ಸರಕಾರಕ್ಕೆ ನ್ಯಾಯಾಂಗದಿಂದಲೇ ಕಪಾಳಮೋಕ್ಷ: ಆರ್ .ಅಶೋಕ್

Contributed byshashidhar.nandikal@timesgroup.com|Vijaya Karnataka

ರಾಜ್ಯ ಸರಕಾರದ ನಿರ್ಲಕ್ಷ್ಯಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯಕ್ಕೆ ಐತಿಹಾಸಿಕ ಅಪಮಾನ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಸರಕಾರದ ವಿಳಂಬ ನೀತಿಯಿಂದ ನ್ಯಾಯಾಂಗ ವ್ಯವಸ್ಥೆ ಕುಸಿದಿದೆ. ಬಾಕಿ ಪ್ರಕರಣಗಳು ಹೆಚ್ಚಾಗಿದ್ದರೂ ಸರಕಾರ ಗಮನ ಹರಿಸುತ್ತಿಲ್ಲ. ನ್ಯಾಯಾಧೀಶರ ನೇಮಕದಲ್ಲಿ ವಿಳಂಬ ಮಾಡಿ ನ್ಯಾಯಾಂಗದ ಸ್ವಾಯತ್ತತೆಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ನ್ಯಾಯಾಂಗದ ಬೆನ್ನೆಲುಬು ಮುರಿಯುವ ಯತ್ನವಾಗಿದೆ.

supreme court criticism against state government performance r ashok

ಬೆಂಗಳೂರು: ಸಾರ್ವಜನಿಕ ವೇದಿಕೆಯಲ್ಲಿದೇಶದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳೇ ರಾಜ್ಯದ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ಬಗ್ಗೆ ಚಾಟಿ ಬೀಸಿರುವುದು ರಾಜ್ಯ ಸರಕಾರಕ್ಕೆ ಮಾತ್ರವಲ್ಲ. ಇಡೀ ಕರ್ನಾಟಕಕ್ಕೆ ಆದ ಐತಿಹಾಸಿಕ ಅಪಮಾನ ಎಂದು ವಿಧಿಧಾಧಿನಧಿಸಭೆ ಪ್ರತಿಪಕ್ಷದ ನಾಯಕ ಆರ್ .ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿಅಭಿಪ್ರಾಯ ಹಂಚಿಕೊಂಡಿರುವ ಅವರು,‘‘ಸಿದ್ದರಾಮಯ್ಯನವರೇ, ನಿಮ್ಮ ಸಮ್ಮುಖದಲ್ಲೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯವರು ಸರಕಾರದ ವಿಳಂಬ ನೀತಿಯನ್ನು ಖಂಡಿಸಿದ್ದಾರೆ ಎಂದರೆ ನಿಮ್ಮ ಆಡಳಿತದ ದಕ್ಷತೆ ಯಾವ ಪಾತಾಳಕ್ಕೆ ಕುಸಿದಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಇದು ಕೇವಲ ಟೀಕೆಯಲ್ಲ, ಸಂವಿಧಾನದ ಹೆಸರಲ್ಲಿನೀವು ನಡೆಸುತ್ತಿರುವ ದುರಾಡಳಿತಕ್ಕೆ ನ್ಯಾಯಾಂಗವೇ ನೀಡಿದ ಕಪಾಳಮೋಕ್ಷ,’’ ಎಂದು ಆರೋಪಿಸಿದ್ದಾರೆ.

‘‘ರಾಜ್ಯದಲ್ಲಿನ್ಯಾಯಾಂಗ ವ್ಯವಸ್ಥೆಯನ್ನು ಉಸಿರುಗಟ್ಟಿಸುತ್ತಿರುವ ನಿಮ್ಮ ನಡೆಯಿಂದಾಗಿ ಸಾಕ್ಷಾತ್ ನ್ಯಾಯದೇವತೆಯೇ ಕಣ್ಣೀರು ಹಾಕುವಂತಾಗಿದೆ. 2023ರಲ್ಲಿ17 ಲಕ್ಷವಿದ್ದ ಬಾಕಿ ಪ್ರಕರಣಗಳು ಈಗ 22 ಲಕ್ಷದ ಗಡಿ ದಾಟಿದ್ದರೂ ನಿಮ್ಮ ಸರಕಾರ ಕುಂಭಕರ್ಣ ನಿದ್ರೆಯಲ್ಲಿಮುಳುಗಿದೆ. ನ್ಯಾಯಾಧೀಶರು ಹಾಗೂ ಸರಕಾರಿ ಅಭಿಯೋಜಕರ ನೇಮಕ ಪ್ರಸ್ತಾವನೆಗಳನ್ನು ಪದೇ ಪದೆ ಕಡಿತಗೊಳಿಸುವ ಅಥವಾ ಕಸದ ಬುಟ್ಟಿಗೆ ಎಸೆಯುವ ಮೂಲಕ ನೀವು ನ್ಯಾಯಾಂಗದ ಸ್ವಾಯತ್ತತೆಯನ್ನು ಹತ್ತಿಕ್ಕಲು ಸಂಚು ರೂಪಿಸುತ್ತಿದ್ದೀರಾ? ಲಕ್ಷಾಂತರ ಜನ ಸಾಮಾನ್ಯರು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತಿ ಅಲೆಯುತ್ತಿದ್ದರೆ, ನಿಮ್ಮ ಸರಕಾರ ನ್ಯಾಯಾಂಗವನ್ನು ದುರ್ಬಲಗೊಳಿಸಿ ಜನರಿಗೆ ನ್ಯಾಯವನ್ನು ನಿರಾಕರಿಸುತ್ತಿದೆ,’’ ಎಂದು ಆಪಾದಿಸಿದ್ದಾರೆ.

‘‘ನ್ಯಾಯ ವಿಳಂಬ ಎಂದರೆ ಅದು ನ್ಯಾಯ ನಿರಾಕರಣೆಯೇ ಸರಿ ಎನ್ನುವ ಸತ್ಯ ನಿಮಗೂ ತಿಳಿದಿದೆ. ಸಂವಿಧಾನದ ಸಂರಕ್ಷಕರು ಎಂದು ಬೊಬ್ಬೆ ಹೊಡೆಯುವ ನೀವು, ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ನ್ಯಾಯಾಂಗದ ಬೆನ್ನೆಲುಬು ಮುರಿಯಲು ಹೊರಟಿರುವುದು ಖಂಡನೀಯ,’’ ಎಂದಿಧಿದ್ದಾಧಿರೆ.