ಮರಗಳ ಹನನ ತಡೆಗೆ ಟ್ರಿ ಕಮಿಟಿ

Contributed byharisha.lakshmipathy@timesgroup.com|Vijaya Karnataka

ಮೈಸೂರಿನಲ್ಲಿ ಮರಗಳ ಹನನ ತಡೆಯಲು ಅರಣ್ಯ ಇಲಾಖೆ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಟ್ರಿ ಕಮಿಟಿ ರಚಿಸಲಾಗಿದೆ. ಕಾಮಗಾರಿ ಸಂದರ್ಭದಲ್ಲಿ ಮರ ತೆರವುಗೊಳಿಸಬೇಕೆ ಬೇಡವೇ ಎಂಬುದನ್ನು ಈ ಸಮಿತಿ ನಿರ್ಧರಿಸಲಿದೆ. ಡಿಸಿಎಫ್ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪರಿಸರ ಹೋರಾಟಗಾರರು ಸದಸ್ಯರಾಗಿದ್ದಾರೆ. ಅನವಶ್ಯಕ ಮರ ಕಡಿತಕ್ಕೆ ಕಡಿವಾಣ ಹಾಕುವ ಗುರಿ ಹೊಂದಿದೆ.

committee formed to stop tree felling tree committee established in mysore

ಮರಗಳ ಹನನ ತಡೆಗೆ ಟ್ರಿ ಕಮಿಟಿ

- ಎಸಿಎಫ್ ರವೀಂದ್ರ ಮಾಹಿತಿ | ಸ್ಥಳ ಪರಿಶೀಲಿಸಿ ನಿರ್ಧರಿಸಲಿರುವ ಸಮಿತಿ

ವಿಕ ಸುದ್ದಿಲೋಕ ಮೈಸೂರು

ಮೈಸೂರಿನಲ್ಲಿಮರಗಳ ಹನನ ತಡೆಗಟ್ಟಲು ಅರಣ್ಯ ಇಲಾಖೆ, ಸಾರ್ವಜನಿಕರ ಸಹಭಾಗಿತ್ವದಲ್ಲಿಟ್ರಿ ಕಮಿಟಿ(ವೃಕ್ಷ ಸಮಿತಿ) ರಚಿಸಿದೆ ಎಂದು ಎಸಿಎಫ್ ರವೀಂದ್ರ ತಿಳಿಸಿದರು.

ಮೈಸೂರಿನ ಯಾದವಗಿರಿಯಲ್ಲಿರುವ ಮೈಸೂರು ಗ್ರಾಹಕ ಪರಿಷತ್ ಕಚೇರಿಯಲ್ಲಿನಡೆದ ಮಾಸಿಕ ಸಭೆಯಲ್ಲಿಕರ್ನಾಟಕ ಮರಗಳ ಸಂರಕ್ಷಣಾ ಕಾಯಿದೆ- 1976ರ ಕಾಯಿದೆ ಹಾಗೂ ಪರಿಸರ ಉಳಿವಿಗೆ ಟ್ರಿ ಕಮಿಟಿ ಸ್ಥಾಪನೆ ಕುರಿತು ಚರ್ಚಿಸುವ ವೇಳೆ ಅವರು ಈ ಮಾಹಿತಿ ನೀಡಿದರು.

‘‘ನಗರದಲ್ಲಿಕಾಮಗಾರಿ ನಡೆಯುವ ಸಂದರ್ಭದಲ್ಲಿಹಾಗೂ ಕಟ್ಟಡ ನಿರ್ಮಾಣ ಸಂದರ್ಭದಲ್ಲಿಮರಗಳನ್ನು ಕಡಿಯುವ ಸಂದರ್ಭ ಬಂದಾಗ ಈ ಟ್ರಿ ಕಮಿಟಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ, ವರದಿ ನೀಡಿದ ಬಳಿಕ ಮರ ತೆರವುಗೊಳಿಸಬೇಕೆ? ಬೇಡವೇ ತೀರ್ಮಾನಿಸುವುದು ಈ ಕಮಿಟಿಯ ಜವಾಬ್ದಾರಿಯಾಗಿರುತ್ತದೆ,’’ ಎಂದು ವಿವರಿಸಿದರು.

