ಅಮೆರಿಕದಲ್ಲಿಗುಂಡಿನ ದಾಳಿಗೆ 8 ಮಕ್ಕಳು ಬಲಿ

Contributed byBeeralinge gowda|Vijaya Karnataka

ಅಮೆರಿಕದ ಲೂಸಿಯಾನದಲ್ಲಿ ಭಾನುವಾರ ನಡೆದ ದುರಂತದಲ್ಲಿ 1 ರಿಂದ 14 ವರ್ಷದ 8 ಮಕ್ಕಳು ಗುಂಡಿಗೆ ಬಲಿಯಾಗಿದ್ದಾರೆ. ನೆರೆ ಮನೆಯ ಮಕ್ಕಳ ಮೇಲೆ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ. ಕಳ್ಳತನ ಮಾಡಿದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಹೊಡೆದು ಕೊಂದಿದ್ದಾರೆ. ಘಟನೆಗೆ ಕೌಟುಂಬಿಕ ಕಲಹ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.

mass shooting in america 8 children killed police involved

ಲೂಸಿಯಾನ: ಅಮೆರಿಕದ ಲೂಸಿಯಾನದಲ್ಲಿಭಾನುವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ1 ರಿಂದ 14 ವರ್ಷ ವಯೋಮಾನದ 8 ಮಕ್ಕಳು ಸಾವಿಗೀಡಾಗಿದ್ದಾರೆ.

ಬಂದೂಕುಧಾರಿ ವ್ಯಕ್ತಿಯೊಬ್ಬ ಭಾನುವಾರ ಬೆಳಗ್ಗೆ ವಿವಿಧ ಮನೆಗಳ ಅಂಗಳದಲ್ಲಿಆಟವಾಡುತ್ತಿದ್ದ ಮಕ್ಕಳ ಮೇಲೆ ಯದ್ವತದ್ವ ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿ ಬಳಿಕ ಕಳ್ಳತನ ಮಾಡಿದ ಕಾರೊಂದರಲ್ಲಿಪರಾರಿಯಾಗಲೆತ್ನಿಸಿದ್ದಾನೆ. ಆಗಂತುಕ ವ್ಯಕ್ತಿಯನ್ನು ಬೆನ್ನತ್ತಿದ ಪೊಲೀಸರ ಗುಂಡಿಕ್ಕಿ ಕೊಂದಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿನೆರೆ ಮನೆಯ ಮಕ್ಕಳ ಮೇಲೆ ಬಂದೂಕುಧಾರಿ ಗುಂಡಿನ ದಾಳಿ ನಡೆಸಿದ್ದಾನೆ. 10 ಮಂದಿ ಗುಂಡಿನ ದಾಳಿಗೆ ತುತ್ತಾಗಿದ್ದಾರೆ. 8 ಮಕ್ಕಳು ಮೃತಪಟ್ಟಿದ್ದಾರೆ. ದಾಳಿಯಲ್ಲಿಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಮಕ್ಕಳು ಆರೋಪಿಯ ಸಹ ಸಂಬಂಧಿಕರಾಗಿದ್ದರು,’’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.