‘ನೀತಿ ಮೀರಿದ ತಂತ್ರಜ್ಞಾನ ಅಸಮಾನತೆ ಹೆಚ್ಚಿಸುತ್ತದೆ’

Contributed byBeeralinge gowda|Vijaya Karnataka

ತಂತ್ರಜ್ಞಾನದ ಅತಿಯಾದ ಬೆಳವಣಿಗೆಯನ್ನು ನಿಯಂತ್ರಿಸದಿದ್ದರೆ ಅಸಮಾನತೆ ಮತ್ತು ಸಾಮಾಜಿಕ ವಿಘಟನೆ ಹೆಚ್ಚಾಗುತ್ತದೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ವೈಜ್ಞಾನಿಕ ಪ್ರಗತಿಯನ್ನು ಕೇವಲ ಆರ್ಥಿಕ ಮಾನದಂಡದಲ್ಲಿ ಅಳೆಯದೆ ವಿಶಾಲ ದೃಷ್ಟಿಕೋನದಲ್ಲಿ ಮೌಲ್ಯಮಾಪನ ಮಾಡಬೇಕು. ಜಾಗತಿಕ ಸಂಘರ್ಷಗಳು ಅಸಮತೋಲನ ಸೃಷ್ಟಿಸುತ್ತಿವೆ. ಕುಟುಂಬ, ಸಮಾಜ ಮತ್ತು ರಾಷ್ಟ್ರದ ಭದ್ರತೆ ಮುಖ್ಯ.

inequality encountered in the wake of excessive technology

ವಾಷಿಂಗ್ಟನ್ : ‘‘ತಂತ್ರಜ್ಞಾನ ಆಧರಿತ ಬೆಳವಣಿಗೆಯನ್ನು ನಿಯಂತ್ರಿಸದೇ ಹೋದರೆ ಅಸಮಾನತೆ, ಸಾಮಾಜಿಕ ವಿಘಟನೆಗೆ ದಾರಿಯಾಗುತ್ತದೆ. ನಾವೀನ್ಯತೆ ಪ್ರಗತಿಯ ಬದಲು ಅಸ್ಥಿರತೆಗೆ ಮುನ್ನುಡಿಯಾಗುವ ಅಪಾಯವಿದೆ,’’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿಆಯೋಜಿಸಿದ್ದ ವಿಜ್ಞಾನ ಸಮ್ಮೇಳದಲ್ಲಿಮಾತನಾಡಿದ ಹೊಸಬಾಳೆ, ‘‘ವೈಜ್ಞಾನಿಕ ಪ್ರಗತಿಯನ್ನು ಕೇವಲ ಆರ್ಥಿಕ ಮಾನದಂಡದಲ್ಲಿಅಳೆಯದೆ ಸಮಾನ ಆರ್ಥಿಕತೆ, ನೀತಿಶಾಸ್ತ್ರ ತತ್ವ ಒಳಗೊಂಡ ವಿಶಾಲ ದೃಷ್ಟಿಕೋನದಲ್ಲಿಮೌಲ್ಯಮಾಪನ ಮಾಡಬೇಕು. ತಂತ್ರಜ್ಞಾನದ ಅತಿಯಾದ ಮುಂದುವರಿಕೆ ಸಮಾಜದಲ್ಲಿಅಸಮಾನತೆ ಹೆಚ್ಚಿಸುತ್ತದೆ,’’ ಎಂದು ವಿಶ್ಲೇಷಿಸಿದರು.

‘‘ಜಗತ್ತು ಇಂದು ಹಲವು ಭೌಗೋಳಿಕ ಹಾಗೂ ರಾಜಕೀಯ ಸಂಘರ್ಷದ ಕುಲುಮೆಯಲ್ಲಿಬೇಯುತ್ತಿದೆ. ಹೆಚ್ಚುತ್ತಿರುವ ಬಿಕ್ಕಟ್ಟುಗಳು ಜಾಗತಿಕ ಅಸಮತೋಲನ ಸೃಷ್ಟಿಸುತ್ತಿದ್ದು, ಸಮಾಜ ಹಾಗೂ ಕುಟುಂಬಗಳ ವಿಘಟನೆಗೂ ದಾರಿ ಮಾಡಿಕೊಡುತ್ತಿದೆ. ಕುಟುಂಬ ಸುರಕ್ಷಿತವಾಗಿದ್ದರೆ ಸಮಾಜ ಸುರಕ್ಷಿತ, ಸಮಾಜ ಸದೃಢವಾಗಿದ್ದರೆ, ರಾಷ್ಟ್ರ ಸುಭದ್ರವಾಗಿರುತ್ತದೆ,’’ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದರು.