ವಿಕ ಸುದ್ದಿಲೋಕ ಚಿಂತಾಮಣಿ
ಕಂದಾಯ ಗ್ರಾಮ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ1.4 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ಚಿಂತಾಮಣಿ ತಾಲೂಕಿನ ಕೋಟಗಲ್ ಗ್ರಾಮದಲ್ಲಿಜಿಲ್ಲಾಡಳಿತ ಆಯೋಜಿಸಿದ್ದ ‘ವಿಶೇಷ ಕಂದಾಯ ಉಪಗ್ರಾಮಗಳ ರಚನೆ ಅಭಿಯಾನ’ಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಸರಕಾರ ಬಂದ ಮೇಲೆ ಕಂದಾಯ ಇಲಾಖೆಯಲ್ಲಿಮಹತ್ತರ ಯೋಜನೆಗಳು ಜಾರಿಗೆ ಬಂದಿವೆ. ಈ ಪೈಕಿ ವಿಶೇಷ ಕಂದಾಯ ಗ್ರಾಮ ಅಭಿಯಾನ 2.0 ಯೋಜನೆಯಡಿ ಸರಕಾರಿ ಅಥವಾ ಖಾಸಗಿ ಜಾಗದಲ್ಲಿನಿರ್ಮಿಸಿರುವ ಅನಧಿಕೃತ ಮನೆಗಳನ್ನು ಗುರುತಿಸಿ ಕಾಯಂ ಮಾಲೀಕತ್ವದ ಕಂದಾಯ ದಾಖಲೆಗಳನ್ನು ವಿತರಿಸುವ ಭಾಗವಾಗಿ ಈಗಾಗಲೇ 1.4 ಲಕ್ಷ ಮನೆಗಳನ್ನು ಗುರುತಿಸಲಾಗಿದೆ. ಈ 1.4 ಲಕ್ಷ ಮನೆಗಳ ಅಳತೆ ಕಾರ್ಯ ಹಾಗೂ ದುರಸ್ತಿ ಮಾಡಿ ನಿಯಮಾವಳಿ ರೀತಿ ಎಲ್ಲಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅರ್ಹರೆಲ್ಲರಿಗೂ ಹಕ್ಕುಪತ್ರಗಳನ್ನು ನೀಡಲು ಜಿಲ್ಲಾಡಳಿತ ಮುಂದಾಗಿದೆ ಎಂದರು.
ಇದರ ಭಾಗವಾಗಿ ಅಳತೆ ಕಾರ್ಯಕ್ಕೆ ಕೋಟಗಲ್ ನಿಂದ ಚಾಲನೆ ನೀಡಲಾಗಿದೆ. ಈ ಅಭಿಯಾನದಡಿ ಗುರುತಿಸಿರುವ ಮನೆಗಳ ಪೈಕಿ ಯಾವುದೇ ನ್ಯಾಯಾಲಯಗಳಲ್ಲಿಪ್ರಕರಣ ದಾಖಲಾಗಿರುವ ಆಸ್ತಿಗಳನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಹಕ್ಕುಪತ್ರ ವಿತರಿಸಲು ಜಿಲ್ಲಾಡಳಿತ ಯೋಜಿಸಿದೆ. ಇಷ್ಟು ಬೃಹತ್ ಮಟ್ಟದಲ್ಲಿಹಕ್ಕುಪತ್ರಗಳನ್ನು ನೀಡುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಕರೆಸಿ ಮಾಡಲಾಗುವುದು. ಚಿಂತಾಮಣಿ ತಾಲೂಕಿನಲ್ಲೇ 15,202 ಹಕ್ಕುಪತ್ರಗಳನ್ನು ವಿತರಿಸುವ ಗುರಿ ಇದೆ ಎಂದು ಮಾಹಿತಿ ನೀಡಿದರು.
ಭೂ ಸುರಕ್ಷ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪೈಲಟ್ ಯೋಜನೆಯಾಗಿ ತೆಗೆದುಕೊಳ್ಳಲಾಗಿತ್ತು. ಈ ಯೋಜನೆಯಡಿ 3.5 ಲಕ್ಷ ಪುಟಗಳ ದಾಖಲೆಗಳನ್ನು ಸ್ಕ್ಯಾ ನ್ ಮಾಡುವ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಗುಡಿಬಂಡೆ, ಗೌರಿಬಿದನೂರು ತಾಲೂಕುಗಳ ಸ್ಕ್ಯಾ ನಿಂಗ್ ಕಾರ್ಯ ಪೂರ್ಣಗೊಂಡಿದೆ. ಉಳಿದ ತಾಲೂಕುಗಳ ಸ್ಕ್ಯಾ ನಿಂಗ್ ಕಾರ್ಯ ಇನ್ನೆರಡು ತಿಂಗಳಲ್ಲಿಪೂರ್ಣ ಆಗಲಿದೆ. ಈಗಾಗಲೇ ಈ ಯೋಜನೆಯಡಿ 2 ಲಕ್ಷ ಪುಟಗಳ ದಾಖಲೆಗಳನ್ನು ಸಾರ್ವಜನಿಕರು ಆನ್ ಲೈನ್ ಮೂಲಕ ಪಡೆದಿರುವುದು ವಿಶೇಷ ಎಂದು ತಿಳಿಸಿದರು.
