ನನ್ನ ಕೇತ್ರದಲ್ಲಿಅತಿ ಹೆಚ್ಚಿನ ಹಕ್ಕುಪತ್ರಗಳ ವಿತರಣೆ

Contributed byrameshbabunram@gmail.com|Vijaya Karnataka

ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಹಕ್ಕುಪತ್ರ ವಿತರಿಸಿರುವ ಹೆಮ್ಮೆ ವ್ಯಕ್ತಪಡಿಸಿದರು. ಏ.15ರಂದು ನಡೆಯುವ ಜನಸ್ಪಂದನ ಕಾರ್ಯಕ್ರಮದಲ್ಲಿ 190 ಹಕ್ಕುಪತ್ರ ವಿತರಿಸಲಾಗುವುದು. ಉಳಿದ ಹಕ್ಕುಪತ್ರಗಳನ್ನು ಶೀಘ್ರದಲ್ಲೇ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು. ಸಾರ್ವಜನಿಕರು ಸರಕಾರಿ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

distribution of 4000 documents in my constituency janaspandana event is successful

ವಿಕ ಸುದ್ದಿಲೋಕ ಬಾಗೇಪಲ್ಲಿ

ಜನಸ್ಪಂದನ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ, ಇಡೀ ಕರ್ನಾಟಕದಲ್ಲೇ ಅತಿ ಹೆಚ್ಚಿನ ಹಕ್ಕುಪತ್ರಗಳನ್ನು ನನ್ನ ಕ್ಷೇತ್ರದಲ್ಲಿವಿತರಣೆ ಮಾಡಿರುವ ಹೆಮ್ಮೆ ನನಗಿದೆ ಎಂದು ಶಾಸಕ ಎಸ್ .ಎನ್ . ಸುಬ್ಬಾರೆಡ್ಡಿ ತಿಳಿಸಿದರು.

ತಾಲೂಕಿನ ಗೂಳೂರು ಹೋಬಳಿ ನಾಡ ಕಚೇರಿ ಆವರಣದಲ್ಲಿಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿಮಾತನಾಡಿದ ಅವರು, ಇದೇ ತಿಂಗಳ 15ರಂದು ನಡೆಯುವ ಜನಸ್ಪಂದನ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಜನಸ್ಪಂದನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ತಾಲೂಕು ಮಟ್ಟದ ಎಲ್ಲಾಇಲಾಖೆ ಅಧಿಕಾರಿಗಳು ಹಾಜರಿರುತ್ತಾರೆ. ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಒಂದೇ ಸ್ಥಳದಲ್ಲಿಆಗದಿರುವ ಅರ್ಜಿಗಳಿಗೆ ಕೇವಲ 1 ತಿಂಗಳಲ್ಲಿಪರಿಹಾರ ನೀಡಲಾಗುವುದು. ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ 4,000 ಹಕ್ಕುಪತ್ರಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಏ.15ರ ಜನಸ್ಪಂದನ ಕಾರ್ಯಕ್ರಮದಲ್ಲಿ190 ಹಕ್ಕುಪತ್ರಗಳನ್ನು ವಿತರಣೆ ಮಾಡಿ, ಉಳಿದ ಹಕ್ಕುಪತ್ರಗಳನ್ನು ಅತಿ ಶೀಘ್ರದಲ್ಲೇ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದೇನೆ ಎಂದರ.

ಆಯಾ ಪಂಚಾಯಿತಿ ಮಟ್ಟದಲ್ಲಿನಡೆಯುವ ಕಾರ್ಯಕ್ರಮಗಳಲ್ಲಿಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು, ಸಾರ್ವಜನಿಕರು ಸರಕಾರಿ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಜನಸ್ಪಂದನ ಕಾರ್ಯಕ್ರಮ ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂಧರ್ಭದಲ್ಲಿಚಿಮುಲ್ ಅಧ್ಯಕ್ಷ ವಿ. ಮಂಜುನಾಥರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಎಸ್ .ಎಸ್ . ರಮೇಶ್ ಬಾಬು, ರಾಜಸ್ವ ನಿರೀಕ್ಷಕ ಅನಿಲ್ ಕುಮಾರ್ , ಪಿಡಿಒ ಕೃಷ್ಣಮೂರ್ತಿ, ಗ್ರಾಮ ಲೆಕ್ಕಾಧಿಕಾರಿಗಳಾದ ಕುಮಾರ್ , ಚಂದ್ರಶೇಖರ್ , ನರೇಂದ್ರಬಾಬು, ಪುರಸಭೆ ಮಾಜಿ ಅಧ್ಯಕ್ಷ ಎ. ಶ್ರೀನಿವಾಸ, ಕಾಂಗ್ರೆಸ್ ಮುಖಂಡರಾದ ಗೊರ್ತಪಲ್ಲಿಶಂಕರರೆಡ್ಡಿ,ದರಖಾಸ್ತು ಸಮಿತಿ ಸದಸ್ಯ ಲಾಯರ್ ಚಂದ್ರಶೇಖರರೆಡ್ಡಿ, ಹುಬ್ಲಿಬಯ್ಯಪ್ಪ, ಶಂಕರನಾಯ್ ್ಕ, ಮುನ್ನಾ ಖಾನ್ , ಸುಬ್ಬರಾಮು, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶ್ವೇತ ಶೈಲ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

13 ಬಿಪಿಎಲ್ 2

ಗೂಳೂರು ನಾಡ ಕಚೇರಿ ಆವರಣದಲ್ಲಿಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿಶಾಸಕ ಎಸ್ .ಎನ್ . ಸುಬ್ಬಾರೆಡ್ಡಿ ಮಾತನಾಡಿದರು.