ವ್ಯಾಪಾರೀಕರಣವಾದ ರಾಜಕಾರಣ

Contributed bygururaja.jd@gmail.com|Vijaya Karnataka

ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಂಬ್ಳೇಬೈಲು ಮೋಹನ್‌ ಅವರ 'ಸಾರ್ಥಕ' ಪುಸ್ತಕ ಬಿಡುಗಡೆಯಾಯಿತು. ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌ ಅವರು ಇತ್ತೀಚಿನ ರಾಜಕಾರಣದಲ್ಲಿ ವ್ಯಾಪಾರೀಕರಣ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತಿರುವುದರ ಬಗ್ಗೆ ಮಾತನಾಡಿದರು. ಸಭ್ಯರು ಅಸಭ್ಯರಿಂದ ಆಳಿಸಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಪ್ಲೇಟೊ ಹೇಳಿದ್ದು ಈಗ ನಿಜವಾಗುತ್ತಿದೆ ಎಂದರು. ಮೋಹನ್‌ ಅವರು ಜನಸಾಮಾನ್ಯರೊಂದಿಗೆ ಬೆರೆತು ತಮ್ಮ ವ್ಯಕ್ತಿತ್ವ ಉಳಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

commercialization of politics and social responsibility

ಪುಸ್ತಕ ಬಿಡುಗಡೆ ಸಮಾರಂಭದಲ್ಲಿಮಾಜಿ ಸಭಾಪತಿ ಬಿ.ಎಲ್ .ಶಂಕರ್

ವ್ಯಾಪಾರೀಕರಣವಾದ ರಾಜಕಾರಣ

ವಿಕ ಸುದ್ದಿಲೋಕ ಶಿವಮೊಗ್ಗ

ಪ್ರತಿಷ್ಠೆ, ಅಹಂಕಾರದ ರಾಜಕಾರಣವನ್ನು ಇತ್ತೀಚಿನ ದಿನಗಳಲ್ಲಿನಾವು ಕಾಣುತ್ತಿದ್ದೇವೆ ಎಂದು ಮಾಜಿ ಸಭಾಪತಿ ಡಾ.ಬಿ.ಎಲ್ .ಶಂಕರ್ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿಸೋಮವಾರ ಉಂಬ್ಳೇಬೈಲು ಮೋಹನ್ ಅಭಿನಂದನಾ ಸಮಿತಿ ಮತ್ತು ಅಸ್ಮಿತೆ ಫೌಂಡೇಷನ್ ನಿಂದ ಡಾ.ಬಿ.ಎಸ್ . ಸಚಿನ್ ಸಂಪಾದಕತ್ವದ ಉಂಬ್ಳೇಬೈಲು ಮೋಹನ್ ಅವರ ಜೀವನ ಕುರಿತ ಅಭಿನಂದನಾ ಪುಸ್ತಕ ‘ಸಾರ್ಥಕ’ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಇಂದು ರಾಜಕಾರಣದಲ್ಲಿಪ್ರತಿಷ್ಠೆ ಹೆಚ್ಚಾಗಿದ್ದು, ಪರಿಸ್ಥಿತಿಯ ಪಿತೂರಿಗೆ ಬಲಿಯಾದವರಲ್ಲಿಪಿಜಿಆರ್ ಸಿಂಧ್ಯಾ, ನಾನು, ಈಶ್ವರಪ್ಪ ಸೇರಿದಂತೆ ಅನೇಕರಿದ್ದೇವೆ. ‘ಕೆಲವು ನಿರ್ಧಾರಗಳಿಂದ ಸಭ್ಯರು ಅಸಭ್ಯರಿಂದ ಆಳಿಸಿಕೊಳ್ಳುವ ಪರಿಸ್ಥಿತಿ ಬರುತ್ತದೆ’ ಎಂದು ನೂರಾರು ವರ್ಷದ ಹಿಂದೆಯೆ ಪ್ಲೇಟೊ ಹೇಳಿದ್ದರು. ಅದು ಈಗ ನಿಜವಾಗುತ್ತಿದೆ. ರಾಜಕಾರಣ ವ್ಯಾಪಾರೀಕರಣವಾಗಿದೆ. ಸ್ವಹಿತಕ್ಕಾಗಿ ರಾಜಕಾರಣ ಮಾಡುವವರೆ ಹೆಚ್ಚಿರುವ ಈ ದಿನಗಳಲ್ಲಿತಮಗೆ ಸಿಕ್ಕ ಅವಕಾಶದಲ್ಲಿಜನರ ಜತೆ ಬೆರೆತು ಮೋಹನ್ ತಮ್ಮ ವ್ಯಕ್ತಿತ್ವ ಉಳಿಸಿಕೊಂಡಿದ್ದಾರೆ ಎಂದರು.

ಉಂಬ್ಳೇಬೈಲು ಮೋಹನ್ ಕುರಿತು ಆಶಯ ಭಾಷಣ ಮಾಡಿದ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಸಹಕಾರಿ ಧುರೀಣ ಉಂಬ್ಳೇಬೈಲು ಮೋಹನ್ ಇಡೀ ಜೀವನದಲ್ಲಿಜನಸಾಮಾನ್ಯರ ಜತೆ ಬೆರೆತಿದ್ದಾರೆ. ಇದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಅವರು ಜೆ.ಎಚ್ .ಪಟೇಲ್ , ಕಾಗೋಡು ತಿಮ್ಮಪ್ಪ, ಡಿ.ಬಿ. ಚಂದ್ರೇಗೌಡ, ಬಿ.ಎಲ್ .ಶಂಕರ್ , ಎಸ್ .ಬಂಗಾರಪ್ಪ ಮೊದಲಾದವರ ಜತೆ ಹತ್ತಿರದ ಒಡನಾಟ ಹೊಂದಿದ್ದರು. ಯುವ ಪೀಳಿಗೆ ಮೋಹನ್ ಕುರಿತ ಸಾರ್ಥಕ ಈ ಪುಸ್ತಕ ಓದಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಕೆ.ಎಸ್ .ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ವೈ.ರಾಘವೇಂದ್ರ, ಸಾರ್ಥಕ ಪುಸ್ತಕದ ಸಂಪಾದಕ ಡಾ.ಬಿ.ಎಸ್ .ಸಚಿನ್ , ಪ್ರಮುಖರಾದ ಎಂ.ಶ್ರೀಕಾಂತ್ , ಬಸವಾನಿ ವಿಜಯ್ ದೇವ್ , ಕಡಿದಾಳ್ ಗೋಪಾಲ್ , ಎಂ.ಬಿ.ಚನ್ನವೀರಪ್ಪ, ಬಿ.ಎ.ರಮೇಶ್ ಹೆಗ್ಡೆ ಸೇರಿದಂತೆ ಮೋಹನ್ ಅವರ ಸ್ನೇಹಿತರು, ಅಭಿಮಾನಿಗಳಿದ್ದರು.

=====

13ಎಸ್ ಎಂಜಿ14

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿಆಯೋಜಿಸಿದ್ದ ಕಾರ್ಯಕ್ರಮದಲ್ಲಿಉಂಬ್ಳೇಬೈಲು ಮೋಹನ್ ಕುರಿತ ಅಭಿನಂದನಾ ಪುಸ್ತಕ ‘ಸಾರ್ಥಕ’ವನ್ನು ಗಣ್ಯರು ಬಿಡುಗಡೆ ಮಾಡಿದರು.