ಜಾಹಿರಾತು
ಗ್ರಾಮೀಣ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಶ್ರೀ ಬಸವೇಶ್ವರ ಮಹಿಳಾ ಕಾಲೇಜು ಆಸರೆ
((ಪಿಯು ಟಾಪರ್ ಗಳಿಗೆ ಉಚಿತ ಪ್ರವೇಶ | ವಿಶ್ವವಿದ್ಯಾಲಯದ ಮಟ್ಟದಲ್ಲಿರಾರ ಯಂಕ್ ಪಡೆದು ಸಾಧನೆ | ದಾಖಲಾತಿ ಆರಂಭ))
ಹೊಸಪಾಳ್ಯ ಎಸ್ ವಿಜಯಕುಮಾರ್ ನೆಲಮಂಗಲ
ಗ್ರಾಮೀಣ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣದ ಕನಸು ನನಸು ಮಾಡಿದ ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜು ಇಂದಿಗೂ ಬೆಂಗಳೂರು ವಿಶ್ವವಿದ್ಯಾಲಯದ ಮಟ್ಟದಲ್ಲಿವಿಶೇಷ ಸಾಧನೆ ಮಾಡಿದ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಗ್ರಾಮೀಣ ಭಾಗದ 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಪಠ್ಯ ಶಿಕ್ಷಣದ ಜತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಜತೆ ಸ್ಪರ್ಧಾತ್ಮಕ ಯುಗದ ಪರಿಚಯ ಮಾಡಿ, ಹೊಸದಾಖಲೆ ಸೃಷ್ಟಿಸಿದೆ. ಪ್ರತಿ ವರ್ಷ ವಿಶ್ವವಿದ್ಯಾಲಯದ ಮಟ್ಟದಲ್ಲಿವಿದ್ಯಾರ್ಥಿನಿಯರು ರಾರ ಯಂಕ್ ಪಡೆಯುತ್ತಿರುವುದು ಗುಣಮಟ್ಟ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ನೂರಾರು ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಲ್ಲಿಉದ್ಯೋಗ ಪಡೆದುಕೊಂಡಿದ್ದಾರೆ.
ಕೋರ್ಸ್ ಗಳು:
* ಬಿ.ಕಾಂ, ಬಿಎ, ಬಿ.ಎಸ್ಸಿ, ಬಿಸಿಎ, ಎಂ.ಕಾಂ
ವಿಶೇಷ ಸೌಲಭ್ಯ
* ಸಿಎ-ಸಿಪಿಟಿ ಮತ್ತು ಸಿಎಸ್ , ಸಿಎಂಎ ಕೋಚಿಂಗ್ ನೊಂದಿಗೆ ಬಿ.ಕಾಂ
* ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗಸೂಚಿ ಕಾರ್ಯಕ್ರಮ
* ಕ್ಯಾಂಪಸ್ ಆಯ್ಕೆ, ಉದ್ಯೋಗ ಮೇಳ
* ಸ್ವಯಂ ಉದ್ಯೋಗ ತರಬೇತಿ
* ಕೌಶಲಾಭಿವೃದ್ಧಿ
* ಅನುಭವಿ ಶಿಕ್ಷಕ ವರ್ಗ
* ಅತ್ಯುತ್ತಮ ಮೂಲಸೌಕರ್ಯ
ಪ್ರಮುಖಾಂಶ
* 2026-27ನೇ ಸಾಲಿನ ದಾಖಲಾತಿ ಪ್ರಾರಂಭ
* ಕಾಲೇಜು ಟಾಪರ್ ಗಳಿಗೆ ಉಚಿತ ಶಿಕ್ಷಣ
* ಎಂ.ಕಾಂ ಮಾಡುವವರಿಗೆ ಸುವರ್ಣಾವಕಾಶ
ಬಾಕ್ಸ್ 1
ನಮ್ಮ ಕಾಲೇಜು ಜ್ಞಾನದ ದೇಗುಲ. ಪಠ್ಯಕ್ರಮದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ವೃತ್ತಿಪರ ತರಬೇತಿ, ಉದ್ಯೋಗ ಮೇಳಗಳನ್ನೂ ಸಹ ಪ್ರತಿ ವರ್ಷ ಆಯೋಜಿಸಲಾಗುತ್ತದೆ. ಅಂತರ್ ಕಾಲೇಜು ಸ್ಪರ್ಧೆಗಳಲ್ಲಿಭಾಗವಹಿಸಿ ಹೆಚ್ಚು ಪ್ರಶಸ್ತಿಗಳನ್ನು ಪಡೆಯಲು ಸಹಾಯಕವಾಗಿದೆ. ಪರಮ ಪೂಜ್ಯರು, ಉಪನ್ಯಾಸಕರು ಮತ್ತು ಪೋಷಕರ ಸಹಕಾರ, ಮಾರ್ಗದರ್ಶನ ನನ್ನ ಸಾಧನೆಗೆ ಶಕ್ತಿಯಾಗಿದೆ. ನನ್ನ ಸಂಸ್ಥೆ ನನ್ನ ಹೆಮ್ಮೆ.
