ಬೆಂಗಳೂರು-ಮುಂಬಯಿ ಸೂಪರ್ ಫಾಸ್ಟ್ ಕೂಡಲೇ ಓಡಿಸಿ
ಹುಬ್ಬಳ್ಳಿ : ಆರು ತಿಂಗಳು ಹಿಂದೆ ಘೋಷಿಸಿದ ಬೆಂಗಳೂರು-ಮುಂಬಯಿ ಸೂಪರ್ ಫಾಸ್ಟ್ ಎಕ್ಸಪ್ರೆಸ್ ರೈಲು ಸಂಚಾರವನ್ನು ಕೂಡಲೇ ಆರಂಭಿಸಬೇಕೆಂದು ನೈಋುತ್ಯ ರೈಲ್ವೆ ವಲಯದ ರೈಲು ಬಳಕೆದಾರರ ಸಲಹಾ ಸಮಿತಿ(ಝಡ್ ಆರ್ ಯುಸಿಸಿ) ಸದಸ್ಯ ಮಹೇಂದ್ರ ಸಿಂಘಿಘಿ ಅವರು ರೈಲ್ವೆ ಸಚಿವರಿಗೆ ಆಗ್ರಹಿಸಿದ್ದಾರೆ.
ಈ ಕುರಿತು ಸಚಿವರಿಗೆ ಪತ್ರ ಬರೆದಿರುವ ಸಿಂಘಿಘಿ, ಬೆಂಗಳೂರು-ಮುಂಬಯಿ ಸೂಪರ್ ಫಾಸ್ಟ್ ಎಕ್ಸಪ್ರೆಸ್ ರೈಲು ಸೇವೆ ಬಗ್ಗೆ ಘೋಷಣೆಯಾಗಿ ಆರು ತಿಂಗಳಿಗಿಂತ ಹೆಚ್ಚು ಕಾಲ ಕಳೆದಿದೆ. ಇದುವರೆಗೂ ಆರಂಭಗೊಂಡಿಲ್ಲ. ಕೂಡಲೇ ಸಂಚಾರ ಸೇವೆ ಆರಂಭಿಸಬೇಕು. ಈ ರೈಲು ಸೇವೆ ತಡರಾತ್ರಿ ವೇಳೆಗೆ ಸೂಪರ್ ಫಾಸ್ಟ್ ಸೇವೆಯಾಗಿ ಓಡಿಸಿದರೆ ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತಾಪಿತ ಬೆಂಗಳೂರು- ಮುಂಬಯಿ ವಂದೇ ಭಾರತ ಸ್ಲೀಪರ್ ರೈಲು ಸಂಚಾರ ಮಾರ್ಗವನ್ನು ಗುಂತಕಲ್ - ಸೊಲಾಪುರ-ದೌಂಡ್ ಬದಲು ಬೆಂಗಳೂರು-ತುಮಕೂರು-ದಾವಣಗೆರೆ-ಹುಬ್ಬಳ್ಳಿ-ಧಾರವಾಡ-ಬೆಳಗಾವಿ-ಪುಣೆ ಮಾರ್ಗವಾಗಿ ನಿಗದಿ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಇದರಿಂದ ಕರ್ನಾಟಕದ ಹೆಚ್ಚಿನ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ. ಜನಹಿತದ ದೃಷ್ಟಿಯಿಂದ ರೈಲ್ವೆ ಸಚಿವಾಲಯವು ಈ ಮನವಿಗೆ ತಕ್ಷಣ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

