕ್ಷ ದಾಟಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.30.2ರಷ್ಟು ಹೆಚ್ಚಳವಾಗಿದೆ. ಈ ಪೈಕಿ ಶೇ.69ರಷ್ಟು ಅರ್ಜಿಗಳು ದೇಶೀಯವಾಗಿವೆ. ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದ ನವೋದ್ಯಮಿಗಳು ಮುಂದಿದ್ದಾರೆ.
‘‘ದೇಶದಲ್ಲಿಪೇಟೆಂಟ್ ವ್ಯವಸ್ಥೆಯನ್ನು ಬಲಪಡಿಸಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ನವೋದ್ಯಮಗಳು, ಎಂಎಸ್ ಎಂಇಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪೇಟೆಂಟ್ ಶುಲ್ಕ ಕಡಿತ, ಅರ್ಜಿಗಳ ತ್ವರಿತ ಪರಿಶೀಲನೆ, ಪೇಟೆಂಟ್ , ಟ್ರೇಡ್ ಮಾರ್ಕ್ ಅರ್ಜಿಗಳನ್ನು ಸಲ್ಲಿಸಲು ನವೋದ್ಯಮಗಳಿಗೆ ಉಚಿತ ನೆರವು ಇವುಗಳಲ್ಲಿಸೇರಿವೆ,’’ ಎಂದು ಗೋಯಲ್ ಮಾಹಿತಿ ನೀಡಿದ್ದಾರೆ.
.........

