ಮಂಗಳೂರು: ಗೋವಾದ ಪಣಜಿಯಲ್ಲಿನಡೆದ ಕಾಮನ್ ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಶನ್ ಭಾರತ ವಲಯ-7 ಪ್ರಥಮ ಸಮ್ಮೇಳನದಲ್ಲಿಕರ್ನಾಟಕ ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಭಾಗವಹಿಸಿ, ಸಲಹೆ ನೀಡಿದರು.
ಬಳಿಕ ಸಮ್ಮೇಳನವನ್ನುದ್ದೇಶಿಸಿ ಸ್ಪೀಕರ್ ಮಾತನಾಡಿ, ಇಂದಿನ ಆಡಳಿತದಲ್ಲಿಕೃತಕ ಬುದ್ಧಿಮತ್ತೆ, ಡೇಟಾ ಆಧರಿತ ನಿರ್ಧಾರಗಳು ಮತ್ತು ಭವಿಷ್ಯಸೂಚಕ ವ್ಯವಸ್ಥೆಗಳು ಮಹತ್ವ ಪಡೆದುಕೊಳ್ಳುತ್ತಿವೆ. ಕೃಷಿ, ಆರೋಗ್ಯ, ಸಂಚಾರ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವ ನೀತಿಗಳನ್ನು ರೂಪಿಸುವುದು ಅಗತ್ಯವಿದೆ. ಭಾರತವು 2047ರೊಳಗೆ ಜಾಗತಿಕ ಮಾದರಿಗಳನ್ನು ಅನುಸರಿಸುವ ದೇಶವಲ್ಲ, ಹೊಸ ಮಾದರಿಗಳನ್ನು ಸೃಷ್ಟಿಸುವ ರಾಷ್ಟ್ರವಾಗಬೇಕು. ಇದಕ್ಕಾಗಿ ಶಾಸಕರು ವಯಸ್ಸಿನಲ್ಲಾಗಲಿ, ಚಿಂತನೆಗಳಲ್ಲಿಆಗಲಿ ಯುವ ಮನೋಭಾವದಿಂದ ನಾಯಕತ್ವ ವಹಿಸಬೇಕು ಎಂದರು.
ಎರಡು ದಿನಗಳ ಈ ಸಮ್ಮೇಳನದಲ್ಲಿ2047ರೊಳಗೆ ಅಭಿವೃದ್ಧಿಶೀಲ ಭಾರತ ನಿರ್ಮಾಣದಲ್ಲಿಯುವ ಶಾಸಕರ ಪಾತ್ರ ಮತ್ತು ವಲಯ - 7 ರಾಜ್ಯಗಳ ವ್ಯಾಪಾರ, ಪ್ರವಾಸೋದ್ಯಮ, ನಗರೀಕರಣ, ಪರಿಸರ ಹಾಗೂ ಕರಾವಳಿ ಸಂಪರ್ಕತೆ ಎಂಬ ಪ್ರಮುಖ ವಿಷಯಗಳ ಕುರಿತು ಚರ್ಚೆಗಳು ನಡೆಯಿತು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಗೋವಾ ರಾಜ್ಯಪಾಲ ಪುಸಪಾಟಿ ಅಶೋಕ್ ಗಜಪತಿ ರಾಜು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಮತ್ತಿತರ ಗಣ್ಯರು ಭಾಗವಹಿಸಿ,ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಫೋಟೋ :
13ಎ-ಯುಟಿ1, 13ಎ-ಯುಟಿ2, 13ಎ-ಯುಟಿ3, 13ಎ-ಯುಟಿ4

