ನಾಳೆ ‘ಕಣಿ ಕಾಣುವ ಹಬ್ಬ ’

Contributed bygangadhar.korekkana@gmail.com|Vijaya Karnataka

ನಾಳೆ ವಿಶ್ವದಾದ್ಯಂತ 'ವಿಷು' ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸುಖ, ಸಮೃದ್ಧಿಯ ಸಂಕೇತವಾಗಿದೆ. ಕೇರಳೀಯರು ಮತ್ತು ತುಳುನಾಡಿನವರು 'ಕಣಿ ಕಾಣುವ ಹಬ್ಬ' ಎಂದು ಇದನ್ನು ಆಚರಿಸುತ್ತಾರೆ. ವರ್ಷದ ಆರಂಭದಲ್ಲಿ ದೇವರ ದರ್ಶನ ಪಡೆಯುವ ಮೂಲಕ ಶುಭಾರಂಭ ಮಾಡಲಾಗುತ್ತದೆ. ವಿಶೇಷ ಅಲಂಕಾರ, ನವಧಾನ್ಯಗಳು, ಬಂಗಾರದ ಆಭರಣ, ಹಣ, ಹಣ್ಣುಗಳೊಂದಿಗೆ ಕಣಿ ಇಡಲಾಗುತ್ತದೆ. ನೂತನ ಬಟ್ಟೆ ಧರಿಸಿ, ಗುರುಹಿರಿಯರಿಗೆ ವಂದಿಸಿ ಕಣಿ ನೋಡಲಾಗುತ್ತದೆ. ಕೊನ್ನೆ ಹೂವು ವಿಷುವಿನ ಪ್ರಮುಖ ಸಂಕೇತವಾಗಿದೆ. ಆಭರಣ, ವಾಹನ ಖರೀದಿಗೂ ಇದು ಶುಭದಿನವಾಗಿದೆ.

kan kuva habba vishu festivals specialties and celebrations

ವಿಶ್ವಾದ್ಯಂತ ಸುಖ, ಸಮೃದ್ಧಿಯ ಸಂಕೇತವಾದ ವಿಷು ಹಬ್ಬ ಆಚರಣೆ

ಕೆ.ಗಂಗಾಧರ್ ಯಾದವ್ , ಕಾಸರಗೋಡು

ಜa್ಞಜadha್ಟ.kಟ್ಟಛಿkka್ಞaಃಠಿಜಿಞಛಿsಟ್ಛಜ್ಞಿdಜಿa.್ಚಟಞ

ವರ್ಷವಿಡೀ ಸುಖ,ಸಮೃದ್ಧಿ ನೆಲೆಸಲಿ ಎಂಬ ಸದಾಶಯದೊಂದಿಗೆ ಆಚರಿಸುವ ಐಶ್ವರ್ಯದ ಸಂಕೇತವಾಗಿದೆ ಕೇರಳೀಯರು ‘ವಿಷು’ ಹಬ್ಬ ಆಚರಿಸುತ್ತಾರೆ. ತುಳುನಾಡಿನಲ್ಲಿ ಇದನ್ನೇ ಬಿಸು ಪರ್ಬ ಎನ್ನುತ್ತಾರೆ. ಕಾಸರಗೋಡಿನಲ್ಲಿ ತುಳುನಾಡಿನ ಹಾಗೂ ಕೇರಳೀಯ ಸಂಸ್ಕೃತಿಯೂ ಸೇರಿಕೊಂಡಿರುವುದಕ್ಕೆಯೇ ವಿಷು ಹಬ್ಬಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ.‘ಕಣಿ ಕಾಣುವ ಹಬ್ಬ’ಎಂದೇ ವಿಷುವನ್ನು ಗುರುತಿಸಲಾಗುತ್ತಿದೆ.

ವರ್ಷದ ಆರಂಭದಲ್ಲಿ ಮೊದಲ ನೋಟದಲ್ಲಿ ಆರಾಧ್ಯ ದೇವರನ್ನು ನೋಡುವ ಕ್ರಮವೇ ಕಣಿ ಕಾಣುವಿಕೆಯಾಗಿದೆ. ಕೇರಳೀಯರು ಏ.15ರಂದು ವಿಷು ಹಬ್ಬವನು ್ನ ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ.

ವಿಷು ದಿನದಂದು ಕೇರಳೀಯರು ಮನೆಮನೆಗಳಲ್ಲಿ, ದೇವಳಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿಆಚರಿಸಿಕೊಳ್ಳುವ ಸಂಪ್ರದಾಯವಾಗಿದೆ. ಮೊಜಿನ ಆಟದೊಂದಿಗೆ, ವಿಶೇಷ ಔತಣದೊಂದಿಗೆ ಆಚರಿಸುವ ವಿಷು ಹಬ್ಬ, ಸೌರಮಾನ ಯುಗಾದಿ ಮೇಷ ಸಂಕ್ರಮಣದ ಮರುದಿನ ಹೊಸವರ್ಷ ಆರಂಭ. ಇದೇ ಸೌರಮಾನ ಯುಗಾದಿ ಅಥವಾ ವಿಷು ಆಗಿದೆ.

