ಆರ್ ಸಿಬಿಗೆ ಸಾಟಿಯಾಗದ ಎಂಐ

Contributed bymanjunath.gowda@timesgroup.com|Vijaya Karnataka

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬಯಿ ಇಂಡಿಯನ್ಸ್ ವಿರುದ್ಧ 18 ರನ್‌ಗಳ ಗೆಲುವು ದಾಖಲಿಸಿತು. ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಅರ್ಧಶತಕ ಸಿಡಿಸಿದರು. ಮುಂಬಯಿ ತಂಡದ ರಿಕೆಲ್ಟನ್, ರೋಹಿತ್ ಉತ್ತಮ ಆರಂಭ ನೀಡಿದರು. ಹಾರ್ದಿಕ್ ಪಾಂಡ್ಯ, ರುದರ್‌ಫೋರ್ಡ್ ಹೋರಾಟ ನಡೆಸಿದರು. ಆದರೆ ಗೆಲುವು ಆರ್‌ಸಿಬಿಗೆ ಒಲಿಯಿತು.

rcbs victory against resilient mi

ಸಾಲ್ಟ್ , ಕೊಹ್ಲಿ, ರಜತ್ ಅರ್ಧಶತಕದ ಮಿಂಚು: ಬೆಂಗಳೂರು ತಂಡಕ್ಕೆ 18 ರನ್ ವಿಜಯ

ವಾಂಖೆಡೆ: ಫಿಲಿಪ್ ಸಾಲ್ಟ್ (78; 36 ಎಸೆತ), ವಿರಾಟ್ ಕೊಹ್ಲಿ(50; 38 ಎಸೆತ) ಮತ್ತು ರಜತ್ ಪಾಟೀದಾರ್ (53; 20 ಎಸೆತ) ಬಿರುಸಿನ ಅರ್ಧ ಶತಕ ಸಿಡಿಸಿದರು. ಬೌಲರ್ ಗಳು ಸಂಘಟಿತ ಹೋರಾಟ ತೋರಿದರು. ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 20ನೇ ಪಂದ್ಯದಲ್ಲಿಮುಂಬಯಿ ಇಂಡಿಯನ್ಸ್ ವಿರುದ್ಧ 18 ರನ್ ಗಳ ವಿಜಯೋತ್ಸವ ಆಚರಿಸಿತು.

241 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ ಮುಂಬಯಿ, ರಿಕೆಲ್ಟನ್ ಮತ್ತು ರೋಹಿತ್ ಅವರಿಂದ ಉತ್ತಮ ಆರಂಭ ಪಡೆಯಿತು. ಆದರೆ ಗಾಯದಿಂದಾಗಿ ರೋಹಿತ್ (19) ರಿಟರ್ಡ್ ಹರ್ಟ್ ಆಗಿದ್ದು ತಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಮಧ್ಯಮ ಕ್ರಮಾಂಕದಲ್ಲಿಹಾರ್ದಿಕ್ ಪಾಂಡ್ಯ(40; 22 ಎಸೆತ) ಮತ್ತು ರುಧರ್ ಫೋರ್ಡ್ (71*; 31 ಎಸೆತ, 1ಫೋರ್ , 9 ಸಿಕ್ಸರ್ ) ಕೆಚ್ಚೆದೆಯ ಹೋರಾಟ ತೋರಿದರು. ಆದರೆ ಇದು ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.