- ನವ್ಯಶ್ರೀ ಎಂ.ಎನ್ , ವಿದ್ಯಾರ್ಥಿನಿ
ಪೋಟೋ1 : ನವ್ಯ ಶ್ರೀ ಎಂ.ಎನ್
ಬಾಕ್ಸ್ 2
ಗ್ರಾಮೀಣ ಭಾಗದ ಎಷ್ಟೋ ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜು ಆಸರೆಯಾಗಿದೆ. ಉತ್ತಮ ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡುವುದರ ಮೂಲಕ ಹೆಣ್ಣು ಮಕ್ಕಳಿಗೆ ಭವಿಷ್ಯದಲ್ಲಿಉತ್ತಮ ಸ್ಥಾನ ಸಿಗುವಂತೆ ಮಾಡುವ ಸಂಸ್ಥೆ ನಮ್ಮದಾಗಿದೆ. ನೆಲಮಂಗಲ ತಾಲೂಕಿನ ಅತ್ಯುತ್ತಮ ಕಾಲೇಜಿನಲ್ಲಿಒಂದಾಗಿದೆ.
- ಮೇಘನಾ.ಎಂ ದ್ವಿತೀಯ (ಬಿ.ಎ)
ಪೋಟೋ2 : ಮೇಘನಾ. ಎಮ್ ದ್ವಿತೀಯ (ಬಿ.ಎ)
ಬಾಕ್ಸ್ 3
ನೆಲಮಂಗಲದಲ್ಲಿ ಪ್ರಸಿದ್ಧವಾದಂತಹ ನಮ್ಮ ಕಾಲೇಜು ಬೋಧನೆಯ ಜತೆಗೆ ಜೀವನದ ಮೌಲ್ಯ, ಶೈಕ್ಷಣಿಕ ಹಾಗೂ ನೈತಿಕ ಮೌಲ್ಯಗಳನ್ನು ಕಲಿಸುತ್ತಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಇದು ಪೂರಕವಾಗಿದೆ. ಒಂದು ಕಡೆ ಸ್ವಾಮೀಜಿ ಅವರ ಹಿತನುಡಿ ಹಾಗೂ ಇನ್ನೊಂದು ಕಡೆ ಶಿಕ್ಷಕರ ಮಾರ್ಗದರ್ಶನವನ್ನು ಪಡೆದ ನಾವೇ ಧನ್ಯರು.
- ಕನಕಲಕ್ಷ್ಮಿ.ಎನ್ ಪಿ ದ್ವಿತೀಯ (ಬಿಎ)
ಪೋಟೋ3 : ಕನಕಲಕ್ಷ್ಮಿ. ಎನ್ ಪಿ ದ್ವಿತೀಯ
ಬಾಕ್ಸ್ 4
ನನ್ನ ಕಾಲೇಜು ಜ್ಞಾನದ ದೇಗುಲವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿನ ಉಪನ್ಯಾಸಕರು ಅತ್ಯಂತ ಅನುಭವಿಗಳಾಗಿದ್ದು, ಪ್ರೀತಿಯಿಂದ ಪಾಠ ಮಾಡುತ್ತಾರೆ. ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಿಗೆ ನನ್ನ ಕಾಲೇಜಿನಲ್ಲಿಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಶಿಸ್ತು, ಜ್ಞಾನ ಮತ್ತು ಸಂಸ್ಕಾರವನ್ನು ಕಲಿಸುವ ನಮ್ಮ ಕಾಲೇಜಿನ ಬಗ್ಗೆ ನನಗೆ ಹೆಮ್ಮೆ ಇದೆ.
