ಚಿತ್ರ: ಕೆ.ನೀಲಾ ಚಿತ್ರ ಬಳಸಿ
**
ಚುನಾವಣಾ ಆಯೋಗಕ್ಕೆ ಸಿಪಿಐಎಂ ಪ್ರಧಾನ ಕಾರ್ಯದರ್ಶಿಗೆ ಪತ್ರ
ಮೋದಿಯಿಂದ ನೀತಿ ಸಂಹಿತೆ ಉಲ್ಲಂಘನೆ
ವಿಕ ಸುದ್ದಿಲೋಕ ಕಲಬುರಗಿ
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಮತ್ತು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆಗಳಿಗೆ ಚುನಾವಣೆಗಳು ಹತ್ತಿರವಾಗುತ್ತಿರುವಾಗ ಪ್ರಧಾನಿ ತಮ್ಮ ಪ್ರಸಾರ ಭಾಷಣದ ಮೂಲಕ ದೂರದರ್ಶನವನ್ನು ರಾಜಕೀಯ ಸಂದೇಶ ಪ್ರಚಾರಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದು, ಚುನಾವಣೆ ಆಯೋಗ ಕ್ರಮಕೈಗೊಳ್ಳಬೇಕೆಂದು ಸಿಪಿಐಎಂ ದೂರು ಸಲ್ಲಿಸಿದೆ.
ಈ ಬಗ್ಗೆ ಪ್ರಕಟಣೆ ನೀಡಿ, ಚುನಾವಣೆಯ ಸಮಯದಲ್ಲಿರಾಜಕೀಯ ಸಂದೇಶಕ್ಕಾಗಿ ಸಾರ್ವಜನಿಕ ಪ್ರಸಾರ ಸಂಸ್ಥೆ ಬಳಸುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಸಿಪಿಐಎಂ ಪ್ರ.ಕಾರ್ಯದರ್ಶಿ ಎಂ.ಎ.ಬೇಬಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಸಿಪಿಐಎಂ ಕಾರ್ಯದರ್ಶಿ ಕೆ.ನೀಲಾ ತಿಳಿಸಿದ್ದಾರೆ.
ಪತ್ರದಲ್ಲಿಇದು ಒಂದು ರಾಜಕೀಯ ಭಾಷಣ ಮಾಡಲು ಸಾರ್ವಜನಿಕ ಪ್ರಸಾರ ಮಾಧ್ಯಮವಾದ ದೂರದರ್ಶನವನ್ನು ಪ್ರಧಾನ ಮಂತ್ರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಮಾದರಿ ನೀತಿ ಸಂಹಿತೆ(ಎಂಸಿಸಿ)ಯ ಗಂಭೀರ ಉಲ್ಲಂಘನೆಯಾಗಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಶಾಸಕಾಂಗಗಳಿಗೆ ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ಸಹ ಪ್ರಧಾನಮಂತ್ರಿ ಏ.18 ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಭಾಷಣದ ವಿಷಯ, ಧ್ವನಿ ಮತ್ತು ಸಂದೇಶ ನೀಡಿಕೆಯನ್ನು ಯಾವುದೇ ರೀತಿಯಲ್ಲಿಕಲ್ಪಿಸಿಕೊಂಡರೂ, ಸರಕಾರಿ ಸಂವಹನ ಎಂದು ಕರೆಯಲಾಗುವುದಿಲ್ಲ. ಇದು ವಿಪಕ್ಷಗಳನ್ನು ಗುರಿಯಾಗಿಸಿಕೊಂಡ - ಅವುಗಳಲ್ಲಿಹಲವನ್ನು ಹೆಸರಿಸಿರುವ - ಮತ್ತು ಆಳುವ ಪಕ್ಷದ ಪರವಾಗಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮತದಾರರು ಸೇರಿ ಸಾರ್ವಜನಿಕ ಅಭಿಪ್ರಾಯ ಪ್ರಭಾವಿಸಲು ಪ್ರಯತ್ನಿಸಿರುವ ಎದ್ದು ಕಾಣುವ ರಾಜಕೀಯವಿದೆ ಎಂದು ಪತ್ರದಲ್ಲಿತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.

