ಕಿಂಗ್ಸ್ ಅಜೇಯ ದಾಖಲೆ ಓಟ

Contributed bymanjunath.gowda@timesgroup.com|Vijaya Karnataka

ಪಂಜಾಬ್‌ ಕಿಂಗ್ಸ್‌ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ 54 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಪ್ರಿಯಾಂಶ್‌ ಆರ್ಯ ಮತ್ತು ಕೂಪರ್‌ ಕನೋಲಿ ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಪಂಜಾಬ್‌ 254 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಲಖನೌ ತಂಡ 200 ರನ್‌ಗಳಿಗೆ ಸೀಮಿತವಾಯಿತು. ಈ ಗೆಲುವಿನೊಂದಿಗೆ ಪಂಜಾಬ್‌ ಕಿಂಗ್ಸ್‌ ಅಜೇಯ ದಾಖಲೆಯೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.

kings set new record in ipl success with 254 runs

ಮುಲ್ಲಾನ್ ಪುರ: ಪ್ರಿಯಾಂಶ್ ಆರ್ಯ(93; 37 ಎಸೆತ, 4 ಫೋರ್ , 9 ಸಿಕ್ಸರ್ ) ಮತ್ತು ಕೂಪರ್ ಕನೋಲಿ (87; 46 ಎಸೆತ, 8 ಫೋರ್ , 7 ಸಿಕ್ಸರ್ ) ಅವರ ಮಿಂಚಿನ ಅರ್ಧ ಶತಕಗಳ ಸಾಹಸದಿಂದ ಪಂಜಾಬ್ ಕಿಂಗ್ಸ್ ಐಪಿಎಲ್ 29ನೇ ಪಂದ್ಯದಲ್ಲಿ54 ರನ್ ಗಳಿಂದ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಜಯಭೇರಿ ಬಾರಿಸಿತು. ಇದರೊಂದಿಗೆ ಕಿಂಗ್ಸ್ , ಅಜೇಯ ದಾಖಲೆಯೊಂದಿಗೆ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿತು.

ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಭಾನುವಾರ ನಡೆದ ಪಂದ್ಯದಲ್ಲಿಪಂಜಾಬ್ 7 ವಿಕೆಟ್ ನಷ್ಟಕ್ಕೆ 254 ರನ್ ಪೇರಿಸಿತು. ಇದು ಪಂಜಾಬ್ ನ 2ನೇ ಗರಿಷ್ಠ ಮೊತ್ತ. 2024ರಲ್ಲಿಕೋಲ್ಕೊತಾ ವಿರುದ್ಧ 2 ವಿಕೆಟ್ ಗೆ 262 ರನ್ ಗಳಿಸಿರುವುದು ತಂಡದ ದಾಖಲೆ. ಕಠಿಣ ಗುರಿ ಬೆನ್ನಟ್ಟಿದ ಲಖನೌ, 20 ಓವರ್ ಗಳಲ್ಲಿ5 ವಿಕೆಟ್ ಗೆ 200 ರನ್ ಗಳಿಸಲಷ್ಟೇ ಶಕ್ತಗೊಂಡಿತು. ಮಾಷ್ ರ್ (40), ಪಂತ್ (43) ಮತ್ತು ಮಾಕ್ರ್ರಮ್ (42) ಹೋರಾಟ ಮಾಡಿದರೂ ತಂಡವನ್ನು ಸತತ 3ನೇ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಇದಕ್ಕೂ ಮುನ್ನ ಮೊದಲ 6 ಓವರ್ ಗಳಲ್ಲಿ63 ರನ್ ಗಳಿಸಿದ ಪಂಜಾಬ್ , ಕನೋಲಿ ಮತ್ತು ಆರ್ಯ ಅವರ ಅಬ್ಬರದ ಬ್ಯಾಟಿಂಗ್ ನಿಂದ 7ರಿಂದ 11 ಓವರ್ ಗಳಲ್ಲಿ66 ರನ್ ಕಲೆಹಾಕಿತು. ಈ ಜೋಡಿ 2ನೇ ವಿಕೆಟ್ ಗೆ ಕೇವಲ 80 ಎಸೆತಗಳಲ್ಲಿ182 ರನ್ ಪೇರಿಸಿ ತಂಡದ ದಾಖಲೆಯ ಮೊತ್ತಕ್ಕೆ ವೇದಿಕೆ ನಿರ್ಮಿಸಿತು. ಲಖನೌ ಪರ ಪ್ರಿನ್ಸ್ ಮತ್ತು ಸಿದ್ಧಾಥ್ ರ್ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಪಂಜಾಬ್ ಕಿಂಗ್ಸ್ : 20 ಓವರ್ ಗಳಲ್ಲಿ7 ವಿಕೆಟ್ ಗೆ 254(ಪ್ರಿಯಾಂಶ್ 93, ಕನೋಲಿ 87; ಸ್ಟೋಯ್ನಿಸ್ 29; ಪ್ರಿನ್ಸ್ 25ಕ್ಕೆ 2, ಸಿದ್ಧಾಥ್ ರ್ 35ಕ್ಕೆ 2).

ಲಖನೌ ಸೂಪರ್ ಜಯಂಟ್ಸ್ : 20 ಓವರ್ ಗಳಲ್ಲಿ5 ವಿಕೆಟ್ ಗೆ 200(ಮಾಷ್ ರ್ 40, ಪಂತ್ 43, ಮಾಕ್ರ್ರಮ್ 42; ಜಾನ್ಸೆನ್ 37ಕ್ಕೆ 2).