ಪೌತಿ ಖಾತೆ ಆಂದೋಲನ ಜಿಲ್ಲೆಯಲ್ಲಿಕಳೆದ 3 ತಿಂಗಳಿಂದ ವೇಗ ಪಡೆದುಕೊಂಡಿದೆ. 1.5 ಲಕ್ಷ ಪೌತಿ ಖಾತೆಗಳನ್ನು ಮಾಡಲು ಗುರಿ ಹೊಂದಲಾಗಿದೆ. ಈಗಾಗಲೇ 17,385 ಪೌತಿ ಖಾತೆಗಳನ್ನು ಇತ್ತೀಚಿಗೆ ಮಾಡಲಾಗಿದೆ. ಮುಂದಿನ 8 ತಿಂಗಳಲ್ಲಿಎಲ್ಲಪೌತಿ ಖಾತೆಗಳು ಪೂರ್ಣಗೊಳ್ಳುವ ಭರವಸೆ ಇದೆ. ಭೂ ಮಂಜೂರಾತಿ ಯೋಜನೆಯಡಿ 57,53,59 ರಡಿ 30 ಸಾವಿರ ಅರ್ಜಿಗಳ ವಿಲೇವಾರಿ ಗುರಿ ಇದ್ದು, ಈಗಾಗಲೇ 4 ಸಾವಿರ ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಉಳಿದ 24 ಸಾವಿರ ಅರ್ಜಿಗಳನ್ನು ಕಾಲಮಿತಿಯಲ್ಲಿವಿಲೇವಾರಿ ಮಾಡಲು ಜಿಲ್ಲಾಡಳಿತ ಯೋಜಿಸಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ. ಪ್ರಭು ಮಾತನಾಡಿ, ಮುಂದಿನ 10 ತಿಂಗಳಲ್ಲಿ1700 ಕಂದಾಯ ಗ್ರಾಮಗಳನ್ನು ರಚನೆ ಮಾಡಲಾಗುವುದು. ಆ ಮೂಲಕ ಭೂದಾಖಲೆಗಳನ್ನು ನೀಡುವ ನಿಟ್ಟಿನಲ್ಲಿಇಂದಿನಿಂದ ಕೋಟಗಲ್ ಗ್ರಾಮದಿಂದ ಅಳತೆ ಕಾರ್ಯಕ್ಕೆ ಚಾಲನೆ ದೊರೆತಿದೆ. ಕಂದಾಯ ಗ್ರಾಮ ಅಭಿಯಾನದಡಿ ಈಗಾಗಲೇ ಗುರುತಿಸಿರುವ 1.4 ಲಕ್ಷ ಮನೆಗಳಿಗೂ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ. ಈ ಕಾರ್ಯಕ್ರಮ ಜಿಲ್ಲೆಯ ಪಾಲಿಗೆ ಐತಿಹಾಸಿಕ ಯೋಜನೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿಉಪವಿಭಾಗಾಧಿಕಾರಿ ಡಿ.ಹೆಚ್ . ಅಶ್ವಿನ್ , ಭೂ ದಾಖಲೆಗಳ ಉಪನಿರ್ದೇಶಕ ಮಂಜುನಾಥ ತವಣೆ, ಚಿಂತಾಮಣಿ ತಹಸೀಲ್ದಾರ್ ಕೆ. ಸುದರ್ಶನ್ ಯಾದವ್ , ಚಿಂತಾಮಣಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮುನಿನಾರಾಯಣಪ್ಪ, ಜಿಲ್ಲಾಪ್ರಾಧಿಕಾರದ ಉಪಾಧ್ಯಕ್ಷ ಸ್ಕೂಲ್ ಸುಬ್ಬಾರೆಡ್ಡಿ, ಚಿಂತಾಮಣಿ ಆರಕ್ಷಕ ಉಪಾಧೀಕ್ಷಕ ಮುರಳೀಧರ್ , ತಾಪಂ ಇಒ ಆನಂದ್ ಸೇರಿದಂತೆ ಕೋಟಗಲ್ ಗ್ರಾಮಸ್ಥರು ಹಾಜರಿದ್ದರು.
13 ಸಿಬಿಪಿಪೋಟೋ 4 ಮತ್ತು 5
ಚಿಂತಾಮಣಿ ತಾಲೂಕಿನ ಕೋಟಗಲ್ ಗ್ರಾಮದಲ್ಲಿ‘ವಿಶೇಷ ಕಂದಾಯ ಉಪ ಗ್ರಾಮಗಳ ರಚನೆ ಅಭಿಯಾನ’ಕ್ಕೆ ಜಿಲ್ಲಾಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ , ಜಿಲ್ಲಾಧಿಕಾರಿ ಜಿ. ಪ್ರಭು ಚಾಲನೆ ನೀಡಿ ಮಾತನಾಡಿದರು.