- ಮೋಹನ ಪ್ರಿಯಾ, ಬಿಎ ಅಂತಿಮ ವರ್ಷ
ಪೋಟೋ4 : ಮೋಹನಾ ಪ್ರಿಯಾ
ಬಾಕ್ಸ್ 5
ಕಾಲೇಜಿನ ತರಗತಿ ಕೊಠಡಿಗಳು ಸುಸಜ್ಜಿತವಾಗಿದ್ದು, ಕಲಿಕೆಗೆ ಅನುಕೂಲಕರವಾದ ವಾತಾವರಣವನ್ನು ಒದಗಿಸುತ್ತವೆ. ಗ್ರಂಥಾಲಯ ವಿದ್ಯಾರ್ಥಿನಿಯರ ಜ್ಞಾನ ವೃದ್ಧಿಗೆ ಬಹಳ ಸಹಾಯಕವಾಗಿದೆ. ಕಾಲೇಜಿನ ವಾತಾವರಣವು ತುಂಬಾ ಶಾಂತ ಮತ್ತು ಪ್ರೇರಣಾದಾಯಕವಾಗಿದ್ದು, ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಅನುಕೂಲಕರವಾಗಿದೆ. ಕಡಿಮೆ ಶುಲ್ಕದಲ್ಲಿಉತ್ತಮ ಗುಣಮಟ್ಟದ ಹಾಗೂ ಸಮರ್ಪಕ ಶಿಕ್ಷಣವನ್ನು ನೀಡುತ್ತಿರುವುದು ಈ ಕಾಲೇಜಿನ ಪ್ರಮುಖ ವೈಶಿಷ್ಟ್ಯವಾಗಿದೆ.
- ನಿಖಿತ ಎಚ್ .ಆರ್ , ತೃತೀಯ ಬಿಎ
ಪೋಟೋ5 : ನಿಖಿತ ಎಚ್ .ಆರ್ ತೃತೀಯ ಬಿಎ
ಬಾಕ್ಸ್ 6
ನಾನು ಬಿಸಿಎ ವಿಭಾಗದಲ್ಲಿಶೇ.90ರಷ್ಟು ಅಂಕ ಪಡೆದಿದ್ದೇನೆ. ನಮ್ಮ ಕಾಲೇಜಿನ ಉತ್ತಮ ಶೈಕ್ಷಣಿಕ ವಾತಾವರಣ ಮತ್ತು ಶಿಕ್ಷಕರ ಮಾರ್ಗದರ್ಶನ ನನ್ನ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಇಲ್ಲಿದೊರೆಯುವ ಪ್ರೋತ್ಸಾಹ ಮತ್ತು ಸೌಲಭ್ಯಗಳಿಂದ ನಾನು ನನ್ನ ಗುರಿಯನ್ನು ಸಾಧಿಸಲು ಸಾಧ್ಯವಾಯಿತು. ಈಗ ನಾನು ಉನ್ನತ ಶಿಕ್ಷಣವನ್ನು ಮುಂದುವರಿಸುತ್ತಿದ್ದು, ನಮ್ಮ ಕಾಲೇಜು ನನ್ನ ಭವಿಷ್ಯಕ್ಕೆ ಬಲವಾದ ಅಡಿಪಾಯವಾಗಿದೆ.
-ಧಿ ಬಿಂದು, ಪದವಿ ಪಡೆದ ವಿದ್ಯಾರ್ಥಿನಿ
ಪೋಟೋ6 : ಬಿಂದು ಪೋಟೋ
ಬಾಕ್ಸ್ 7
ನಾನು ಬಿಸಿಎ 4ನೇ ಸೆಮಿಸ್ಟರ್ ತನಕ ಸುಮಾರು ಶೇ.90ರಷ್ಟು ಅಂಕಗಳನ್ನು ಗಳಿಸಿದ್ದೇನೆ. ಉಪನ್ಯಾಸಕರ ಉತ್ತಮ ಬೋಧನೆ ಮತ್ತು ಮಾರ್ಗದರ್ಶನ ನನ್ನ ಸಾಧನೆಗೆ ಕಾರಣ. ಕಾಲೇಜಿನ ಸಕಾರಾತ್ಮಕ ಮತ್ತು ಶಿಸ್ತುಬದ್ಧ ವಾತಾವರಣ ನನಗೆ ಹೆಚ್ಚು ಗಮನ ನೀಡಿ ಕಲಿಯಲು ಸಹಾಯವಾಗಿದೆ.
