ವಿಕ ಸುದ್ದಿಲೋಕ ಕಾರವಾರ
ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಹಲವು ಹೋಮ್ ಸ್ಟೇಗಳು ಹೈಕೋರ್ಟ್ ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿದ್ದು, ಸ್ಥಳೀಯರ ಬದುಕು ದುಸ್ತರವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣ ಟಿ. ಭಟ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ‘‘ಅಧಿಕಾರಿಗಳು, ಪ್ರಭಾವಿಗಳ ಶಾಮೀಲಾಗಿದ್ದರಿಂದ ಇಷ್ಟೆಲ್ಲನಡೆಯುತ್ತಿದೆ. ದಾಖಲೆಗಳ ಪ್ರಕಾರ ಪ್ರಧಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ35ಕ್ಕೂ ಹೆಚ್ಚು ಹೋಮ್ ಸ್ಟೇಗಳು ಇವೆ. ವಾಸ್ತವದಲ್ಲಿ45ಕ್ಕೂ ಹೆಚ್ಚು ಹೋಮ್ ಸ್ಟೇಗಳು ಅಕ್ರಮವಾಗಿ ನಡೆಯುತ್ತಿವೆ’’ ಎಂದು ದೂರಿದರು.
ಇಲ್ಲಿತಡರಾತ್ರಿವರೆಗೂ ಡಿಜೆ ಅಬ್ಬರ, ಅಕ್ರಮ ಮದ್ಯ ಸೇವನೆ ಮತ್ತು ಈಜುಗೊಳಗಳಲ್ಲಿಕಿರುಚಾಟ ಸಾಮಾನ್ಯವಾಗಿದೆ. ಹೈಕೋರ್ಟ್ ನ ನಿಬಂರ್ ಧಗಳಿದ್ದರೂ ಇವೆಲ್ಲನಡೆಯುತ್ತಿವೆ. ಪರಿಸರ ರಕ್ಷಣೆ ನಿಯಮಗಳನ್ನು ಉಲ್ಲಂಘಿಘಿಸಿ ಹೊರಗಿನವರು ಭೂಮಿ ಲೀಸ್ ಪಡೆದು ಈ ವ್ಯವಹಾರ ನಡೆಸುತ್ತಿದ್ದಾರೆ. ಇದಕ್ಕೆ ಗ್ರಾಮ ಪಂಚಾಯಿತಿ ಕೆಲ ಸದಸ್ಯರೇ ಬೆಂಬಲ ನೀಡುತ್ತಿದ್ದಾರೆ’’ ಎಂದರು.
ವಕೀಲ ದತ್ತಾತ್ರೇಯ ನಾಯ್ಕ ಮಾತನಾಡಿ, ‘‘ಗೋಕರ್ಣ, ಮುರುಡೇಶ್ವರ ಹಾಗೂ ದಾಂಡೇಲಿ ಭಾಗಗಳಲ್ಲಿನ್ಯಾಯಾಲಯದ ಆದೇಶಗಳು ಪಾಲನೆಯಾಗುತ್ತಿಲ್ಲ. ಆಡಳಿತ ಮತ್ತು ಪ್ರತಿಪಕ್ಷಗಳೆರಡೂ ಈ ಅಕ್ರಮದಲ್ಲಿಶಾಮೀಲಾಗಿವೆ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ತಪ್ಪು ಮಾಡುವ ಅಧಿಕಾರಿಗಳು ಮುಂದೆ ನ್ಯಾಯಾಂಗ ನಿಂದನೆಯ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ’’ ಎಂದು ಎಚ್ಚರಿಸಿದರು.
ಶಿವರಾಮ ದೇಸಾಯಿ, ಪರುಶುರಾಮ ಮೊರಸ್ಕರ್ , ಸಂದೀಪ ನಾಯ್ಕ ಮುರುಡೇಶ್ವರ, ಬಾಮಣಗಿ ಮತ್ತು ಗವೇಗಾಳಿ ಗ್ರಾಮದ ಪ್ರಮುಖರು ಇದ್ದರು.
13ಪ್ರಮೋದ3
ಅಕ್ರಮ ಹೋಮ್ ಸ್ಟೇಗಳ ವಿರುದ್ಧ ಮಾತನಾಡಿದರು.