‘‘ಈ ಕಮಿಟಿಗೆ ಡಿಸಿಎಫ್ ಅಧ್ಯಕ್ಷರಾಗಿರುತ್ತಾರೆ. ಸೆಸ್ಕ್ ಮತ್ತು ಎಂಸಿಸಿ ಪರಿಸರ ಎಂಜಿನಿಯರ್ , ತೋಟಗಾರಿಕೆ ಇಲಾಖೆ ಎಇಇ ಹಾಗೂ ಎಂಡಿಎ ಎಂಜಿನಿಯರ್ ಒಬ್ಬರನ್ನು ಆಯ್ಕೆ ಮಾಡಿದ್ದು, ಎನ್ ಜಿಒ ಕಡೆಯಿಂದ ಪರಿಸರ ಹೋರಾಟಗಾರ್ತಿ ಭಾನುಮೋಹನ್ , ಸಂಜಯ್ ಧಾತ್ರಿ ಅವರನ್ನು ಆಯ್ಕೆ ಮಾಡಲಾಗಿದೆ,’’ ಎಂದು ತಿಳಿಸಿದರು.

ಎಂಜಿಪಿ ಸದಸ್ಯ ಭಾನು ಪ್ರಶಾಂತ್ ಮಾತನಾಡಿ, ‘‘ಟ್ರಿ ಕಮಿಟಿ ಅಸ್ತಿತ್ವಕ್ಕೆ ಬಂದ ಮೇಲೆ ಅನವಶ್ಯಕವಾಗಿ ಮರಗಳ ಹನನ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಅಲ್ಲದೆ, ಪಾರಂಪರಿಕ ಕಟ್ಟಡದ ಆಸು-ಪಾಸು(ಮೈಸೂರು ವಿವಿ ಪಕ್ಕದಲ್ಲಿ) ಮರಗಳ ಹನನ ಮಾಡುವುದನ್ನು ತಪ್ಪಿಸಬಹುದು,’’ ಎಂದರು.

‘‘ಕುಕ್ಕರಹಳ್ಳಿ ಕೆರೆ ಸಮೀಪದ ರೈಲ್ವೆ ಅಂಡರ್ ಪಾಸ್ ಮಾಡಲು ಟೆಂಡರ್ ಕರೆಯಲಾಗಿದೆ. ಈ ಕಾಮಗಾರಿಗೆ ಸುಮಾರು 70ಕ್ಕೂ ಅಧಿಕ ಮರಗಳನ್ನು ಕಡಿಯಲು ಗುರುತು ಮಾಡಲಾಗಿದೆ. ಇಂತಹ ಪರಿಸರ ವಿರೋಧಿ ಕ್ರಮಗಳನ್ನು ತಪ್ಪಿಸಲು ಈ ಕಮಿಟಿ ಕೆಲಸ ಮಾಡಬೇಕು,’’ ಎಂದರು.

ಮೈಸೂರು ವಿವಿ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್ .ಶಂಕರ್ ಭಟ್ , ಸದಸ್ಯರಾದ ಪ್ರಭ ನಂದೀಶ್ , ಡಾ.ರೇಣು ಅಗರ್ವಾಲ್ , ಗೀತಾ ವೇಲುಮಣಿ, ಎಸ್ .ಶೈಲಜೇಶ, ರಾಯ್ ಜೋಸೆಫ್ , ವಿಶ್ವನಾಥ್ , ಪ್ರಶಾಂತ್ , ವಸಂತ್ ಕುಮಾರ್ ಮೈಸೂರು ಮಠ್ , ಪರಿಸರ ಹೋರಾಟಗಾರ ಶಿವಕುಮಾರ್ , ಸಿ.ತುಳಸಿರಾಮನ್ , ನಿವೃತ್ತ ಮೇಜರ್ ಜನರಲ್ ಸುಧೀರ್ ಒಂಬತ್ಕೆರೆ, ಡಿ.ವಿ.ದಯಾನಂದಸಾಗರ್ , ಎಂಜಿಪಿ ಕಾರ್ಯಾಧ್ಯಕ್ಷ ಎಸ್ .ಕೆ.ದಿನೇಶ್ , ಡಾ.ವಿ.ಜಗನ್ನಾಥ್ , ಎಸ್ .ಮೋಹನ್ , ಸೂರಜ್ ನಂದನ್ ಸಭೆಯಲ್ಲಿದ್ದರು.

ಪೋಟೋ ಇದೆ.