ಧಿ ಶೋಭಾ ಎಚ್ ಜಿ, ಬಿಸಿಎ ತೃತೀಯ ವರ್ಷದ ವಿದ್ಯಾರ್ಥಿನಿ
ಪೋಟೋ7 : ಶೋಭಾ ಎಚ್ .ಬಿ
ಬಾಕ್ಸ್ 8
ನಾನು ಕಳೆದ 5 ವರ್ಷಗಳಿಂದ ಇದೇ ಕಾಲೇಜಿನಲ್ಲಿವಿದ್ಯಾಭ್ಯಾಸ ಮುಂದುವರಿಸಿಕೊಂಡು ಬರುತ್ತಿದ್ದು, ಕಳೆದ 4ನೇ ಸೆಮಿಸ್ಟರ್ ನಲ್ಲಿಶೇ.92.26 ರಷ್ಟು ಅಂಕಗಳನ್ನು ಪಡೆದಿದ್ದೇನೆ. ನಮ್ಮ ಕಾಲೇಜು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮರ್ಪಕ ಅವಕಾಶಗಳನ್ನು ಒದಗಿಸುವುದರ ಜತೆಗೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಭಾಗವಹಿಸಲು ಪ್ರೋತ್ಸಾಹ ನೀಡುತ್ತಿದೆ.ಮಹಿಳಾ ಶಿಕ್ಷಣಕ್ಕೆ ಹೆಚ್ಚು ಆಧ್ಯತೆ ನೀಡಿರುವುದು ನಮ್ಮ ತಾಲೂಕಿನ ಹೆಮ್ಮೆಯ ಸಂಸ್ಥೆಯಾಗಿದೆ.
- ಮಹಾಲಕ್ಷ್ಮಿ.ಎಂ ತೃತೀಯ ಬಿಕಾಂ
ಪೋಟೋ 8 : ಮಹಾಲಕ್ಷ್ಮಿ.ಎಮ್ ತೃತೀಯ ಬಿಕಾಂ
ಬಾಕ್ಸ್ 9
ಸುಸಜ್ಜಿತ ಲ್ಯಾಬ್ ಸೌಲಭ್ಯ ಮತ್ತು ಪ್ರಾಯೋಗಿಕ ತರಬೇತಿಯ ಮೂಲಕ ತಾಂತ್ರಿಕ ಜ್ಞಾನವನ್ನು ಗಾಢವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೃತಕ ಬುದ್ಧಿಮತ್ತೆ, ಹೊಸ ತಂತ್ರಜ್ಞಾನಗಳ ಟೆಕ್ ಕ್ಲಾಸ್ ಗಳು ಮತ್ತು ಹೊರಗಿನ ತಜ್ಞರ ತರಗತಿಗಳು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ. ನಮ್ಮ ಬಿಸಿಎ ವಿಭಾಗವು ಕಲಿಕೆ, ಕೌಶಲಾಭಿವೃದ್ಧಿ ಮತ್ತು ಭವಿಷ್ಯದ ಉದ್ಯೋಗ ಸಿದ್ಧತೆಗೆ ಅತ್ಯುತ್ತಮವಾದ ಸಕಾರಾತ್ಮಕ ವಾತಾವರಣ ಒದಗಿಸುತ್ತದೆ.