ವರ್ಷದ ಆರಂಭದಲ್ಲಿ ಮೇಲ್ನೋಟಕ್ಕೆ ಆರಾಧ್ಯ ದೇವರನ್ನು ನೋಡುವ ಕ್ರಮವನ್ನು ಕಣಿ ಕಾಣ ುವುದು ಎನ್ನಲಾಗುತ್ತಿದ್ದು, ಈ ಪದವನ್ನು ತುಳುವರು, ಮಲೆಯಾಳಿಗರು ಸಮಾನವಾಗಿ ಬಳಸುತ್ತಾರೆ. ಕಣಿ ಎಂದರೆ ಶ್ರೇಯಸ್ಸು, ಶಕುನ, ಭವಿಷ್ಯ ಎಂಬ ಅರ್ಥಗಳೂ ಇವೆ. ವಿಷು ಹಬ್ಬವನ್ನು ಮನೆಮನೆಗಳಲ್ಲಿ ಮತ್ತು ದೇವಾಲಯಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿಆಸ್ತಿಕರು ಆಚರಿಸಿಕೊಳ್ಳುತ್ತಾರೆ.

ಕಣಿ ಮನೆಯನ್ನು ಸಿಂಗರಿಸಿ, ಹಿಂದಿನ ರಾತ್ರಿಯೇ ದೇವರ ವಿಗ್ರಹದ ಜತೆಗೆ ಕಣಿಯ ಸಾಮಗ್ರಿಗಳನ್ನು ಇರಿಸಲಾಗುತ್ತದೆ. ನವಧಾನ್ಯಗಳು, ಬಟ್ಟೆಬರೆ, ಬಂಗಾರದ ಆಭರಣ, ಹಣ, ಫಲವಸ್ತುಗಳು ಇತ್ಯಾದಿಗಳೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಮತ್ತು ಕನ್ನಡಿ, ಕೊನ್ನೆ ಹೂ ಇರಿಸಲಾಗುತ್ತದೆ.

ಮುಂಜಾನೆಯೇ ಎದ್ದು, ಶುಚೀರ್ಭೂತರಾಗಿ ನೂತನ ಬಟ್ಟೆ ಧರಿಸಿ ಗುರುಹಿರಿಯರಿಗೆ ವಂದಿಸಿ ನಂತರ ದೇವರ ಮನೆಯ ಕಣಿ ಕಾಣುತ್ತಾರೆ. ಕೆಲವೆಡೆ ಹಾಸಿಗೆಯಿಂದ ಎದ್ದು ಕಣ್ಣು ಬಿಡುವುದೇ ಕಣಿಯ ಕಾಣುವಿಕೆಯೊಂದಿಗೆ ಎಂಬ ಸಂಕಲ್ಪವನ್ನು ಹೊಂದಿರುತ್ತಾರೆ. ಕಣಿ ಕಂಡ ತಕ್ಷಣ ಕನ್ನಡಿಯಲ್ಲಿತಮ್ಮ ಮುಖವನ್ನೇ ನೋಡಿಕೊಳ್ಳಬೇಕು ಎಂದೂ ಸಂಪ್ರದಾಯವಿದೆ. ಇದರಿಂದ ಆಯುರಾರೋಗ್ಯ, ಐಶ್ವರ್ಯಗಳ ಸಮೃದ್ಧಿಗಳೊಂದಿಗೆ ಇಡೀ ವರ್ಷ ಸಂತೋಷದಿಂದ ಇರುತ್ತಾರೆ ಎಂಬುದು ನಂಬಿಕೆ. ಎಲ್ಲಾದೇವಾಲಯಗಳಲ್ಲೂ, ದೈವಸ್ಥಾನ, ಭಜನಾ ಮಂದಿರಗಳಲ್ಲೂ ವಿಷು ಹಬ್ಬ ಆಚರಣೆ ನಡೆಯುತ್ತದೆ. ಕ್ಷೇತ್ರದಲ್ಲಿವಿಷು ಹಬ್ಬದ ಪ್ರಯುಕ್ತ ವಿಷು ಕಣಿ ಇರಿಸಿ ಕ್ಷೇತ್ರಕ್ಕೆ ಭೇಟಿ ನೀಡುವರು.

