ಆಸ್ತಿ ಮಾಲೀಕರಿಗೆ ರಿಯಾಯಿತಿ
ಗಂಗಾವತಿ: 2026-27 ನೇ ಸಾಲಿನ ಆಸ್ತಿ ತೆರಿಗೆಯನ್ನು ಏ.30ರವರೆಗೆ ಪಾವತಿಸುವ
ಮಾಲೀಕರಿಗೆ ಶೇ. 5ರಷ್ಟು ರಿಯಾಯಿತಿ ನೀಡಲಾಗುವುದು ಎಂದು ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ತಿಳಿಸಿದ್ದಾರೆ.
ಮೇ 1 ರಿಂದ ಜೂನ್ 30 ರವರೆಗೆ ರಿಯಾಯಿತಿ ಅಥವಾ ದಂಡ ಇರುವುದಿಲ್ಲ. ಜುಲೈ ನಂತರ ಪಾವತಿಸಿದ್ದಲ್ಲಿಪ್ರತಿ ತಿಂಗಳಿಗೆ ಶೇ2.ರಷ್ಟು ದಂಡ ವಿಧಿಸಲಾಗುವುದು. ಸಾರ್ವಜನಿಕರು ಆಸ್ತಿ ತೆರಿಗೆ , ನೀರಿನ ತೆರಿಗೆ, ಟ್ರೇಡ್ ಲೈಸೆನ್ಸ್ , ಪಿ ಮತ್ತು ಮಳಿಗೆ ಬಾಡಿಗೆಯನ್ನು ಸಕಾಲದಲ್ಲಿಪಾವತಿಸಬೇಕು. ತಪ್ಪಿದ್ದಲ್ಲಿನಿಯಮಾನುಸಾರ ಕ್ರಮ ಜರುಗಿಸಲಾಗುವುದು. ನಗರಸಭೆಯೊಂದಿಗೆ ಸರ್ವಜನಿಕರು ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