-ನವ್ಯಶ್ರೀ ಎ.ಎಂ, ಬಿಸಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿ
ಪೋಟೋ9 : ನವ್ಯಶ್ರೀ
ಬಾಕ್ಸ್ 10
ಪದವಿ ಶಿಕ್ಷಣ ಪಡೆದ ನಾನು ಶೇ. 87.76 ಅಂಕ ಪಡೆದು ಸಾಧನೆ ಮಾಡಿದೆ. ಪ್ರಸ್ತುತ ಇದೇ ಕಾಲೇಜಿನಲ್ಲಿಎಂಕಾಂ ಪ್ರಥಮ ವರ್ಷದಲ್ಲಿನನ್ನ ವ್ಯಾಸಂಗವನ್ನು ಮುಂದುವರಿಸುತ್ತಿದ್ದೇನೆ. ಈ ಕಾಲೇಜಿನಲ್ಲಿಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ನೇಹಪೂರ್ಣವಾಗಿ ಪಾಠಗಳನ್ನು ಬೋಧಿಸುತ್ತಾರೆ. ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಾರೆ. ಸುರಕ್ಷಿತ ಪರಿಸರ ಹಾಗೂ ಶಿಸ್ತಿನ ವಾತಾವರಣ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲಕರವಾಗಿದೆ.
- ಸಿರಿಗೌರಿ ಎಂಕಾಂ ವಿದ್ಯಾರ್ಥಿ
ಪೋಟೋ 10 : ಸಿರಿಗೌರಿ ಪೋಟೋ
ಬಾಕ್ಸ್ 11
ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಕಾರಣ ಬಿ.ಕಾಂಗೆ ಉಚಿತ ಪ್ರವೇಶ ಪಡೆದಿದ್ದೇನೆ. ವಾರಕ್ಕೆ ಒಂದು ಬಾರಿ ಕ್ರೀಡಾ ಅವಧಿ ಮತ್ತು ಪ್ರತಿ ತಿಂಗಳು ಎರಡು ಬಾರಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇವು ವಿದ್ಯಾರ್ಥಿನಿಯರ ಪ್ರತಿಭೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿ ಆಗಿವೆ.
- ಚಂದನ ಕೆ.ಆರ್ ದ್ವಿತೀಯ ಬಿಕಾಂ
ಪೋಟೋ11 : ಚಂದನ ಕೆ.ಆರ್
ಬಾಕ್ಸ್ 12
ನಾನು ಐದು ವರ್ಷಗಳಿಂದ ಈ ಕಾಲೇಜಿನಲ್ಲಿವಿದ್ಯಾಭ್ಯಾಸ ಮಾಡುತ್ತಿದ್ದೇನೆ. 4ನೇ ಸೆಮಿಸ್ಟರ್ ನಲ್ಲಿ ಶೇ.87.7ರಷ್ಟು ಅಂಕ ಪಡೆದಿದ್ದೇನೆ. ಪ್ರೊಫೇಷನಲ್ ಕೋರ್ಸ್ ಗಳತ್ತ ನನಗೆ ವಿಶೇಷ ಆಸಕ್ತಿ ಇರುವುದರಿಂದ, ಶಿಕ್ಷಕರ ಮಾರ್ಗದರ್ಶನ ಮತ್ತು ಸಹಕಾರದಿಂದ ನಾನಾ ಪರೀಕ್ಷೆಯಲ್ಲಿಯಶಸ್ವಿಯಾಗಿ ಉತ್ತೀರ್ಣಗೊಂಡಿದ್ದೇನೆ.
- ಮೋನಿಕಾ ತೃತೀಯ ಬಿಕಾಂ
ಪೋಟೋ12 : ಮೋನಿಕಾ ಪೋಟೋ
ಬಾಕ್ಸ್ 13
ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೂ 20 ವರ್ಷಗಳಿಂದ ಬಸವೇಶ್ವರ ಸಂಸ್ಥೆಯಲ್ಲಿವ್ಯಾಸಂಗ ಮಾಡುತ್ತಿದ್ದೇನೆ. ಈ ಸಂಸ್ಥೆಯು ಶಿಕ್ಷಣ ಮಾತ್ರ ಕೊಡದೆ ನನಗೆ ಸಂಸ್ಕಾರವನ್ನು ನೀಡಿದೆ. ನನ್ನ ವಿದ್ಯಾಭ್ಯಾಸಕ್ಕೆ ಅಡಿಪಾಯ ಹಾಕಿದ ಈ ಸಂಸ್ಥೆಯಲ್ಲಿಯೇ ನನ್ನ ವೃತ್ತಿ ಜೀವನವನ್ನು ಪ್ರಾರಂಭಿಸುವ ಆಶಯವನ್ನು ಇಟ್ಟುಕೊಂಡಿದ್ದೇನೆ. ನನ್ನ ಸಂಸ್ಥೆ ನನ್ನ ಹೆಮ್ಮೆ ಎನ್ನುವ ಹಾಗೆ ಈ ಸಂಸ್ಥೆಗೆ ಸದಾ ಚಿರಋುಣಿಯಾಗಿರುತ್ತೇನೆ.
