ಮಹಾತ್ಮರ ಆದರ್ಶ ರೂಢಿಸಿಕೊಳ್ಳಿ
ವಿಕ ಸುದ್ದಿಲೋಕ ಗುಳೇದಗುಡ್ಡ
‘‘ಸಮಾಜ ಸುಧಾರಕರ ಹಾಗೂ ಮಹಾತ್ಮರ ಚಿಂತನೆ ಮತ್ತು ಆದರ್ಶಗಳನ್ನು ಬದುಕಿನಲ್ಲಿಅಳವಡಿಸಿಕೊಳ್ಳಿ,’’ ಎಂದು ಕಮತಗಿ ಹುಚ್ಚೇಶ್ವರ ಸಂಸ್ಥಾನ ಮಠದ ಹೊಳೆ ಹುಚ್ಚೇಶ್ವರ ಶ್ರೀಗಳು ಹೇಳಿದರು.
ಪಟ್ಟಣದ ಕಾಡಸಿದ್ದೇಶ್ವರ ಮಠದಲ್ಲಿಮೌನಯೋಗಿಯ ಜಾತ್ರಾ ಮಹೋತ್ಸವ ನಿಮಿತ್ತ ಜರುಗಿದ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘‘ಮನುಷ್ಯ ಸಂಘಜೀವಿ ಆಗಬೇಕು. ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ಭಗವಂತನ ಧ್ಯಾನ ಮಾಡಬೇಕು. ಆದರ್ಶರಾಗಬೇಕು,’’ಎಂದರು.
ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಮಾತನಾಡಿ, ‘‘ಪೂಜ್ಯರು ನಡೆದಾಡುವ ದೇವರಾಗಿದ್ದರು. ಧರ್ಮದಂತೆ ನಡೆದು ಭಕ್ತರಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿದ್ದಾರೆ. ಅವರ ಆಲೋಚನೆಗಳನ್ನು ನಾವು ರೂಢಿಸಿಕೊಳ್ಳಬೇಕು,’’ ಎಂದರು.
ದುಮ್ಮವಾಡದ ಸರ್ಪಭೂಷಣ ದೇವರು ಮಾತನಾಡಿದರು. ರುದ್ರಮುನಿ ದೇವರು, ಪ್ರಕಾಶ ಅಂಕದ, ಚಿನ್ನು ಬಾರಾಟಕ್ಕೆ, ಮಲ್ಲಿಕಾರ್ಜುನ ಹಿರೇಮಠ, ಸಂಗಪ್ಪ ಜವಳಿ, ಮುತ್ತಣ್ಣ ದೇವರಮನಿ, ಭೀಮಪ್ಪ ಹಳ್ಳಿಗೊಳ ಇದ್ದರು.
ಪೋಟೋ:13ಜಿಎಲ್ ಡಿ-3
ಗುಳೇದಗುಡ್ಡ ಪಟ್ಟಣದ ಕಾಡಸಿದ್ದೇಶ್ವರ ಮಠದಲ್ಲಿಮೌನಯೋಗಿ ಜಾತ್ರೆ ನಿಮಿತ್ತ ಜರುಗಿದ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಹೊಳೆ ಹುಚ್ಚೇಶ್ವರ ಶ್ರೀಗಳು ಉದ್ಘಾಟಿಸಿದರು.

