ಮಕ್ಕಳಲ್ಲಿಕ್ರಿಯಾಶೀಲತೆ ಬೆಳೆಸಲು ಬೇಸಿಗೆ ಬೆಸುಗೆ ಸಹಕಾರಿ
ವಿಕ ಸುದ್ದಿಲೋಕ ಶೃಂಗೇರಿ
ರಜಾ ದಿನವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಲು ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿಏ.10ರಿಂದ ಮೇ 29ರವರೆಗೂ ಪ್ರತಿ ದಿನವೂ ವಿಭಿನ್ನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮೆಣಸೆ ಗ್ರಂಥಪಾಲಕ ಶ್ರೀನಿವಾಸ್ ಹೇಳಿದರು.
ತಾಲೂಕಿನ ಮೆಣಸೆಯಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿಇತ್ತೀಚೆಗೆ ‘ಬೇಸಿಗೆ ಬೆಸುಗೆ’ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿಮಾತನಾಡಿದರು.
ಮಕ್ಕಳು ಶಾಲೆಯಿಂದ ಹೊರಗೆ ಇರುವಾಗಲೂ ಅವರು ಚಟುವಟಿಕೆಯಿಂದ ಇರುವಂತಾಗಲು ಸರಕಾರ ಈ ಕಾರ್ಯಕ್ರಮ ಏರ್ಪಡಿಸಿದೆ ಎಂದರು.
ಕಂದಾಯ ಇಲಾಖೆ ನಿವೃತ್ತ ನೌಕರ ಶ್ರೀನಿವಾಸ ಅವದಾನಿ ಮಾತನಾಡಿ, ಸ್ಥಳೀಯವಾಗಿ ಗ್ರಂಥಾಲಯದಲ್ಲಿಮಕ್ಕಳಿಗೆ ಸೌಲಭ್ಯ ದೊರಕುತ್ತಿರುವುದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇತರ ಮಕ್ಕಳೊಂದಿಗೆ ಬೆರತು ಆಟದೊಂದಿಗೆ ಕಲಿಯಬಹುದಾಗಿದೆ. ಪುಸ್ತಕ, ದಿನಪತ್ರಿಕೆಯನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಪಂಚಾಯಿತಿ ನೋಡಲ್ ಅಧಿಕಾರಿ ಎ.ಕೆ.ಪಾಟೀಲ್ , ಗ್ರಾಮ ಪಂಚಾಯಿತಿಯ ದಿಲೀಪ, ಅನಿತಾ, ಅಶೋಕ್ , ನಾಗರಾಜ್ , ಲಿಂಗಪ್ಪ, ರಾಘು ಹಾಗೂ ಇತರರು ಇದ್ದರು.
11ಶ್ರೀ3
ಶೃಂಗೇರಿ ತಾಲೂಕಿನ ಮೆಣಸೆ ಗ್ರಂಥಾಲಯದಲ್ಲಿಬೇಸಿಗೆ ಬೆಸುಗೆ ಕಾರ್ಯಕ್ರಮವನ್ನು ಶ್ರೀನಿವಾಸ ಅವದಾನಿ ಉದ್ಘಾಟಿಸಿದರು.