- ಪೂರ್ಣಿಮಾ ಎಲ್ , 20ವರ್ಷ ಒಂದೇ ಸಂಸ್ಥೆಯಲ್ಲಿಶಿಕ್ಷಣ ಪಡೆದ ವಿದ್ಯಾರ್ಥಿನಿ
ಪೋಟೋ13 : ಪೂರ್ಣಿಮಾ
ಬಾಕ್ಸ್ 14
ನಾನು ಬಿಸಿಎ 4ನೇ ಸೆಮಿಸ್ಟರ್ ತನಕ ಶೇ.89.43ರಷ್ಟು ಅಂಕಗಳನ್ನು ಗಳಿಸಿದ್ದೇನೆ. ಗ್ರಂಥಾಲಯದಲ್ಲಿಲಭ್ಯವಿರುವ ಪುಸ್ತಕಗಳು ಮತ್ತು ಉತ್ತಮ ಲ್ಯಾಬ್ ಸೌಲಭ್ಯಗಳು ನನ್ನ ಕಲಿಕೆಯನ್ನು ಇನ್ನಷ್ಟು ಬಲಪಡಿಸಿವೆ. ಕಾಲೇಜಿನಲ್ಲಿನಡೆಯುವ ಸಹಪಠ್ಯ ಚಟುವಟಿಕೆಗಳು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ.
ಧಿ ಭವ್ಯ, ಬಿಸಿಎ ತೃತೀಯ ವರ್ಷದ ವಿದ್ಯಾರ್ಥಿನಿ
ಪೋಟೋ 14 : ಭವ್ಯ ಬಿಸಿಎ
ಬಾಕ್ಸ್ 15
ನಮ್ಮ ಪದವಿ ಕಾಲೇಜಿನಲ್ಲಿಗ್ರಾಮೀಣ ಭಾಗದ ಹೆಣ್ಣುಮಕ್ಕಳು ಬಿಎ, ಬಿಕಾಂ, ಬಿಸಿಎ ಹಾಗೂ ಎಂಕಾಂ ಶಿಕ್ಷಣ ಪಡೆಯುತ್ತಿದ್ದಾರೆ. ಬಿಕಾಂ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜತೆ ಸಿಎ, ಸಿಎಸ್ , ಸಿಎಂಎ ಕೋಚಿಂಗ್ ಹಾಗೂ ಬಿಸಿಎ ವಿದ್ಯಾರ್ಥಿಗಳಿಗೆ ಎಐ, ಎಂಎಲ್ , ಡಿಬಿಎಂಎಸ್ ಹಾಗೂ ಬಿಎ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಮಾರ್ಗದರ್ಶನ ನೀಡಲಾಗುತ್ತಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿವಿದ್ಯಾರ್ಥಿಗಳು ಸಾಧನೆ ಮಾಡಿದ್ದು, ಸಂತೋಷವಾಗಿದೆ. ಶ್ರೀಗಳ ಮಾರ್ಗದರ್ಶನ, ಪೋಷಕರು, ಶಿಕ್ಷಕರ ಸಹಕಾರದಿಂದ ಅತ್ಯುತ್ತಮ ಫಲಿತಾಂಶ ನಮ್ಮದಾಗಿದೆ.
- ಡಾ.ರುದ್ರಮಹೇಶ್ , ಪ್ರಾಂಶುಪಾಲರು, ಶ್ರೀ ಬಸವೇಶ್ವರ ಪ್ರಥಮ ದರ್ಜೆ ಕಾಲೇಜು
ಪೋಟೋ15 : ಡಾ.ರುದ್ರಮಹೇಶ್
ಪೋಟೋ 16 : ಕಾಲೇಜು ಪೋಟೋ
ಪೋಟೋ 17: ಪದವಿ ಪ್ರದಾನ ಸಮಾರಂಭ

