(ವಿಕ ಎಐ ಲೋಕ)

Contributed byKeerthi Kolgar|Vijaya Karnataka

ಡಾಟಾ ಸೆಂಟರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಳಸುತ್ತಿವೆ. ಗೂಗಲ್‌ನಂತಹ ಕಂಪನಿಗಳು ದೊಡ್ಡ ಪ್ರಮಾಣದ ನೀರನ್ನು ಬಳಸುತ್ತಿವೆ. ಆದರೆ, ಎಐ ತಂತ್ರಜ್ಞಾನವು ಕಾರ್ಖಾನೆಗಳಲ್ಲಿ ವ್ಯರ್ಥವಾಗುವ ನೀರನ್ನು ಉಳಿಸಲು ಸಹಾಯ ಮಾಡುತ್ತದೆ. ನೀರಿನ ಬಳಕೆಯ ಮಾದರಿಗಳನ್ನು ರಚಿಸಿ, ಎಲ್ಲಿ, ಎಷ್ಟು, ಯಾವಾಗ ನೀರು ಉಪಯೋಗವಾಗುತ್ತದೆ ಎಂಬುದನ್ನು ತಿಳಿಯಬಹುದು. ಇದರಿಂದ ನೀರಿನ ಪೋಲಾಗುವಿಕೆಯನ್ನು ತಡೆಯಬಹುದು.

data centers the water consumption dilemma and alternative technologies

ಡಾಟಾ ಸೆಂಟರ್ ಗಳು ನೀರನ್ನು ರಾಕ್ಷಸನ ಹಾಗೆ ಕುಡಿಯುತ್ತವೆ ಎಂಬುದು ನಿಜ. 2024ರಲ್ಲಿಗೂಗಲ್ - ತನ್ನ ಡಾಟಾ ಸೆಂಟರ್ ಗಳು 6.1 ಶತಕೋಟಿ ಗ್ಯಾಲನ್ ತಾಜಾ ನೀರನ್ನು ಬಳಕೆ ಮಾಡಿರುವುದಾಗಿ ಹೇಳಿದೆ. ಓಪನ್ ಎಐ ಡಾಟಾ ಸೆಂಟರ್ ಇದಕ್ಕೆ ಹೊರತಾಗಿಲ್ಲ. ನಾವು ಇಲ್ಲಿಕೂತು ನೀಡುವ ಒಂದೊಂದು ಪ್ರಾಮ್ಟ… ಕೂಡ ಅಲ್ಲಿಒಂದಿಷ್ಟು ನೀರಿನ ಬಳಕೆಗೆ ಕಾರಣವಾಗುತ್ತದೆ; ವಿಡಿಯೊ, ಆಡಿಯೊ ಜನರೇಷನ್ನಿಂದ ಅದು ಇನ್ನಷ್ಟು ಹೆಚ್ಚು. ಆದರೆ, ಎಐ ಬಳಕೆಯ ಇನ್ನೊಂದು ಮುಖವೂ ಇದೆ. ಇಂದು ಕಾರ್ಖಾನೆಗಳಲ್ಲಿಪೋಲಾಗುತ್ತಿರುವ ಬಿಲಿಯನ್ ಲೀಟರ್ ಗಟ್ಟಲೆ ನೀರನ್ನು ಉಳಿಸಬಹುದು. ಇದಕ್ಕೆ ಉದಾಹರಣೆಗಾಗಿ ಹಲವಾರು ಇಂಡಸ್ಟ್ರಿಯಲ್ ಅಪ್ಲಿಕೇಶನ್ ಗಳಿವೆ. ನೀರಿನ ಬಳಕೆಯ ಮಾದರಿಯನ್ನು ಸೃಷ್ಟಿಸಿ; ಎಲ್ಲಿ, ಎಷ್ಟು, ಯಾವಾಗ, ಹೇಗೆ ನೀರು ಉಪಯೋಗವಾಗುತ್ತದೆ ಎನ್ನುವ ಮಾಹಿತಿಯು ನೇರಪ್ರಸಾರವಾಗುತ್ತಿದ್ದರೆ ಅದನ್ನು ಪೋಲಾಗದಂತೆ ತಡೆಯುವುದು ಸಾಧ್ಯ. ಇದಕ್ಕೆ ಎಐ ಹಾಗೂ ಡಿಜಿಟಲ್ ಟ್ವಿನ್ ಎಂಬ ಎರಡೂ ತಂತ್ರಜ್ಞಾನಗಳು ಬೇಕು. ್ಞ ವಿಕ್ರಂ ಜೋಶಿ

ಎಐ ವಿಶ್ಲೇಷಕರು