ಬಂಗಾರದ ಹೂವು ‘ಕೊನ್ನೆಹೂವು’

ಬಂಗಾರ ಹೂವು ವಿಷು ಹಬ್ಬದ ಸಂಕೇತವಾಗಿ ‘ಕೊನ್ನೆ ಹೂವು’ (ಕಕ್ಕೆ ಹೂವು)’ ಈ ಅವಧಿಧಿಯಲ್ಲಿಎಲ್ಲೆಡೆ ಅರಳಿ ನಿಂತಿರುತ್ತದೆ. ಆಗಸದಲ್ಲಿ ನಕ್ಷತ್ರಗಳು ಶೋಭಿಸುವಂತೆ ಹಸಿರು ಮರದ ತುಂಬೆಲ್ಲಬಂಗಾರದ ಹೂವುಗಳು ರಾರಾಜಿಸುತ್ತದೆ. ದೇವರಿಗೆ ಯಾವಾಗಲೂ ಸಮರ್ಪಣೆ ಮಾಡದೆ ಇರುವ ಈ ಕೊನ್ನೆ ಹೂವನ್ನು ವಿಷು ದಿನದಂದು ಸಮರ್ಪಿಸಲಾಗುತ್ತದೆ.

ಮಲೆಯಾಳದಲ್ಲಿ‘ಕಣಿಕೊನ್ನ’ ಎಂದು ಕರೆಯುವ ಕಕ್ಕೆ ಹೂ ದೊಡ್ಡ ಐತಿಹ್ಯವನ್ನು ಹೊಂದಿದೆ. ಭೂಮಿಗೆ ಆಗಮಿಸಿದ ಐಶ್ವರ್ಯ ದೇವತೆಯಾದ ಲಕ್ಷ್ಮೀದೇವಿ ಮೀನಾ ಮಾಸದ ಬಿಸಿಲಿನ ಕಾಠಿಣ್ಯದಲ್ಲಿದಣಿದು ಒಂದು ಮರದ ನೆರಳಲ್ಲಿಕುಳಿತುಕೊಂಡು, ವಿಶ್ರಾಂತಿ ಪಡೆದುಕೊಂಡಿದ್ದಳು. ತನಗೆ ವಿಶ್ರಾಂತಿಗಾಗಿ ನೆರಳು ನೀಡಿದ ಮರವನ್ನು ದೇವಿ ಮುಟ್ಟಿದಾಗ ತಕ್ಷಣ ಹೂಗಳು ಆರಳಿರುವುದಾಗಿ ಅದರಂತೆ ಕಡು ಬಿಸಲಲ್ಲೂಕಕ್ಕೆ ಹೂ ಬಿಟ್ಟು ಸುಂದರವಾಗಿರುವುದು ಎಂಬುದು ಐತಿಹ್ಯ. ಮೀನಾ ಮಾಸದ ಬಿಸಿಲಿನ ಕಾಠಿಣ್ಯದಲ್ಲಿದಣಿದು ಒಂದು ಮರದ ನೆರಳಲ್ಲಿಕುಳಿತುಕೊಂಡು, ವಿಶ್ರಾಂತಿ ಪಡೆದುಕೊಂಡಿದ್ದಳು. ತನಗೆ ವಿಶ್ರಾಂತಿಗಾಗಿ ನೆರಳು ನೀಡಿದ ಮರವನ್ನು ದೇವಿ ಮುಟ್ಟಿದಾಗ ತಕ್ಷಣ ಹೂಗಳು ಆರಳಿರುವುದಾಗಿ ಅದರಂತೆ ಕಡು ಬಿಸಲಲ್ಲೂಕೊನ್ನೆ ಹೂ ಬಿಟ್ಟು ಸುಂದರವಾಗಿರುವುದು ಎಂಬುದು ಐತಿಹ್ಯ.

ಆಭರಣ, ವಾಹನ ಖರೀದಿಗೂ ಆದ್ಯತೆ

ಮಲೆಯಾಳಿಗಳು ವಿಷು ಎಲ್ಲದಕ್ಕೂ ಶುಭ ಎಂಬ ಹಿನ್ನೆಲೆಯನ್ನು ಇಟ್ಟುಕೊಂಡು ಆಭರಣ ಖರೀದಿ ನಡೆಸುತ್ತಾರೆ.ವಿಷು ದಿನದಂದು ಸಣ್ಣ ಮಕ್ಕಳಿಗೆ ಕಿವಿ ಚುಚ್ಚುವುದು ಸಹ ಸಂಪ್ರದಾಯವಾಗಿದೆ. ನೂತನವಾಗಿ ಆಭರಣ ಖರೀದಿಸುವರು ಹಾಗೂ ಕಾರು ಸಹಿತ ವಾಹನ ಖರೀದಿಸುವರು ವಿಷು ದಿನಕ್ಕಾಗಿ ಕಾಯುತ್ತಾರೆ.ಅಂದೇ ಖರೀದಿಸುವ ಮೂಲಕ ಹೊಸತನವನ್ನು ಮೆರೆಯುತ್ತಾರೆ.

ಚಿತ್ರ:13ಕೆಎಸ್ ಕೊನ್ನೆ- ಕೊನ್ನೆ ಹೂ