ಬೆಳಗಾವಿ: ನಗರದಲ್ಲಿಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಫೋರ್ಟ್ ರಸ್ತೆಯಲ್ಲಿಏಕಮುಖ (ಓನ್ ವೇ) ಸಂಚಾರಕ್ಕೆ ಅನುಮತಿ ನೀಡಿ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಆದೇಶ ಹೊರಡಿಸಿದ್ದಾರೆ. ಫೋರ್ಟ್ ರಸ್ತೆಯ ಎರಡೂ ಬದಿಗಳಲಿ ್ಲಹೆಚ್ಚಿನ ಸಂಖ್ಯೆಯ ಅಂಗಡಿಗಳಿದ್ದು, ಈ ರಸ್ತೆಗಳಲಿ ್ಲಹೆಚ್ಚಿನ ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟ ಇರುತ್ತದೆ. ಈ ಸಂಬಂಧ ಸ್ಥಳೀಯ ವರ್ತಕರ ಸಭೆ ನಡೆಸಿ, ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇಶಪಾಂಡೆ ಪೆಟ್ರೋಲ್ ಪಂಪ್ ನಿಂದ ಮುಜಾವರ ಖೂಟ ಕಡೆಗೆ(ಪಶ್ಚಿಮದಿಂದ ಪೂರ್ವಕ್ಕೆ) ಸಂಚರಿಸಲು ಹಾಗೂ ಜೀಜಾಮಾತಾ ಸರ್ಕಲ್ ನಿಂದ ದೇಶಪಾಂಡೆ ಪೆಟ್ರೋಲ್ ಪಂಪ್ ಕಡೆಗೆ (ಪೂರ್ವದಿಂದ ಪಶ್ಚಿಮಕ್ಕೆ) ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಮಾರ್ಗದಲ್ಲಿಸಂಚರಿಸುವ ಸಾರ್ವಜನಿಕರು ಸಂಚಾರ ನಿಯಮ ಪಾಲನೆ ಮಾಡಬೇಕು ಎಂದು ಆಯುಕ್ತರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

