ಜಾಗತಿಕ ಸ್ಪರ್ಧೆಗೆ ದ್ವಿಭಾಷಾ ಮಾಧ್ಯಮ ಸಹಕಾರಿ

Contributed bymandalamari84@gmail.com|Vijaya Karnataka

ಕುಷ್ಟಗಿ'ಯ ವಿದ್ಯಾನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗಾಗಿ ದ್ವಿಭಾಷಾ ಮಾಧ್ಯಮ ತರಬೇತಿ ಕಾರ್ಯಾಗಾರ ನಡೆಯಿತು. ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್‌ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಮಾತೃಭಾಷೆಯ ಜತೆಗೆ ಇಂಗ್ಲಿಷ್‌ ಅರಿವು ಅಗತ್ಯ ಎಂದರು. ಶಿಕ್ಷಕರು ಜಾಗತಿಕ ಭಾಷೆ ಕಲಿಸಲು ಸನ್ನದ್ಧರಾಗಬೇಕು ಎಂದು ತಿಳಿಸಿದರು. ಪಠ್ಯಪುಸ್ತಕಗಳು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮುದ್ರಣವಾಗಿದ್ದು, ಉತ್ತಮ ಸಿದ್ಧತೆಯೊಂದಿಗೆ ಬೋಧನೆ ಮಾಡಬೇಕು ಎಂದು ಹೇಳಿದರು.

bilingual education is initiated for global competitiveness

ಜಾಗತಿಕ ಸ್ಪರ್ಧೆಗೆ ದ್ವಿಭಾಷಾ ಮಾಧ್ಯಮ ಸಹಕಾರಿ

* ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್ ಹೇಧಿಳಿಧಿಕೆ

ವಿಕ ಸುದ್ದಿಲೋಕ ಕುಷ್ಟಗಿ

‘‘ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಮಾತೃಭಾಷೆಯ ಜತೆಗೆ ಜಾಗತಿಕ ಭಾಷೆ ಇಂಗ್ಲಿಷ್ ನ ಅರಿವು ಅಗತ್ಯ,’’ ಎಂದು ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್ ಹೇಳಿದರು.

ಪಟ್ಟಣದ ವಿದ್ಯಾನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ದ್ವಿಭಾಷಾ ಮಾಧ್ಯಮ ತರಬೇತಿ ಕಾರ್ಯಾಗಾರದಲ್ಲಿಮಾತನಾಡಿ, ‘‘ಶಿಕ್ಷಕರು ಮಾತೃಭಾಷೆಯ ಜತೆಗೆ ಜಾಗತಿಕ ಭಾಷೆ ಕಲಿಸಲು ಸನ್ನದ್ಧರಾಗಬೇಕು. ಭಾಷೆಯ ಮೂಲತತ್ತ$್ವ, ಕೌಶಲ ಕಲಿಸಬೇಕು,’’ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಮೆಣೇಧಾಳ ಮಾತನಾಡಿ, ‘‘ಪಠ್ಯಪುಸ್ತಕಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿಮುದ್ರಣವಾಗಿದ್ದು, ಉತ್ತಮ ಸಿದ್ಧತೆಯೊಂದಿಗೆ

ಬೋಧನೆ ಮಾಡಬೇಕು,’’ ಎಂದರು. ಬಿಆರ್ ಪಿ ಲೋಕೇಶ್ ಗೋಟೂರು, ಸಿಆರ್ ಪಿ ಚಂದಪ್ಪ, ಬಸವರಾಜ ಕುಂಬಳಾವತಿ, ಈರಪ್ಪ ಕಡಕಲ…, ಶರಣಪ್ಪ ಉಪ್ಪಾರ ತರಬೇತಿಯ ಸಂಪನ್ಮೂಲ ವ್ಯಕ್ತಿ ಡಾ.ಜೀವನಸಾಬ್ ವಾಲಿಕಾರ, ಅಮಿನುದ್ದೀನ್ ಮುಲ್ಲಾ, ರಾಜ ಮೊಹಮ್ಮದ್ ಕೋಳೂರು, ಅನ್ನಪೂರ್ಣ ಹಿರೇಮಠ ಇದ್ದರು.

---

10 ಕೆಎಸ್ ಟಿ ಪಿ05

ಕುಷ್ಟಗಿಯ ವಿದ್ಯಾನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಶಿಕ್ಷಕರಿಗೆ ಹಮ್ಮಿಕೊಂಡಿದ್ದ ದ್ವಿಭಾಷಾ ಮಾಧ್ಯಮ ತರಬೇತಿ ಕಾರ್ಯಾಗಾರದಲ್ಲಿಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್ ಮಾತನಾಡಿದರು.